For Quick Alerts
  ALLOW NOTIFICATIONS  
  For Daily Alerts

  ಗೀತ ಸಾಹಿತಿ ಕೆ ಕಲ್ಯಾಣ್ ಈಗ ಸ್ವರ ಸಾಹಿತ್ಯ ಸಾರ್ವಭೌಮ

  By Rajendra
  |

  ಕನ್ನಡ ಚಿತ್ರಗಳ ಖ್ಯಾತ ಹಿನ್ನೆಲೆ ಗಾಯಕಿ ಮಂಜುಳಾ ಗುರುರಾಜ್ ಅವರ "ಸಾಧನಾ ಸಂಗೀತ ಶಾಲೆ"ಗೆ ಈಗ ಇಪ್ಪತ್ತರ ಹರಯ. ಈ ಸಂಬಂಧ ಅಕ್ಟೋಬರ್ 22ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಸಂಗೀತ ನೃತ್ಯ ವೈಭವ, ಸಾಧಕರಿಗೆ ಬಿರುದು ಸನ್ಮಾನ, ವಿಶೇಷ ಪ್ರಶಸ್ತಿಗಳು ನೀಡಿ ಸನ್ಮಾನಿಸಲಾಯಿತು. ಖ್ಯಾತ ಗೀತರಚನೆಕಾರ, ಸಂಗೀತ ನಿರ್ದೇಶಕ ಕೆ.ಕಲ್ಯಾಣ್ ಅವರಿಗೆ "ಸ್ವರ-ಸಾಹಿತ್ಯ ಸಾರ್ವಭೌಮ" ನೀಡಲಾಯಿತು.

  ಇದೇ ಸಂದರ್ಭದಲ್ಲಿ ಮೃದಂಗ ವಿದ್ವಾನ್ ಅನಂತ ಕ್ರಿಷ್ಣಶರ್ಮಗೆ "ಗಾನ-ಲಯ ಸಾರ್ವಭೌಮ" ಬಿರುದು ನೀಡಿ ಗೌರವಿಸಲಾಯಿತು. ಖ್ಯಾತ ಗಾಯಕಿ "ಸುಲೊಚನಾ ವೆಂಕಟೇಶ್" ಹೆಸರಲ್ಲಿ ಶಾಲೆಯ ಅತ್ಯ್ಯುತ್ತಮ ಗಾಯಕರಾದ ಚಿನ್ಮಯಿ ಚಂದ್ರಶೇಖರ್, ಹಾಗು ಶ್ರೇಯಸ್‌ಗೆ ಪ್ರಶಸ್ತಿ ನೀಡಲಾಯಿತು.

  ವಿಶೇಷ ಬಿರುದು ಸನ್ಮಾನ ಪ್ರಖ್ಯಾತ ತಬಲಾ ವಾದಕ ವೇಣುಗೋಪಾಲ್ ರಾಜು, ಚಲನ ಚಿತ್ರ ಯುವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರುಗಳಿಗೆ, ಖ್ಯಾತ ಹಿನ್ನೆಲೆ ಗಾಯಕಿ ದಿವಂಗತ ಸುಲೋಚನ ವೆಂಕಟೇಶ್ ಸ್ಮರಣಾರ್ಥ ಶಾಲೆಯ ಅತ್ಯುತ್ತಮ ಗಾಯಕರುಗಳಿಗೆ ಪ್ರಶಸ್ತಿ ನೀಡಲಾಯಿತು. (ಒನ್‌ಇಂಡಿಯಾ ಕನ್ನಡ)

  English summary
  Kannada films renowned music director lyricist K Kalyan felicitated by well Known playback singer Manjula Gururaj's Sadhana Sangeetha Shale. He received Swara Sahitya Sarvabhowma award for his outstanding contribution to the Kannada music industry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X