»   » ನೀನೊಲಿದ ಮನೆಮನೆಯು ಲಕ್ಷ್ಮೀ ನಿವಾಸ

ನೀನೊಲಿದ ಮನೆಮನೆಯು ಲಕ್ಷ್ಮೀ ನಿವಾಸ

Subscribe to Filmibeat Kannada

ವಿಜಯನಗರವನ್ನು ಆಳಿದ ಪ್ರಖ್ಯಾತ ದೊರೆ ಕೃಷ್ಣದೇವರಾಯನ ಇತಿಹಾಸವನ್ನು ಆಧರಿಸಿ ತಯಾರಿಸಿದ ಚಿತ್ರ ಶ್ರೀ ಕೃಷ್ಣದೇವರಾಯ. ಬಿ.ಆರ್.ಪಂತುಲು ನಿರ್ದೇಶನದಲ್ಲಿ 1970ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ರಾಜ್ ಕುಮಾರ್, ಭಾರತಿ, ಜಯಂತಿ ಮುಖ್ಯ ಪಾತ್ರಗಳಲ್ಲಿ ಅಮೋಘವಾಗಿ ನಟಿಸಿದ್ದರು. ಬಿ.ಆರ್.ಪಂತುಲು, ನರಸಿಂಹರಾಜು, ಮೈನಾವತಿ ಪೋಷಕ ಪಾತ್ರಗಳಲ್ಲಿ ಅದ್ಭುತವಾಗಿ ನಟಿಸಿದ್ದರು. ಆರ್.ಎನ್.ಜಯಗೋಪಾಲ್ ಸಾಹಿತ್ಯಕ್ಕೆ ಪಿ.ಬಿ.ಶ್ರೀನಿವಾಸ್ ಹಾಗೂ ಎಸ್.ಜಾನಕಿ ಹಿನ್ನಲೆ ಗಾಯನ ಭಕ್ತಿ ಉಕ್ಕಿಸುವಂತಿದೆ. ತಿಮ್ಮಪ್ಪನ ಗುಣಗಾನ ಮಾಡುವ ಈ ಗೀತೆಯನ್ನು ದೀಪಾವಳಿ ನಿಮಿತ್ತ ಪ್ರಕಟಿಸಲಾಗಿದೆ. ನಿಮ್ಮ ಮನೆಯಲ್ಲಿ ಲಕ್ಷ್ಮಿ ಕಾಲು ಮುರಿದುಕೊಂಡು ಬಿದ್ದಿರಲಿ ಎಂಬ ಏಕೈಕ ಅಭಿಲಾಷೆಯಿಂದ. ಲಕ್ಷ್ಮೀ ಪೂಜೆಯ ಶುಭಾಶಗಳು- ದಟ್ಸ್ ಕನ್ನಡ

ಕಲ್ಯಾಣದ್ಭುತ ಗಾತ್ರಾಯ ಕಾಮಿತಾರ್ಥ ಪ್ರದಾಯಿನೇ

ಶ್ರೀಮದ್ ವೇಂಕಟನಾಥಾಯ ಶ್ರೀನಿವಾಸಾಯ ತೇ ನಮಃ

ತಿರುಪತಿಗಿರಿ ವಾಸ ಶ್ರೀ ವೇಂಕಟೇಶ
ತಿರುಪತಿಗಿರಿ ವಾಸ ಶ್ರೀ ವೇಂಕಟೇಶ
ನೀನೊಲಿದ ಮನೆ ಮನೆಯು ಲಕ್ಷ್ಮಿ ನಿವಾಸ
ನೀನೊಲಿದ ಮನೆ ಮನೆಯು ಲಕ್ಷ್ಮಿ ನಿವಾಸ

ತಿರುಪತಿಗಿರಿ ವಾಸ ಶ್ರೀ ವೇಂಕಟೇಶ
ಶ್ರೀ ವೇಂಕಟೇಶ ಶ್ರೀ ವೇಂಕಟೇಶ

ಅಖಿಲಾಂಡ ಕೋಟಿ ಬ್ರಂಹಾಡ ಪಾಲ ಆ....
ಅಖಿಲಾಂಡ ಕೋಟಿ ಬ್ರಂಹಾಡ ಪಾಲ
ಅಲಮೇಲುಮಂಗ ಮನೊಲ್ಲಾಸ ಲೋಲ
ಅಲಮೇಲುಮಂಗ ಮನೊಲ್ಲಾಸ ಲೋಲ

ತಿರುಪತಿಗಿರಿ ವಾಸ ಶ್ರೀ ವೇಂಕಟೇಶ
ಶ್ರೀ ವೇಂಕಟೇಶ ಶ್ರೀ ವೇಂಕಟೇಶ

ಪಂಕಜಲೋಚನ ಪತಿತೋದ್ದಾರ ಸಂಕಟಹರಣ ಸುಧಾರಸಧಾರ
ಶಂಖ ಚಕ್ರಧರ ಶ್ರೀಕರ ಸುಂದರ ನಿತ್ಯ ವಿನೂತನ ಸಾಕ್ಷಾತ್ಕಾರ
ವೇದ ಶಾಸ್ತ್ರ ಸಾರ ಸಕಲ ಸೂತ್ರಧಾರ ಶಿರಸಾ ನಮಾಮಿ ಮನಸಾ ಸ್ಮರಾಮಿ

ತಿರುಪತಿಗಿರಿ ವಾಸ ಶ್ರೀ ವೇಂಕಟೇಶ
ನೀನೊಲಿದ ಮನೆ ಮನೆಯು ಲಕ್ಷ್ಮಿ ನಿವಾಸ
ತಿರುಪತಿಗಿರಿ ವಾಸ ಶ್ರೀ ವೇಂಕಟೇಶ
ಶ್ರೀ ವೇಂಕಟೇಶ ಶ್ರೀ ವೇಂಕಟೇಶ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada