»   » ಸಂಗೀತ ನಿರ್ದೇಶಕ ಗುರುಕಿರಣ್ ಗೆ ಶುಕ್ರದೆಸೆ

ಸಂಗೀತ ನಿರ್ದೇಶಕ ಗುರುಕಿರಣ್ ಗೆ ಶುಕ್ರದೆಸೆ

Posted By:
Subscribe to Filmibeat Kannada
Gurukiran
ಮೈಲಾರಿ ಚಿತ್ರದ ನಂತರ ಮಾಯವಾಗಿದ್ದ ಗುರುಕಿರಣ್ ಮ್ಯೂಸಿಕ್ ಮ್ಯಾಜಿಕ್ ಇತ್ತೀಚಿಗೆ ಆಡಿಯೋ ಬಿಡುಗಡೆಯಾದ 'ಗೋವಿಂದಾಯ ನಮಃ' ಚಿತ್ರದ ನಂತರ ಮತ್ತೆ ಪ್ರತ್ಯಕ್ಷವಾಗಿದೆ. ಪವನ್ ಒಡೆಯರ್ ಸಾಹಿತ್ಯ ನೀಡಿರುವ ಹಾಡು 'ನಮ್ದುಕೆ ಪ್ಯಾರ್ ಹೋಗಯಾ' ಹಾಗೂ 'ಅಂತಾರೆ ಇವನನ್ನು ಗೋವಿಂದ' ಹಾಡುಗಳು ಗುರುಕಿರಣ್ ಸಂಗೀತ ನಿರ್ದೇಶನದಲ್ಲಿ ಸಖತ್ ಹಿಟ್ ಆಗಿವೆ.

ಗುರುಕಿರಣ್ ಸಂಗೀತ ನೀಡಿರುವ ಇನ್ನೊಂದು ಚಿತ್ರ ಶಿವರಾಜ್ ಕುಮಾರ್ ಅಭಿನಯದ 'ಶಿವ' ಚಿತ್ರದ ಆಡಿಯೋ ಬಿಡುಗಡೆ ಸದ್ಯದಲ್ಲೇ ನಡೆಯಲಿದೆ. ಉಪೇಂದ್ರ ಅಭಿನಯದ 'ಆರಕ್ಷಕ' ಚಿತ್ರದ ಹಾಡುಗಳು ಸಿನಿಮಾ ಬಿಡುಗಡೆಯ ನಂತರ ಜನರಲ್ಲಿ ಕ್ರೇಜ್ ಹೆಚ್ಚಿಸಿದರೆ ಆಶ್ಚರ್ಯವೇನೂ ಇಲ್ಲ.

2011ರಲ್ಲಿ ಟಾಪ್ ಒನ್ ಪಟ್ಟಗಿಟ್ಟಿಸಿದ ಸಂಗೀತ ನಿರ್ದೆಶಕ ವಿ. ಹರಿಕೃಷ್ಣ ಅವರಿಗೆ ಯಾರೂ ಸ್ಪರ್ಧಿಯೇ ಇರಲಿಲ್ಲ. ಆದರೆ ಈ ವರ್ಷ, 2012ರಲ್ಲಿ ಗುರುಕಿರಣ್ ಸ್ಪರ್ಧೆ ನೀಡುತ್ತಿರುವುದು ಖಂಡಿತ. ಗೋವಿಂದಾಯ ನಮಃ ಚಿತ್ರದ ಮೂಲಕ ಈಗಾಗಲೇ ಸ್ಪರ್ಧೆ ಪ್ರಾರಂಭವಾಗಿದೆ. 2012ರ ಅಂತ್ಯದಲ್ಲಿ ಯಾರು ಟಾಪ್ ಸ್ಥಾನದಲ್ಲಿ ಎಂಬ ಕುತೂಹಲ ಎಲ್ಲರಿಗಿದೆ. (ಒನ್ ಇಂಡಿಯಾ ಕನ್ನಡ)

English summary
Music Director Gurukiran is shining from the songs of Komal movie Govindaya Namaha. Songs became Super Hit. Now there is Competition between V Harikrishna and Gurukiran for Top One Position in Sandalwood.
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada