»   » ನಮಿತಾ, ರಿಷಿಕಾ ಬೆಂಕಿ ಬಿರುಗಾಳಿ ಆಡಿಯೋ ರಿಲೀಸ್

ನಮಿತಾ, ರಿಷಿಕಾ ಬೆಂಕಿ ಬಿರುಗಾಳಿ ಆಡಿಯೋ ರಿಲೀಸ್

Posted By:
Subscribe to Filmibeat Kannada

ಸೆಕ್ಸಿ ತಾರೆ ನಮತಾ, ಚೆಲುವೆ ರಿಷಿಕಾ ಸಿಂಗ್, ಕಾದಲ್ ಸಂಧ್ಯಾ ಮುಖ್ಯಭೂಮಿಕೆಯಲ್ಲಿರುವ ಬೆಂಕಿ ಬಿರುಗಾಳಿ ಚಿತ್ರದ ಆಡಿಯೋ ರಿಲೀಸ್ ಆಗಿದೆ. ನಟ ಆದಿತ್ಯ, ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಆಡಿಯೋ ಬಿಡುಗಡೆ ಮಾಡಿದರು. ಬಷೀರ್ ಆಕ್ಷನ್, ಕಟ್ ಹೇಳಿರುವ ಚಿತ್ರವಿದು.

ಎಂ ಎಂ ಶ್ರೀಲೇಖ ಅವರ ಸಂಗೀತ ಚಿತ್ರಕ್ಕಿದೆ. ಹಾಂಕಾಂಗ್, ಸಿಂಗಪುರ ಸೇರಿದಂತೆ ಹಲವು ತಾಣಗಳಲ್ಲಿ ಚಿತ್ರೀಕರಣ ನಡೆದಿದೆ. ಬೆಂಗಳೂರಿನಲ್ಲಿ 37 ದಿನಗಳಿಗೂ ಅಧಿಕ ದಿನಗಳ ಕಾಲ ಚಿತ್ರೀಕರಣಗೊಂಡಿದೆ. ಹಿಂದಿಯ ಬಾಸಿತ್ ಚಿತ್ರದ ನಾಯಕ ನಟ.

ಬೆಂಕಿ ಬಿರುಗಾಳಿ' ಎಂಬ ಹೆಸರಿನ ಚಿತ್ರ 26 ವರ್ಷಗಳ ಹಿಂದೆ ತೆರೆಕಂಡಿತ್ತು. ವಿಷ್ಣುವರ್ಧನ್, ಶಂಕರನಾಗ್, ಜಯಂತಿ, ಜಯಮಾಲಾ, ಜೈ ಜಗದೀಶ್ ಮುಂತಾದವರು ಮುಖ್ಯಭೂಮಿಕೆಯಲ್ಲಿದ್ದ ಚಿತ್ರವದು. ಈಗ ಅದೇ ಹೆಸರಿನ ಚಿತ್ರದಲ್ಲಿ ನಮಿತಾ ಹಾಗೂ ರಿಷಿಕಾ ಅಭಿನಯಿಸಿದ್ದಾರೆ. (ಏಜೆನ್ಸೀಸ್)

English summary
The audio of sexy actress Namitha, Rishika Singh, Kaadal Sandhya's lead film Benki Birugali was released on December 23rd. The event took place in Bangalore. M.M. Srilekha has composed the music.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada