twitter
    For Quick Alerts
    ALLOW NOTIFICATIONS  
    For Daily Alerts

    ಕಣ್ಣು ಬೇರೆ, ನೋಟವೊಂದು - ನಾವು ಭಾರತೀಯರು

    By Mahesh
    |

    KS Narasimhaswamy
    ಪ್ರೇಮ ಕವಿ ಕೆಎಸ್ ನರಸಿಂಹಸ್ವಾಮಿ ಅವರು ಪ್ರೀತಿ, ಪ್ರೇಮ, ನಿಸರ್ಗ ವರ್ಣನೆ ಅಷ್ಟೇ ಅಲ್ಲದೇ ದೇಶ ಭಕ್ತಿ ಗೀತೆಯನ್ನು ರಚಿಸಿದ್ದಾರೆ. ಭಾರತದ ಗಣತಂತ್ರ ದಿನ(ಜ.26)ದಂದೇ ಜನಿಸಿದ ಅಮರ ಕವಿ ನರಸಿಂಹಸ್ವಾಮಿ ಅವರು ಜನಿಸಿರುವುದು ವಿಶೇಷ.

    ಕೆಎಸ್ ನ ಅವರ ನನವ ಪಲ್ಲವ(1989)ಸಾಹಿತ್ಯ ಗುಚ್ಛದಿಂದ ಆಯ್ದ 'ನಮ್ಮ ಹಾಡು' ಕವನ ಮುಂದೆ ಮೈಸೂರು ಮಲ್ಲಿಗೆ ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ. ಎಸ್ ಬಿ ಬಾಲಸುಬ್ರಮಣ್ಯಂ ಅವರ ಕಂಠದಲ್ಲಿ ಶಕ್ತಿಯುತವಾಗಿ ಹಾಡು ಹೊರ ಹೊಮ್ಮಿದೆ ಕೂಡಾ...ಕವಿ ಹಾಗೂ ಗಣತಂತ್ರದಿನದ ನಿಮಿತ್ತ ಈ ಗೀತ ಸಾಹಿತ್ಯ ನಿಮ್ಮ ಮುಂದೆ...

    ಆಕಾಶಕ್ಕೆದ್ದು ನಿಂತ ಪರ್ವತ ಹಿಮ ಮೌನದಲ್ಲಿ
    ಕರಾವಳಿಗೆ ಮುತ್ತನಿಡುವ ಪೆರ್ದೆರೆಗಳ ಗಾನದಲ್ಲಿ
    ಬಯಲು ತುಂಬ ಹಸಿರ ದೀಪ ಹಚ್ಚಿ ಹರಿವ ನದಿಗಳಲ್ಲಿ
    ನೀಲಿಯಲ್ಲಿ ಹೊಗೆಯ ಚಲ್ಲಿ ಯಂತ್ರ ಘೋಷವೇಳುವಲ್ಲಿ
    ಕಣ್ಣು ಬೇರೆ, ನೋಟವೊಂದು-
    ನಾವು ಭಾರತೀಯರು.

    ನಾಡಿನೆಲ್ಲ ಗಡಿಗಳಲ್ಲಿ ಬಾನಿನಲ್ಲಿ ಕಡಲಿನಲ್ಲಿ
    ನಮ್ಮ ಯೋಧರೆತ್ತಿ ಹಿಡಿದ ನಮ್ಮ ಧ್ವಜದ ನೆರಳಿನಲ್ಲಿ
    ಒಂದೆ ನೆಲದ ತೊಟ್ಟಿಲಲ್ಲಿ ಬೆಳೆದ ನಮ್ಮ ಕೊರಲಿನಲ್ಲಿ
    ನಮ್ಮ ಯುಗದ ದನಿಗಳಾಗಿ ಮೂಡಿದೆಲ್ಲ ಹಾಡಿನಲ್ಲಿ
    ಭಾಷೆ ಬೇರೆ, ಭಾವವೊಂದು-
    ನಾವು ಭಾರತೀಯರು.

    ನಾಡಿಗಾಗಿ ತನುವ ತೆತ್ತ ಹುತಾತ್ಮರ ಸ್ಮರಣೆಯಲ್ಲಿ
    ನಮ್ಮ ಕಷ್ಟದಲ್ಲು ನೆರೆಗೆ ನೆರೆಳನೀವ ಕರುಣೆಯಲ್ಲಿ
    ದಾರಿ ಬಳಸಿ ಏರುವಲ್ಲಿ ಬಿರುಗಾಳಿಯೆ ಮೊಳಗುವಲ್ಲಿ
    ನಮ್ಮ ಗುರಿಯ ಬೆಳಕಿನೆಡೆಗೆ ನಡೆವ ಧೀರ ಪಯಣದಲ್ಲಿ
    ಎಲ್ಲೆ ಇರಲಿ, ನಾವು ಒಂದು-
    ನಾವು ಭಾರತೀಯರು.

    English summary
    Indian Republic Day is also Poet KS Narasimhaswamy's birthday. Kannada Patriotic song lyric by KS Narasimhaswamy adopted in movie Mysore Mallige. Song lyric Namma haadu is taken from Nava Pallava poem collection.
    Thursday, January 26, 2012, 18:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X