twitter
    For Quick Alerts
    ALLOW NOTIFICATIONS  
    For Daily Alerts

    ಈ ಟಿವಿಯಲ್ಲಿ ವೀಕ್ಷಿಸಿ ಮೊಹಮ್ಮದ್ ರಫಿ ಸ್ಪೆಷಲ್

    |

    Mohammed Rafi
    ಪಂಜಾಬ್ ನಲ್ಲಿ ಡಿಸೆಂಬರ್ 24, 1924 ರಲ್ಲಿ ಜನಿಸಿ ಗಾಯನ ಕ್ಷೇತ್ರದಲ್ಲಿ ನಲವತ್ತರಿಂದ ಎಂಬತ್ತರ ದಶಕದವರೆಗೆ 'ಅನಭಿಷಿಕ್ತ' ದೊರೆಯಾಗಿ ಆಳಿದವರು ಮಹಾನ್ ಗಾಯಕ ಮೊಹಮ್ಮದ್ ರಫಿ. ಮಧುರ ಹಾಡುಗಳ ಮೂಲಕ ಮತ್ತೆ ಮತ್ತೆ ನೆನಪಾಗುತ್ತಲೇ ಇರುವ ಈ ಗಾಯಕನನ್ನು ಇಂದು ಮತ್ತೆ ನೆನಪಿಸಿಕೊಳ್ಳುವ ಸಮಯ. ಇಂದು (ಜನವರಿ 29, 2012) ಸಾಯಂಕಾಲ '7-00 ಗಂಟೆ'ಗೆ ರವಿ ಬೆಳಗೆರೆ ನಡೆಸಿಕೊಡುವ 'ಈಟಿವಿ'ಕನ್ನಡ ವಾಹಿನಿಯ 'ಎಂದೂ ಮರೆಯದ ಹಾಡು' ಕಾರ್ಯಕ್ರಮದಲ್ಲಿ 'ಮಹಮ್ಮದ್ ರಫಿ' ಸ್ಪೆಷಲ್ ಸಂಚಿಕೆ ಪ್ರಸಾರವಾಗಲಿದೆ.

    ಬರುವ ಜುಲೈ 31, 2012ಕ್ಕೆ ಮೊಹಮ್ಮದ್ ರಫಿ ನಮ್ಮನ್ನಗಲಿ (ಜುಲೈ 31, 1980) ಬರೋಬ್ಬರಿ 32 ವರ್ಷಗಳಾಗಲಿವೆ. ಅವರ ವಿಶಿಷ್ಟ ಕಂಠಸಿರಿಯಲ್ಲಿ ಮೂಡಿಬಂದಿರುವ ಸೋಲೋ, ಯುಗಳ ಗೀತೆ, ಸಮೂಹ ಗೀತೆಗಳ ಗಾನಕೊಳದಲ್ಲಿ, ಪ್ರೇಮ, ಶೋಕ, ಭಕ್ತಿ, ವಿಷಾದ ಮತ್ತು ತುಂಟತನದ ಭಾವ ಸ್ಫುರಿಸುವ ಹಾಡುಗಳು ಕೇಳುಗರ ಹೃನ್ಮನ ತಣಿಸುತ್ತಿವೆ.

    ಈ ಅಮರ ಗಾಯಕನ ಹೆಸರಿನಲ್ಲಿ ರಫಿ ಅವರ ಪುತ್ರ ಶಾಹಿದ್ ರಫಿ, 'ಮೊಹಮ್ಮದ್ ರಫಿ ಅಕಾಡೆಮಿ'ಯನ್ನು ಸ್ಥಾಪಿಸಿದ್ದಾರೆ. ಹೆಸರಾಂತ ಹಿನ್ನೆಲೆ ಗಾಯಕಿಯರಾದ ಲತಾ ಮಂಗೇಷ್ಕರ್ ಹಾಗೂ ಆಶಾ ಭೋಸ್ಲೆ ಅವರು ಈ ಅಕಾಡೆಮಿಯ ವಿದ್ಯಾರ್ಥಿಗಳಿಗೆ ಸಂಗೀತ ಜ್ಞಾನವನ್ನು ಧಾರೆ ಎರೆಯುತ್ತಿದ್ದಾರೆ. ರಫಿ ಹಾಡುಗಳನ್ನು ಹಾಡಬಲ್ಲವರು ಮತ್ತು ತನ್ಮಯತೆಯಿಂದ ಆಲಿಸಬಲ್ಲವರು ಕಲೆತು ಒಂದು ಲಾಭ ರಹಿತ ಸಂಸ್ಥೆಯನ್ನು ಕಟ್ಟಿದ್ದಾರೆ. ಅದರ ಹೆಸರು 'ಬಾರ್ ಬಾರ್ ರಫಿ'.

    ಈ ಮಹಾನ್ ಗಾಯಕನ ಹಾಡುಗಳು ಇಂದು ಎಂದೂ ಮೆರಯದ ಹಾಡು ಕಾರ್ಯಕ್ರಮದಲ್ಲಿ 'ಮೊಹಮ್ಮದ್ ರಫಿ' ಸ್ಪೆಷಲ್ ಸಂಚಿಕೆಯಾಗಿ ಈಟಿವಿಯಲ್ಲಿ ಪ್ರಸಾರವಾಗುವುದಲ್ಲದೇ ಮುಂದಿನ ಭಾನುವಾರ ಸಾಯಂಕಾಲ 5-00 ಗಂಟೆಗೆ ಮರುಪ್ರಸಾರವಾಗಲಿದೆ. ಇಂದು ಕೇಳಿದರೂ ಮತ್ತೆ ಕೇಳಲೇಬೇಕೆನಿಸುವ ಈ ಅಮರ-ಮಧುರ ಹಾಡುಗಳನ್ನು ಮತ್ತೆ ಮುಂದಿನ ಭಾನುವಾರ ನೀವು ಈಟಿವಿಯಲ್ಲಿ ಕೇಳುವ ಸದಾವಕಾಶ ನಿಮ್ಮದು. (ಒನ್ ಇಂಡಿಯಾ ಕನ್ನಡ)

    English summary
    Mohammed Rafi Special Episode telecasts today evening at 7PM on Etv Kannada Channel. Repeat Telecast is on Sunday5 PM, Feb 5 2012. 
 
    Sunday, January 29, 2012, 15:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X