For Quick Alerts
  ALLOW NOTIFICATIONS  
  For Daily Alerts

  ಈ ಹಾಡಿಗೆ ಒಲಿಯದ ಹುಡುಗಿಯರು ಯಾರಿದ್ದಾರೆ ಹೇಳಿ?

  By Staff
  |

  'ಹುಡುಗಿಯರ ಒಲಿಸಿಕೊಳ್ಳುವುದು ಹೇಗೆ?' ಈ ವಿಷಯಕ್ಕೆ ಸಂಬಂಧಿಸಿದಂತೆ ನೂರಾರು ಪುಸ್ತಕಗಳು ಬಂದಿವೆ. ನಿಜಕ್ಕೂ
  ಈ ಹಾಡಿಗೆ ಜೀವತುಂಬಿದರೆ, ಹುಡುಗಿಯರು ಒಲಿದೇ ಒಲಿಯುತ್ತಾರೆ. ಒಂದು ಸಲ ಈ ಹಾಡನ್ನು ಗುನುಗಿದರೆ ಸಾಕು,
  ಏನೋ ಹೊಸ ಲವಲವಿಕೆ. '
  ಕನ್ಯಾರತ್ನ' ಚಿತ್ರಕ್ಕಾಗಿ ಕು.ರಾ. ಸೀತಾರಾಮ ಶಾಸ್ತ್ರಿ ಬರೆದ ಹಾಡಿಗೆ, ಜಿ.ಕೆ.ವೆಂಕಟೇಶ್
  ಸಂಗೀತ ನೀಡಿದ್ದಾರೆ. ಭಾವಪೂರ್ಣವಾಗಿ ಹಾಡಿ ಪಿ.ಪಿ.ಶ್ರೀನಿವಾಸ್ ಜೀವ ತುಂಬಿದ್ದಾರೆ.
  ಇಂಥ ಒಂದೈದಾರು
  ಹಾಡುಗಳಿದ್ದರೇ ಸಾಕು, ಹೇಗೋ ಜೀವನ ತಳ್ಳಬಹುದು.

  ಬಿಂಕದ ಸಿಂಗಾರಿ ಮೈ ಡೊಂಕಿನ ವೈಯ್ಯಾರಿ
  ಈ ಸವಿಘಳಿಗೆ ರಸದೀವಳಿಗೆ ನಿನ್ ಅಂತರಂಗ ಮಧುರಂಗ
  ಬಿಂಕದ ಸಿಂಗಾರಿ ಮೈ ಡೊಂಕಿನ ವೈಯ್ಯಾರಿ
  ಈ ಸವಿಘಳಿಗೆ ರಸದೀವಳಿಗೆ ನಿನ್ ಅಂತರಂಗ ಮಧುರಂಗ

  ಬಳಿ ನೀನಿರಲು ಬಿಸಿಲೇ ನೆರಳು
  ಮಧುಪಾನ ಪಾತ್ರೆ ನಿನ್ನೊಡಲು
  ಮಧುವಿಲ್ಲದೇ ಮದವೇರಿಪ
  ನಿನ್ನ ಅಂದ ಚೆಂದ ಮಕರಂದ

  ಬಿಂಕದ ಸಿಂಗಾರಿ ಮೈ ಡೊಂಕಿನ ವೈಯ್ಯಾರಿ
  ಈ ಸವಿಘಳಿಗೆ ರಸದೀವಳಿಗೆ ನಿನ್ ಅಂತರಂಗ ಮಧುರಂಗ

  ನಿನ್ನೀ ವದನ ಅರವಿಂದವನ
  ಹೂಬಾಣ ನಿನ್ನ ಬಿನ್ನಾಣ
  ಒಲವೆಂಬ ಧನ ಬಿಡೆ ಹುಂಬತನ
  ಬಾ ಚಿನ್ನ ರನ್ನ ವರಿಸೆನ್ನ

  ಬಿಂಕದ ಸಿಂಗಾರಿ ಮೈ ಡೊಂಕಿನ ವೈಯ್ಯಾರಿ
  ಈ ಸವಿಘಳಿಗೆ ರಸದೀವಳಿಗೆ ನಿನ್ ಅಂತರಂಗ ಮಧುರಂಗ

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X