ಕೋಗಿಲೆ ಲತಾ ಬರ್ಥ್ ಡೇ ದಿನ ಅಭಿಮಾನಿಗೆ ಜೈ ಎನ್ನಿ

ಹಳೆ ಚಿತ್ರಗೀತೆಗಳ ಇನಿದನಿಯ ಗಾಯನವುಳ್ಳ ಗ್ರಾಮಫೋನ್ ರೆಕಾರ್ಡ್ ಗಳ ಸಂಗ್ರಹ ಮಾಡಿ ಅದಕ್ಕೆ 'ಲತಾ ದೀನನಾಥ್ ಮಂಗೇಷ್ಕರ್ ಗ್ರಾಮಫೋನ್ ರೆಕಾರ್ಡ್ ಸಂಗ್ರಹಾಲಯ' ಎಂದು ಹೆಸರಿಟ್ಟಿದ್ದಾರೆ. ಇಂದು ಇವರ ಸಂಗ್ರಹಾಲಯಕ್ಕೆ ಬಂದವರಿಗೆ ಲತಾ ಅವರ ಸಂಗೀತ ಸುಧೆ ಸವಿಯುವ ಅವಕಾಶ ಲಭ್ಯವಾಗಿದೆ.
ಸುಮನ್ ಅವರ ಸಂಗ್ರಹದಲ್ಲಿ ಸುಮಾರು 28,000 ಗ್ರಾಮಫೋನ್ ರೆಕಾರ್ಡ್ ಗಳಿವೆ. ಇದರಲ್ಲಿ ಸುಮಾರು 536 ಗಾಯಕ/ಕಿಯರ ಧ್ವನಿ ಇದೆ, ಅಫ್ ಕೋರ್ಸ್ ಹೆಚ್ಚನವು ಲತಾ ಅವರ ದನಿಯಲ್ಲಿ ಹೊರಹೊಮ್ಮಿದ ಗೀತೆಗಳಾಗಿವೆ.
1942ರಲ್ಲಿ ಲತಾ ಅವರು ಹಾಡಿರುವ ಮರಾಠಿ ಚಿತ್ರ' ಪಹಿಲಿ ಮಂಗ್ರಾಗೌರ್' ನ ಗೀತೆಗಳೂ ಇವರ ಸಂಗ್ರಹದಲ್ಲಿದೆ.
ಗ್ರಾಮಾಫೋನ್ ರೆಕಾರ್ಡ್ ಗಳ ಸಂಗ್ರಹಕ್ಕಾಗಿ ತೋಟ ಹಾಗೂ ಜಮೀನು ಮಾರಿರುವ ಸುಮನ್ ಅವರ ಸಂಗ್ರಹ ನಿಜಕ್ಕೂ ಅತ್ಯಮೂಲ್ಯವಾದದ್ದು.
ಸಾಧಕ ಪ್ರಚಾರದಿಂದ ದೂರ: ಆದರೂ ಪ್ರಚಾರದಿಂದ ದೂರ ಉಳಿದಿರುವ ಸುಮನ್ ಅವರು ತಮ್ಮ ಸಂಗ್ರಹಾಲಯದಲ್ಲಿರುವ ಗೀತೆಗಳನ್ನು ಉಚಿತವಾಗಿ ಕಾಪಿ ಮಾಡಿಕೊಂಡು ಹೋಗಲು ಅನುಮತಿ ನೀಡಿದ್ದಾರೆ. ಅವರ ಮ್ಯೂಸಿಯಂಗೆ ಬಂದವರು ಗಂಟೆಗಟ್ಟಲೆ ಕೂತು ಹಾಡು ಕೇಳುತ್ತಾ ಮೈಮರೆಯುವುದಿದೆ.
ಸುಮನ್ ಸಾಧನೆ ಹಾಗೂ ಹೀಗೂ ಸರ್ಕಾರದ ಕಿವಿಗೆ ಬಿದ್ದು ಒಮ್ಮೆ 40,000 ರೂ ಪ್ರೋತ್ಸಾಹ ಧನ ನೀಡಿದ್ದು ಬಿಟ್ಟರೆ ಯಾರೊಬ್ಬರಿಂದಲೂ ಚುಕ್ಕಾಸು ಸಿಕ್ಕಿಲ್ಲ. ಅದನ್ನು ಸುಮನ್ ಅಪೇಕ್ಷಿಸುವುದು ಇಲ್ಲ. ಲತಾ ಅವರ ಅಭಿಮಾನ, ಸಂಗೀತದ ಮೇಲಿನ ಪ್ರೇಮಕ್ಕಾಗಿ ತಮ್ಮ ಜೀವನ ಮುಡಿಪಾಗಿರಿಸಿಕೊಂಡು ಬಾಳುತ್ತಿದ್ದಾರೆ.


Click it and Unblock the Notifications











