'ನಮಣ್ಣ ಡಾನ್'ಗೆ ಪರವಶವಾದ ಮೋನಾಪರವೇಶ್

ಲವ್‌ಕುಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರವಿಜೋಶಿ ನಿರ್ಮಿಸುತ್ತಿರುವ ಚಿತ್ರ 'ನಮ್ಮಣ್ಣ ಡಾನ್'. "ಈ ಜೀವ ನಿನಗಾಗಿ ನಿನ್ನ ಜೊತೆಗಾಗಿ ನಾನು ಕಾಯುತ್ತಿರುವೆ ಮೊದಲ ಅಕ್ಷರವು ಕೊನೆಯ ಅಕ್ಷರವು ನನಗೆ ನೀ ಇರುವೆ.." ಎಂಬ ಹಾಡಿನ ಚಿತ್ರೀಕರಣ ಚಿಕ್ಕಮಗಳೂರಿನಲ್ಲಿ ನಡೆದಿದೆ. ರಮೇಶ್‌ಅರವಿಂದ್ ಹಾಗೂ ಮೋನಾಪರವೇಶ್ ಅಭಿನಯಿಸಿದ ಈ ಗೀತೆಗೆ ಮುರಳಿ ನೃತ್ಯ ನಿರ್ದೇಶನ ಮಾಡಿದ್ದಾರೆ. ಹಾಸ್ಯ
ಹಾಸ್ಯ ಪ್ರಧಾನ ಈ ಚಿತ್ರದ ನಿರ್ದೇಶನವನ್ನು ರಮೇಶ್ ಅವರೇ ಮಾಡುತ್ತಿದ್ದಾರೆ. ಮೋನಾಪರವರೇಶ್, ಸನಾತನಿ, ರಾಜುತಾಳಿಕೋಟೆ, ಎಂ.ಎಸ್.ಉಮೇಶ್, ಅಚ್ಯುತಕುಮಾರ್, ರಾಜೇಂದ್ರಕಾರಂತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಮ್ಯಾಥ್ಯೂಸ್ ಮನು ಸಂಗೀತ ನೀಡಿರುವ 'ನಮ್ಮಣ್ಣ ಡಾನ್'ಗೆ ಭಾಸ್ಕರ್ ಅವರ ಛಾಯಾಗ್ರಹಣವಿದೆ. ಸೌಂದರ್‌ರಾಜ್ ಸಂಕಲನವಿರುವ ಈ ಚಿತ್ರಕ್ಕೆ ರಮೇಶ್‌ಅರವಿಂದ್ ಹಾಗೂ ಡಿ.ಬಿ.ಚಂದ್ರಶೇಖರ್ ಸಂಭಾಷಣೆ ಬರೆದಿದ್ದಾರೆ. ರಮೇಶ್ ದೇಸಾಯಿ ಕಲಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. (ಒನ್‌ಇಂಡಿಯಾ ಕನ್ನಡ)
More from Filmibeat
English summary
The shooting of Ramesh Aravind lead movie Nammnna Don progress in Chikmagalur. A song and some scenes will also be picturized in this schedule. Mona Parvesh plays the lady lead role in this movie.


Click it and Unblock the Notifications











