»   » ಗುರೂಜಿ ಡಾಟ್ ಕಾಂನಲ್ಲಿ ಮೆಲ್ಲುಸಿರೆ ಸವಿಗಾನ

ಗುರೂಜಿ ಡಾಟ್ ಕಾಂನಲ್ಲಿ ಮೆಲ್ಲುಸಿರೆ ಸವಿಗಾನ

Subscribe to Filmibeat Kannada
Listen Kannda Music in Guruji
ಗುರೂಜಿ ಡಾಟ್ ಕಾಂ ಕನ್ನಡದ ಮೊಟ್ಟ ಮೊದಲ ಮ್ಯೂಸಿಕ್ ಸರ್ಜ್ ಎಂಜಿನನ್ನು ಪ್ರಾರಂಭಿಸಿದೆ. ಕನ್ನಡ ಚಿತ್ರಗೀತೆಗಳನ್ನು ಉಚಿತವಾಗಿ ಸರ್ಚ್ ಮಾಡುವ ಸೌಲಭ್ಯವನ್ನು ದೇಸಿ ಸರ್ಚ್ ಎಂಜಿನ್ 'ಗುರೂಜಿ' ಒದಗಿಸಲಿದೆ.

Kannada songs 2008 mp3 ಎಂದು ಟೈಪಿಸಿ ಗುರೂಜಿಗೆ ಹುಡುಕಲು ಹೇಳಿದರೆ 2008ನೇ ವರ್ಷದಲ್ಲಿ ಬಿಡುಗಡೆಯಾದ ಸಮಸ್ತ ಕನ್ನಡ ಚಿತ್ರದ ಹಾಡುಗಳು ಕೇಳಲು ಸಿಗುತ್ತವೆ. ಕಪ್ಪುಬಿಳುಪು ಚಿತ್ರಗಳಿಂದ ಹಿಡಿದು ಬಣ್ಣದ ಬೆಡಗಿನವರೆಗೂ ಕನ್ನಡ ಹಾಡುಗಳು ಇಲ್ಲಿ ಲಭ್ಯ. ಅಂದರೆ 1932ರಿಂದ 2008ರವರೆಗಿನ ಎಲ್ಲ ಕನ್ನಡ ಚಿತ್ರಗೀತೆಗಳು ಒಂದೇ ತಾಣದಲ್ಲಿ ಕೇಳಿ ಆನಂದಿಸಬಹುದು. ಕನ್ನಡದಲ್ಲಿ ಕಿಶೋರ್ ಕುಮಾರ್ ಹಾಡಿರುವ ಹಾಡುಗಳಿಂದ ಹಿಡಿದು ನೆನ್ನೆ ಮೊನ್ನೆಯ ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರದ ಹಾಡುಗಳನ್ನು ಗುರೂಜಿ ಕೇಳಿಸುತ್ತದೆ.

ಗುರೂಜಿ ಸರ್ಚ್ ಎಂಜಿನ್ ನಲ್ಲಿ ಗಣೇಶ್ ಅಭಿನಯದ ಚಿತ್ರಗೀತೆಗಳು, ಸೋನು ನಿಗಂ ಹಾಡಿರುವ ಹಾಡುಗಳು ಬಹಳಷ್ಟು ಜನಪ್ರಿಯವಾಗಿವೆ. ಹಾಡುಗಳ ಸಾಹಿತ್ಯ, ಗಾಯಕ,ಸಿನಿಮಾ,ನಟ, ನಟಿ, ಸಂಗೀತ ನಿರ್ದೇಶಕ ಇವರೆಲ್ಲರ ಕಾಂಬಿನೇಷನ್ ನಲ್ಲಿ ಹಾಡುಗಳನ್ನು ಹುಡುಕುವ ಸೌಲಭ್ಯ ಗುರೂಜಿ ಒದಗಿಸುತ್ತದೆ.ಅಷ್ಟೇ ಅಲ್ಲ ಚಿತ್ರದ ಕುರಿತಾದ ಆಸಕ್ತಿಕರ ವಿವರಗಳು ಇಲ್ಲಿ ಲಭ್ಯ. ಟಾಪ್ ಹಾಡುಗಳು, ಗಾಯಕರು, ಆಲ್ಬಂಗಳ ವಿವರಗಳನ್ನು ಇಲ್ಲಿ ಕಾಣಬಹುದು.

ಬುದ್ಧಿವಂತ,ಮುಂಗಾರು ಮಳೆ,ಚೈತ್ರದ ಚಂದ್ರಮ,ಮಾದೇಶ,ಕೋಡಗಾನ ಕೋಳಿ ನುಂಗಿತ್ತಾ,ಗಣೇಶ ಮತ್ತೆ ಬಂದ,ಜೋಗಿ,ಹೊಂಗನಸು,ಮಿಲನ,ಹುಡುಗಾಟ ಚಿತ್ರದ ಹಾಡುಗಳು ಟಾಪ್ ಸರ್ಚ್ ಪಟ್ಟಿಯಲ್ಲಿವೆ. ಪಿ.ಸುಶೀಲಾ,ಸೋನು ನಿಗಂ, ಎಸ್.ಜಾನಕಿ,ಎಂಡಿ ಪಲ್ಲವಿ,ಕೂನಲ್ ಗುಂಜಾವಾಲಾ,ರಾಜು ಅನಂತಸ್ವಾಮಿ ,ಗುರುಕಿರಣ್,ಮಂಜುಳ ಗುರುರಾಜ್,ಸಂಗೀತಾ ಕಟ್ಟಿ,ಎಸ್ ಪಿಬಿ ಗಾಯಕರು ಗುರೂಜಿಯ ಟಾಪ್ ಸರ್ಚ್ ನಲ್ಲಿದ್ದಾರೆ.

ಎಲ್ಲ ಕಾಲಕ್ಕು ಸಲ್ಲುವ ಹಾಡುಗಳ ಪಟ್ಟಿಯಲ್ಲಿ ಹೊಸ ಬೆಳಕು, ಗಂಧದ ಗುಡಿ, ಪ್ರೇಮಲೋಕ,ಜನುಮದ ಜೋಡಿ,ಓಂ,ಆಟೋ ರಾಜ,ಹುಚ್ಚ,ಶುಭಮಂಗಳ, ಎರಡು ಕನಸು, ನಾನು ನನ್ನ ಹೆಂಡ್ತಿ,ಮೊಗ್ಗಿನ ಮನಸು,ಅಮೆರಿಕ ಅಮೆರಿಕ,ಯಾರೆ ನೀನು ಚೆಲುವೆ, ನಾಗರ ಹಾವು ಚಿತ್ರಗಳಿವೆ. ಇವು ಹಳೆ ಮತ್ತು ಹೊಸ ತಲೆಮಾರಿನ ಶ್ರೋತೃಗಳನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada