ಚಿರಂಜೀವಿ ಗಂಡೆದೆ ಕತರ್ನಾಕ್ ಹಾಡು
ಕೋಟಿ ನಿರ್ಮಾಪಕ ರಾಮು ನಿರ್ಮಿಸುತ್ತಿರುವ ಅದ್ದೂರಿ ಗಂಡೆದೆ ಚಿತ್ರದ ಚಿತ್ರೀಕರಣವು ಈಗ ನಗರದಲ್ಲಿ ಮುಂದುವರೆದಿದೆ. ಚಿತ್ರಕ್ಕಾಗಿ ಡೂ ಸಂಥಿಂಗ್ ಹಂಗೂ ಹಿಂಗೂ ಸೇ ಸಂಥಿಂಗ್ ಹಂಗೂ ಹಿಂಗೂ... ಎಂಬ ಗೀತೆಯನ್ನು ಚಿರಂಜೀವ ಸರ್ಜಾ ಹಾಗೂ ಮೂವತ್ತು ಜನ ಡ್ಯಾನ್ಸರ್ಸ್ ಮೇಲೆ ಹರ್ಷ ನೃತ್ಯ ನಿರ್ದೇಶನದೊಂದಿಗೆ, ಮುಜೀರ್ ಛಾಯಾಗ್ರಹಣದಲ್ಲಿ ಟೋಟಲ್ ಮಾಲ್, ಆಚಾರ್ಯ ಕಾಲೇಜ್, ಬಿಡದಿ ಫಿಲಂಸಿಟಿ ಮತ್ತಿತರ ಕಡೆ ನಿರ್ದೇಶಕ ಅಕುಲ್ ಶಿವ ಚಿತ್ರಿಸಿಕೊಂಡರು.
ಚಿತ್ರವು ಅಂತಿಮ ಹಂತ ತಲುಪಿದ್ದು, ಏಪ್ರಿಲ್ ಅಂತ್ಯದಲ್ಲಿ ರಾಜ್ಯಾದ್ಯಂತ ತೆರೆಕಾಣಲಿದೆ ಎಂದು ನಿರ್ಮಾಪಕ ರಾಮು ತಿಳಿಸಿದ್ದಾರೆ.ಚಿತ್ರಕ್ಕೆ ರಾಮ್‌ನಾರಾಯಣ್ ಸಂಭಾಷಣೆ, ಸಾಹಿತ್ಯ, ಚಕ್ರಿ ಸಂಗೀತ, ಮುಜೀರ್ ಛಾಯಾಗ್ರಹಣ, ಮುನಿರಾಜ್ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ, ಇಸ್ಮಾಯಿಲ್ ಕಲೆ, ಉಮೇಶ್ ನಿರ್ಮಾಣ ನಿರ್ವಹಣೆ, ಹಷ್ ನೃತ್ಯವಿದೆ.
ಚಿತ್ರವನ್ನು ಅಕುಲ್‌ಶಿವ ನಿರ್ದೇಶಿಸುತ್ತಿದ್ದಾರೆ.ತಾರಾಗಣದಲ್ಲಿ ಚಿರಂಜೀವಿ ಸರ್ಜಾ, ರಾಗಿಣಿ, ದೇವರಾಜ್, ರಮೇಶ್‌ಭಟ್, ರಂಗಾಯಣರಘು, ಸಾಧುಕೋಕಿಲ, ಅರುಣಾ ಬಾಲ್‌ರಾಜ್, ಚಿತ್ರಾಶೆಣೈ, ಲಕ್ಷ್ಮಣ್, ಪವನ್, ಸಂಕೇತ್ ಕಾಶಿ ಮುಂತಾದವರಿದ್ದಾರೆ.


Click it and Unblock the Notifications











