»   » ಜಯಂತ್, ಮನೋಮೂರ್ತಿ ಹಾಗೆ ಸುಮ್ಮನೆ

ಜಯಂತ್, ಮನೋಮೂರ್ತಿ ಹಾಗೆ ಸುಮ್ಮನೆ

Subscribe to Filmibeat Kannada

ಮುಂಗಾರು ಮಳೆ ಕಥೆಗಾರ ಪ್ರೀತಂಗುಬ್ಬಿ ನಿರ್ದೇಶನದ ಚೊಚ್ಚಲ ಚಿತ್ರ ಹಾಗೆ ಸುಮ್ಮನೆಗೆ ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಸಿದ್ಧವಾಗಿದೆ. ಮುಂಗಾರುಮಳೆಯಲ್ಲಿ ಗಾನದ ಮಳೆ ಸುರಿಸಿದ ಮನೋಮೂರ್ತಿ, ಸರಳ ಸಾಹಿತ್ಯದ ಹನಿಗಳ ಹೆಣೆದ ಸಾಹಿತಿ ಜಯಂತ್ ಕಾಯ್ಕಿಣಿ ಜೋಡಿ ಮತ್ತೆ ಮಂದಗತಿಯ ಗಾನಲೋಕಕ್ಕೆ ನಿಮ್ಮನ್ನು ಕರೆದೊಯ್ಯಲಿದ್ದಾರೆ.

ಈ ಚಿತ್ರದ ಹಾಡುಗಳೆಲ್ಲ ಸುಮಧುರವಾಗಿದ್ದರೂ ಒಂದು ಹಾಡಂತೂ ಕೇಳುಗರನ್ನು ಮತ್ತೆ ಮತ್ತೆ ಕಾಡುವುದಂತೂ ನಿಜ. ಸೋನು ನಿಗಂ ಕಂಠದಲ್ಲಿ ಒಮ್ಮೆ ಹಾಗೂ ಶ್ರೇಯಾ ಘೋಷಾಲ್ ಕಂಠದಲ್ಲಿ ಮತ್ತೊಮ್ಮೆ ಬರುವ ಈ ಹಾಡು ಮಿಲನ ಚಿತ್ರದ 'ಮಳೆ ನಿಂತು ಹೋದ ಮೇಲೆ..', 'ಅನಿಸುತಿದೆ ಯಾಕೋ ಇಂದು ..', ಈ ಸಂಜೆ ಯಾಕಾಗಿದೆ ....' ಸಾಲಿಗೆ ಸೇರ್ಪಡೆಯಾಗಬಲ್ಲ ಎಲ್ಲಾ ಅರ್ಹತೆಯನ್ನು ಹೊಂದಿದೆ. ಈ ಹಾಡಿನ ಸಾಹಿತ್ಯ ಹಾಡನ್ನು ಮತ್ತಷ್ಟೂ ಇಂಪಾಗಿದೆ ಎನ್ನಬಹುದು

ಓಡಿ ಬಂದೆನು ನಿನ್ನ ನೋಡಲು
ಕಾದು ನಿಂತೆ ನಾನು ಏನೋ ಕೇಳಲು
ನೀ ಮೌನಿಯಾದರೆ ಏನು ಮಾಡಲಿ, ಎಲ್ಲಿ ಹೋಗಲಿ
ಹೂವು ತಂದೆನು ನಿನಗೆ ನೀಡಲು
ನಿನ್ನ ಕಂಗಳಲ್ಲಿ ನನ್ನ ನೋಡಲು
ನೀನೇ ಮಾಯವಾದರೆ ಏನು ಮಾಡಲಿ, ಎಲ್ಲಿ ಹೋಗಲಿ

ನೂರೊಂದು ಬಾರಿ ಹರಿದು ನಾ ಬರೆದ ಓಲೆಯ,
ತುಸುವಾದರೂ ತೆರೆದೋದದೆ ನೀ ಹಾಗೆ ಹೋದೆಯಾ
ಕರೆಯೊಂದ ಮಾಡಿ ಬಿಡಲೇ ಎದೆಯಿಂದ ಈಗಲೇ,
ಪದವಿಲ್ಲದೇ, ಸ್ವರವಿಲ್ಲದೇ, ನಿನ್ನನ್ನು ಕೂಗಲೇ
ಹೂವು ತಂದೆನು..

ಕನಸಿಂದ ಛಾಪಿಸಿರುವೆ, ಈ ಮನದ ಸಂಚಿಕೆ
ಮುಖಪುಟವನು ನೀ ನೋಡದೆ ಮರೆಯಾದೆ ಏತಕೆ
ನೆನಪಿಂದ ರೂಪಿಸಿರುವ ನವಿರಾದ ಸೇತುವೆ
ನಿನಗಾಗಿಯೇ ಅಣಿ ಮಾಡುತ ನಾನಂತೂ ಕಾಯುವೆ
ಓಡಿ ಬಂದೆನು..

(ದಟ್ಸ್ ಕನ್ನಡ ಗಾನಲೋಕ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada