ಗಾಯಕಿ ಅಮಿ ವೈನ್ ಹೌಸ್ ನಿಗೂಢ ಸಾವು, ಡ್ರಗ್ಸ್ ಚಟ ಕಾರಣ?

ಜಗತ್ತಿನ ಸಂಗೀತ ಲೋಕದಲ್ಲಿ ಖ್ಯಾತಿಯನ್ನು ಪಡೆದಿದ್ದ ಆಮಿ ವೈನ್ ಹೌಸ್ ಅವರ ಮೃತದೇಹವನ್ನು ಶವ ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಘಟನೆಯ ಬಗ್ಗೆ ಸಂಪೂರ್ಣ ವಿವರ ನಂತರ ತಿಳಿಯಲಿದೆ ಎಂದು ಲಂಡನ್ ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆಮಿ ವೈನ್ ಹೌಸ್ ಅವರಿಗೆ ಇಪ್ಪತ್ತೇಳು ವರ್ಷ ವಯಸ್ಸಾಗಿತ್ತು. ಅತೀ ಚಿಕ್ಕ ವಯಸ್ಸಿನಲ್ಲಿ ತನ್ನ ಮಾದಕ ಕಂಠದ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸಿದ್ದ ಈಕೆ, ಮದ್ಯ ಹಾಗೂ ಮಾದಕ ದ್ರವ್ಯಕ್ಕೆ ದಾಸಿಯಾಗಿದ್ದಳು.
ಪ್ರಾಥಮಿಕ ಮೂಲಗಳ ಪ್ರಕಾರ ಮಾದಕ ದ್ರವ್ಯ ಓವರ್ ಡೋಸ್ ಆದ ಕಾರಣ ಈಕೆ ಮೃತಪಟ್ಟಿರಬಹುದು ಎಂದು ಸಂಶಯಿಸಲಾಗಿದೆ. ಇತ್ತೀಚೆಗೆ ಮಾದಕ ದ್ರವ್ಯ ಚಟ ನಿರ್ಮೂಲನಾ ಕೇಂದ್ರಕ್ಕೂ ಭೇಟಿ ಕೊಟ್ಟು ಬಂದಿದ್ದಳು. ಆದರೂ ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಸಾವಿನ ಕಾರಣಗಳ ಬಗ್ಗೆ ನಿಖರವಾಗಿ ಹೇಳಲು ಸಾಧ್ಯ ಎಂದಿದ್ದಾರೆ .
ಈ ಮಧ್ಯೆ ಅಮಿ ಸಾವಿನ ಸುದ್ದಿಗೆ ಪ್ರತಿಕ್ರಿಯಿಸಿರುವ ಕನ್ನಡ ನಟಿ ರಮ್ಯಾ, Amy winehouse dead?! At 27!sad news. Such a talented artist, such a pity! So important to love yourself. Say no to drugs, destroys you! ಎಂದು ಟ್ವೀಟ್ ಮಾಡಿ ತಮ್ಮ ದುಃಖ ತೋಡಿಕೊಂಡಿದ್ದಾರೆ.


Click it and Unblock the Notifications











