ಈ ಟಿವಿಯಲ್ಲಿ ವೀಕ್ಷಿಸಿ ಮೊಹಮ್ಮದ್ ರಫಿ ಸ್ಪೆಷಲ್

ಬರುವ ಜುಲೈ 31, 2012ಕ್ಕೆ ಮೊಹಮ್ಮದ್ ರಫಿ ನಮ್ಮನ್ನಗಲಿ (ಜುಲೈ 31, 1980) ಬರೋಬ್ಬರಿ 32 ವರ್ಷಗಳಾಗಲಿವೆ. ಅವರ ವಿಶಿಷ್ಟ ಕಂಠಸಿರಿಯಲ್ಲಿ ಮೂಡಿಬಂದಿರುವ ಸೋಲೋ, ಯುಗಳ ಗೀತೆ, ಸಮೂಹ ಗೀತೆಗಳ ಗಾನಕೊಳದಲ್ಲಿ, ಪ್ರೇಮ, ಶೋಕ, ಭಕ್ತಿ, ವಿಷಾದ ಮತ್ತು ತುಂಟತನದ ಭಾವ ಸ್ಫುರಿಸುವ ಹಾಡುಗಳು ಕೇಳುಗರ ಹೃನ್ಮನ ತಣಿಸುತ್ತಿವೆ.
ಈ ಅಮರ ಗಾಯಕನ ಹೆಸರಿನಲ್ಲಿ ರಫಿ ಅವರ ಪುತ್ರ ಶಾಹಿದ್ ರಫಿ, 'ಮೊಹಮ್ಮದ್ ರಫಿ ಅಕಾಡೆಮಿ'ಯನ್ನು ಸ್ಥಾಪಿಸಿದ್ದಾರೆ. ಹೆಸರಾಂತ ಹಿನ್ನೆಲೆ ಗಾಯಕಿಯರಾದ ಲತಾ ಮಂಗೇಷ್ಕರ್ ಹಾಗೂ ಆಶಾ ಭೋಸ್ಲೆ ಅವರು ಈ ಅಕಾಡೆಮಿಯ ವಿದ್ಯಾರ್ಥಿಗಳಿಗೆ ಸಂಗೀತ ಜ್ಞಾನವನ್ನು ಧಾರೆ ಎರೆಯುತ್ತಿದ್ದಾರೆ. ರಫಿ ಹಾಡುಗಳನ್ನು ಹಾಡಬಲ್ಲವರು ಮತ್ತು ತನ್ಮಯತೆಯಿಂದ ಆಲಿಸಬಲ್ಲವರು ಕಲೆತು ಒಂದು ಲಾಭ ರಹಿತ ಸಂಸ್ಥೆಯನ್ನು ಕಟ್ಟಿದ್ದಾರೆ. ಅದರ ಹೆಸರು 'ಬಾರ್ ಬಾರ್ ರಫಿ'.
ಈ ಮಹಾನ್ ಗಾಯಕನ ಹಾಡುಗಳು ಇಂದು ಎಂದೂ ಮೆರಯದ ಹಾಡು ಕಾರ್ಯಕ್ರಮದಲ್ಲಿ 'ಮೊಹಮ್ಮದ್ ರಫಿ' ಸ್ಪೆಷಲ್ ಸಂಚಿಕೆಯಾಗಿ ಈಟಿವಿಯಲ್ಲಿ ಪ್ರಸಾರವಾಗುವುದಲ್ಲದೇ ಮುಂದಿನ ಭಾನುವಾರ ಸಾಯಂಕಾಲ 5-00 ಗಂಟೆಗೆ ಮರುಪ್ರಸಾರವಾಗಲಿದೆ. ಇಂದು ಕೇಳಿದರೂ ಮತ್ತೆ ಕೇಳಲೇಬೇಕೆನಿಸುವ ಈ ಅಮರ-ಮಧುರ ಹಾಡುಗಳನ್ನು ಮತ್ತೆ ಮುಂದಿನ ಭಾನುವಾರ ನೀವು ಈಟಿವಿಯಲ್ಲಿ ಕೇಳುವ ಸದಾವಕಾಶ ನಿಮ್ಮದು. (ಒನ್ ಇಂಡಿಯಾ ಕನ್ನಡ)


Click it and Unblock the Notifications











