twitter
    For Quick Alerts
    ALLOW NOTIFICATIONS  
    For Daily Alerts

    'ನಮಣ್ಣ ಡಾನ್‌'ಗೆ ಪರವಶವಾದ ಮೋನಾಪರವೇಶ್

    By Rajendra
    |

    Nammanna Don still
    ರಮೇಶ್ ಅರವಿಂದ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹಾಸ್ಯಪ್ರಧಾನ ಚಿತ್ರ ನಮ್ಮಣ್ಣ ಡಾನ್. ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ ಹಾಡಿನ ಚಿತ್ರೀಕರಣ ನಡೆಯಿತು. ಶಂಕರ್ ಬರೆದಿರುವ ಹಾಡಿಗೆ ಮುರಿಳಿ ನೃತ್ಯ ನಿರ್ದೇಶನ ಮಾಡಿದ್ದಾರೆ.

    ಲವ್‌ಕುಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರವಿಜೋಶಿ ನಿರ್ಮಿಸುತ್ತಿರುವ ಚಿತ್ರ 'ನಮ್ಮಣ್ಣ ಡಾನ್'. "ಈ ಜೀವ ನಿನಗಾಗಿ ನಿನ್ನ ಜೊತೆಗಾಗಿ ನಾನು ಕಾಯುತ್ತಿರುವೆ ಮೊದಲ ಅಕ್ಷರವು ಕೊನೆಯ ಅಕ್ಷರವು ನನಗೆ ನೀ ಇರುವೆ.." ಎಂಬ ಹಾಡಿನ ಚಿತ್ರೀಕರಣ ಚಿಕ್ಕಮಗಳೂರಿನಲ್ಲಿ ನಡೆದಿದೆ. ರಮೇಶ್‌ಅರವಿಂದ್ ಹಾಗೂ ಮೋನಾಪರವೇಶ್ ಅಭಿನಯಿಸಿದ ಈ ಗೀತೆಗೆ ಮುರಳಿ ನೃತ್ಯ ನಿರ್ದೇಶನ ಮಾಡಿದ್ದಾರೆ. ಹಾಸ್ಯ

    ಹಾಸ್ಯ ಪ್ರಧಾನ ಈ ಚಿತ್ರದ ನಿರ್ದೇಶನವನ್ನು ರಮೇಶ್ ಅವರೇ ಮಾಡುತ್ತಿದ್ದಾರೆ. ಮೋನಾಪರವರೇಶ್, ಸನಾತನಿ, ರಾಜುತಾಳಿಕೋಟೆ, ಎಂ.ಎಸ್.ಉಮೇಶ್, ಅಚ್ಯುತಕುಮಾರ್, ರಾಜೇಂದ್ರಕಾರಂತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

    ಮ್ಯಾಥ್ಯೂಸ್ ಮನು ಸಂಗೀತ ನೀಡಿರುವ 'ನಮ್ಮಣ್ಣ ಡಾನ್‌'ಗೆ ಭಾಸ್ಕರ್ ಅವರ ಛಾಯಾಗ್ರಹಣವಿದೆ. ಸೌಂದರ್‌ರಾಜ್ ಸಂಕಲನವಿರುವ ಈ ಚಿತ್ರಕ್ಕೆ ರಮೇಶ್‌ಅರವಿಂದ್ ಹಾಗೂ ಡಿ.ಬಿ.ಚಂದ್ರಶೇಖರ್ ಸಂಭಾಷಣೆ ಬರೆದಿದ್ದಾರೆ. ರಮೇಶ್ ದೇಸಾಯಿ ಕಲಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. (ಒನ್‌ಇಂಡಿಯಾ ಕನ್ನಡ)

    English summary
    The shooting of Ramesh Aravind lead movie Nammnna Don progress in Chikmagalur. A song and some scenes will also be picturized in this schedule. Mona Parvesh plays the lady lead role in this movie.
    Monday, November 28, 2011, 11:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X