twitter
    For Quick Alerts
    ALLOW NOTIFICATIONS  
    For Daily Alerts

    ಕೋಗಿಲೆ ಲತಾ ಬರ್ಥ್ ಡೇ ದಿನ ಅಭಿಮಾನಿಗೆ ಜೈ ಎನ್ನಿ

    By Mahesh
    |

    Singer Lata Mangeshkar
    ಸುಮಾರು 36 ವರ್ಷಗಳಿಂದ ಭಾರತದ ಕೋಗಿಲೆ ಲತಾ ಮಂಗೇಷ್ಕರ್ ಅವರ ಹುಟ್ಟುಹಬ್ಬ ಆಚರಿಸಿಕೊಂಡು ಬಂದಿರುವ ಅವರ ಅಪ್ಪಟ ಅಭಿಮಾನಿ ಸುಮನ್ ಚೌರಾಸಿಯಾ, ಬುಧವಾರ(ಸೆ.28) ಕೂಡಾ ಮಹಾನ್ ಗಾಯಕಿ 82ನೇ ಹುಟ್ಟುಹಬ್ಬ ಆಚರಿಸಿದ್ದಾರೆ.

    ಹಳೆ ಚಿತ್ರಗೀತೆಗಳ ಇನಿದನಿಯ ಗಾಯನವುಳ್ಳ ಗ್ರಾಮಫೋನ್ ರೆಕಾರ್ಡ್ ಗಳ ಸಂಗ್ರಹ ಮಾಡಿ ಅದಕ್ಕೆ 'ಲತಾ ದೀನನಾಥ್ ಮಂಗೇಷ್ಕರ್ ಗ್ರಾಮಫೋನ್ ರೆಕಾರ್ಡ್ ಸಂಗ್ರಹಾಲಯ' ಎಂದು ಹೆಸರಿಟ್ಟಿದ್ದಾರೆ. ಇಂದು ಇವರ ಸಂಗ್ರಹಾಲಯಕ್ಕೆ ಬಂದವರಿಗೆ ಲತಾ ಅವರ ಸಂಗೀತ ಸುಧೆ ಸವಿಯುವ ಅವಕಾಶ ಲಭ್ಯವಾಗಿದೆ.

    ಸುಮನ್ ಅವರ ಸಂಗ್ರಹದಲ್ಲಿ ಸುಮಾರು 28,000 ಗ್ರಾಮಫೋನ್ ರೆಕಾರ್ಡ್ ಗಳಿವೆ. ಇದರಲ್ಲಿ ಸುಮಾರು 536 ಗಾಯಕ/ಕಿಯರ ಧ್ವನಿ ಇದೆ, ಅಫ್ ಕೋರ್ಸ್ ಹೆಚ್ಚನವು ಲತಾ ಅವರ ದನಿಯಲ್ಲಿ ಹೊರಹೊಮ್ಮಿದ ಗೀತೆಗಳಾಗಿವೆ.

    1942ರಲ್ಲಿ ಲತಾ ಅವರು ಹಾಡಿರುವ ಮರಾಠಿ ಚಿತ್ರ' ಪಹಿಲಿ ಮಂಗ್ರಾಗೌರ್' ನ ಗೀತೆಗಳೂ ಇವರ ಸಂಗ್ರಹದಲ್ಲಿದೆ.

    ಗ್ರಾಮಾಫೋನ್ ರೆಕಾರ್ಡ್ ಗಳ ಸಂಗ್ರಹಕ್ಕಾಗಿ ತೋಟ ಹಾಗೂ ಜಮೀನು ಮಾರಿರುವ ಸುಮನ್ ಅವರ ಸಂಗ್ರಹ ನಿಜಕ್ಕೂ ಅತ್ಯಮೂಲ್ಯವಾದದ್ದು.

    ಸಾಧಕ ಪ್ರಚಾರದಿಂದ ದೂರ:
    ಆದರೂ ಪ್ರಚಾರದಿಂದ ದೂರ ಉಳಿದಿರುವ ಸುಮನ್ ಅವರು ತಮ್ಮ ಸಂಗ್ರಹಾಲಯದಲ್ಲಿರುವ ಗೀತೆಗಳನ್ನು ಉಚಿತವಾಗಿ ಕಾಪಿ ಮಾಡಿಕೊಂಡು ಹೋಗಲು ಅನುಮತಿ ನೀಡಿದ್ದಾರೆ. ಅವರ ಮ್ಯೂಸಿಯಂಗೆ ಬಂದವರು ಗಂಟೆಗಟ್ಟಲೆ ಕೂತು ಹಾಡು ಕೇಳುತ್ತಾ ಮೈಮರೆಯುವುದಿದೆ.

    ಸುಮನ್ ಸಾಧನೆ ಹಾಗೂ ಹೀಗೂ ಸರ್ಕಾರದ ಕಿವಿಗೆ ಬಿದ್ದು ಒಮ್ಮೆ 40,000 ರೂ ಪ್ರೋತ್ಸಾಹ ಧನ ನೀಡಿದ್ದು ಬಿಟ್ಟರೆ ಯಾರೊಬ್ಬರಿಂದಲೂ ಚುಕ್ಕಾಸು ಸಿಕ್ಕಿಲ್ಲ. ಅದನ್ನು ಸುಮನ್ ಅಪೇಕ್ಷಿಸುವುದು ಇಲ್ಲ. ಲತಾ ಅವರ ಅಭಿಮಾನ, ಸಂಗೀತದ ಮೇಲಿನ ಪ್ರೇಮಕ್ಕಾಗಿ ತಮ್ಮ ಜೀವನ ಮುಡಿಪಾಗಿರಿಸಿಕೊಂಡು ಬಾಳುತ್ತಿದ್ದಾರೆ.

    English summary
    Indian nightingale Lata Mangeshkar's birthday being celebrated across India today(Sept.28). Lata didi has biggest fan called Suman Chorasiya who has rare collection of 28,000 Gramophone records maximum songs are by his idol. Suman is celebrating Lata's birthday from past 36 years.
    Wednesday, September 28, 2011, 15:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X