ಸಂಜು ಮತ್ತು ಗೀತಾ ಸೇರಬೇಕು ಅಂತಾ ಬರೆದಾಗಿದೆ ಬ್ರಹ್ಮನೂ
ರಮ್ಯಾ ಹಾಗೂ ಶ್ರೀನಗರ ಕಿಟ್ಟಿ ಮುಖ್ಯಭೂಮಿಕೆಯಲ್ಲಿರುವ ಸಂಜು ವೆಡ್ಸ್ ಗೀತಾ ಚಿತ್ರ ಏಪ್ರಿಲ್ 1ಕ್ಕೆ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಪ್ರಮೋಗಳನ್ನು ನೋಡುತ್ತಿದ್ದರೆ ಚಿತ್ರದಲ್ಲಿ ಏನೋ ವಿಶೇಷ ಇದೆ ಅನ್ನಿಸುತ್ತದೆ. ಚಿತ್ರದ ಎರಡು ಹಾಡುಗಳು ಈಗಾಗಲೆ ಸಾಕಷ್ಟು ಜನಪ್ರಿಯವಾಗಿದ್ದು, ಅದರಲ್ಲೂ ಸಂಜು ಮತ್ತು ಗೀತಾ ಸೇರಬೇಕು ಅಂತಾ ಬರೆದಾಗಿದೆ ಇಂದು ಬ್ರಹ್ಮನೂ ಹಾಡಂತೂ ಸೂಪರ್. ಕವಿರಾಜ್ ಅವರ ಸೊಗಸಾದ ಸಾಹಿತ್ಯಕ್ಕೆ ಜಸ್ಸಿ ಗಿಫ್ಟ್ ಸಂಗೀತ ಸಂಯೋಜಿಸಿದ್ದಾರೆ. ಸೋನು ನಿಗಂ ಹಾಗೂ ಶ್ರೇಯಾ ಘೋಶಾಲ್ ಅವರ ಕಂಠಸಿರಿಯಿಂದ ಹೊರಹೊಮ್ಮಿರುವ ಈ ಹಾಡು ಕೇಳುಗರ ಮನಸೂರೆಗೊಳಿಸುತ್ತಿದೆ.
ಸಂಜು ಮತ್ತು ಗೀತಾ ಸೇರಬೇಕು ಅಂತಾ ಬರೆದಾಗಿದೆ ಇಂದು ಬ್ರಹ್ಮನೂ...
ನನ್ನ ಜೀವಕ್ಕಿಂತಾ ನೀನೆ ನನ್ನ ಸ್ವಂತಾ ಇರುವಾಗ ನಾನು ಚಿಂತೆ ಏನು?
ನಿನ್ನ ಎಲ್ಲ ನೋವನ್ನು ಕೊಡುಗೇ ನೀಡು ನನಗಿನ್ನು
ನನ್ನ ಎಲ್ಲ ಖುಷಿಯನ್ನು ಕೊಡುವೇ ನಿನ್ನ ವಶಕಿನ್ನು
ಮಳೆಯಾ ಹನಿ ಕುರುಳೋ ದನಿ ತರವೇ?
ನಗಬಾರದೆ ನಗಬಾರದೆ ನನ್ನೊಲವೇ?
ಸಂಜು ಮತ್ತು ಗೀತಾ ಸೇರಬೇಕು ಅಂತಾ ಬರೆದಾಗಿದೆ ಇಂದು ಬ್ರಹ್ಮನೂ...
ಆ ಕಣ್ಣಿಗೊಂದು ಈ ಕಣ್ಣಿಗೊಂದು
ಸ್ವರ್ಗಾನ ತಂದು ಕೊಡಲೇನು ಇಂದು
ಏನಾಗಲಿ ನನ್ನ ಸಂಗಾತಿ ನೀ..
ನಿನ್ನ ಈ ಕಣ್ಣಲೀ ಇದೆ ಕೊನೆಯಾ ಹನಿ
ಎದೆಯ ಗೂಡಿನಲ್ಲಿ ಪುಟ್ಟ ಗುಬ್ಬಿಯಂತೆ ನಿನ್ನ
ಬೆಚ್ಚನೇಯ ಪ್ರೀತಿ ಕೊಟ್ಟು ಬಚ್ಚಿ ಇಡುವೆ ಚಿನ್ನ
ಇತಿಹಾಸದ ಪುಟ ಕಾಣದ ಒಲುಮೆ ನೀಡುವೇ...
ಮಳೆಯಾ ಹನಿ ಕುರುಳೋ ದನಿ ತರವೇ?
ನಗಬಾರದೆ ನಗಬಾರದೆ ನನ್ನೊಲವೇ?
ಸಂಜು ಮತ್ತು ಗೀತಾ ಸೇರಬೇಕು ಅಂತಾ ಬರೆದಾಗಿದೆ ಇಂದು ಬ್ರಹ್ಮನೂ...
ತಂಗಾಳಿಯಾಗೋ ಬಿರುಗಾಳಿಯಾಗೋ
ನೀ ಒಮ್ಮೆ ಬಂದು ನನ್ನ ಸೋಕಿ ಹೋಗು
ನಿನ್ನ ನೋಡದೇ... ಅಳುವೇ ಬರುತಿದೇ
ನಿನ್ನ ನಗುವಿಲ್ಲದೇ ಜಗ ನಿಂತಂತಿದೆ...
ನಿದಿರೆ ಬರದ ಕಣ್ಣಿಗೆ ಬಾರೆ ಹಗಲುಗನಸ ಹಾಗೆ
ಬಳಲಿ ಹೋದ ನನಗೆ ಬಾರೆ ಜೀವ ತುಂಬು ಹಾಗೆ
ಉಸಿರಾಡುವ ಶವವಾದೆ ನಾ... ನೀನು ಇಲ್ಲದೇ
ಮಳೆ ನಿಂತರೂ ಮರದಾ ಹನಿ ತರವೇ
ಬಾ ಇಲ್ಲಿಗೆ ನನ್ನಲ್ಲಿಗೆ ನನ್ನೊಲವೇ..
ಸಂಜು ಮತ್ತು ಗೀತಾ ಸೇರಬೇಕು ಅಂತಾ ಬರೆದಾಗಿದೆ ಇಂದು ಬ್ರಹ್ಮನೂ...


Click it and Unblock the Notifications











