For Quick Alerts
  ALLOW NOTIFICATIONS  
  For Daily Alerts

  ಅಕ್ಟೋಬರ್ 2ರಂದು ಸಾಹಸ ಸಿಂಹನಿಗೆ ಸಲಾಮ್

  By Rajendra
  |

  ಸಾಹಸ ಸಿಂಹ ವಿಷ್ಣುವರ್ಧನ್ ಅವರಿಗೆ ಮೀಸಲಾದ ವಿಭಿನ್ನ ಶ್ರದ್ಧಾಂಜಲಿ ಕಾರ್ಯಕ್ರಮವಿದು. "ಸಾಹಸ ಸಿಂಹನಿಗೆ ಸಲಾಮ್" ಎಂಬ ಈ ಸಂಗೀತ ಕಾರ್ಯಕ್ರಮವನ್ನು ಸ್ಕೈಲಾರ್ಕ್ ಪ್ರಾಯೋಜಕತ್ವದಲ್ಲಿ ಫೀವರ್ 104 ಎಫ್ ಎಂ ವಾಹಿನಿ ಆಯೋಜಿಸಿದೆ.

  ಅಕ್ಟೋಬರ್ 2ರಂದು ಡಾ.ಅಂಬೇಡ್ಕರ್ ಭವನದಲ್ಲಿ ಸಂಜೆ 6ಗಂಟೆಗೆ ನಡೆಯಲಿದೆ. ಖ್ಯಾತ ಹಿನ್ನೆಲೆ ಗಾಯಕ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಸಂಗೀತದ ಮೂಲಕ ಡಾ.ವಿಷ್ಣುವರ್ಧನ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ. ಈ ಕಾರ್ಯುಕ್ರಮಕ್ಕೆ ಕನ್ನಡ ಪ್ರಭ, ಜೀ ಕನ್ನಡ ವಾಹಿನಿ ಮಾಧ್ಯಮ ಪ್ರಾಯೋಜಕತ್ವ ವಹಿಸಿವೆ.

  ವಿಷ್ಣುವರ್ಧನ್ ಅವರ ಅಭಿನಯದ ಚಿತ್ರದ ಹಾಡುಗಳಿಗೆ ತಮ್ಮ ಕಂಠಸಿರಿಯಿಂದ ಜೀವ ತುಂಬಿದ ಗಾಯ ಎಸ್ಪಿಬಿ. ಫೀವರ್ 104 ಎಫ್‌ಎಂನೊಂದಿಗೆ ಸಾಹಸ ಸಿಂಹನಿಗೆ ಸಲಾಮ್ ಹೇಳಲಿದ್ದಾರೆ. ಟಿಕೆಟ್‌ಗಳಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ 3989 5050. ಟಿಕೆಟ್‌ಗಳು ದೊರೆಯುವ ಸ್ಥಳ ಜಸ್ಟ್ ಬೇಕ್, ಮಂತ್ರಿ ಮಾಲ್ ಮತ್ತು ಸದಾಶಿವನಗರ; ಟೆಮ್ಟೇಷನ್, ಜಯನಗರ; ಕೆ.ಸಿ.ದಾಸ್, ಸೆಂಟ್ ಮಾರ್ಕ್ಸ್ ರಸ್ತೆ. ಅಥವಾ ಈ ಬುಕ್ ಮೈ ಶೋಗೆ ಲಾಗ್‌ ಆನ್ ಆಗಿ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X