twitter
    For Quick Alerts
    ALLOW NOTIFICATIONS  
    For Daily Alerts

    ಗಾನ ಗಾರುಡಿಗ ಅಶ್ವತ್ಥ್ ಅಗಲಿ ಇಂದಿಗೆ ಒಂದು ವರ್ಷ

    By Rajendra
    |

    C Ashwath
    ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂದು ಹಾಡುವ ಮೂಲಕ ಕನ್ನಡಿಗರ ಮನೆಮನಗಳಲ್ಲಿ ಶಾಶ್ವತವಾಗಿ ನೆಲೆಸಿರುವ ದಿವಂಗತ ಸಿ.ಅಶ್ವತ್ಥ್ ನಮ್ಮನ್ನು ಅಗಲಿ ಇಂದಿಗೆ (ಡಿ. 29) ಒಂದು ವರ್ಷವಾಗುತ್ತದೆ. ಕಾಕತಾಳೀಯವೆಂಬಂತೆ ಇಂದು ಅವರ ಹುಟ್ಟು ಹಬ್ಬ ಕೂಡ. ಹುಟ್ಟುಹಬ್ಬದಂದೇ ವಿಧಿವಶರಾಗಿ ಅವರ ಅಪಾರ ಅಭಿಮಾನಿಗಳನ್ನು ಶೋಕ ಸಾಗರಕ್ಕೆ ದೂಡಿದ್ದರು ಅಶ್ವತ್ಥ್.

    ಅಶ್ವತ್ಥ್ ಅವರು ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದಲ್ಲಿ 1939 ಡಿಸೆಂಬರ್ 29ರಂದು ಜನಿಸಿದ್ದರು. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗಾಗಿ ಬೆಂಗಳೂರು ಯಶವಂತಪುರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಜವರಾಯ ಅವರನ್ನು ಮಂಗಳವಾರ (ಡಿ.29, 2009 ) ಬೆಳಗ್ಗೆ 11.30ಕ್ಕೆ ಸರಿಯಾಗಿ ಬಾರದ ಲೋಕಕ್ಕೆ ಕರೆದೊಯ್ದುಬಿಟ್ಟ.

    'ಕಾಕನ ಕೋಟೆ' ಚಿತ್ರದ ಮೂಲಕ ಚಲನಚಿತ್ರ ಕ್ಷೇತ್ರಕ್ಕೆ ಅಡಿಯಿಟ್ಟಿದ್ದ ಅಶ್ವತ್ಥ್, ಮೈಸೂರು ಮಲ್ಲಿಗೆ, ಶ್ರಾವಣ, ದೀಪಿಕಾ, ಶಿಶುನಾಶ ಷರೀಫ್ ಸಾಹೇಬರ ಗೀತೆಗಳಿಗೆ ಜೀವತುಂಬಿದ್ದರು. ಕನ್ನಡವೇ ಸತ್ಯ, ಸುಬ್ಬಾಭಟ್ಟರ ಮಗಳೆ,ಕೈಲಾಸಂ ಗೀತೆಗಳು,ನಾಗಮಂಡಲ, ಭಾವ ಬಿಂದು,ಕೂಡಲ ಸಂಗಮ ಮುಂತಾದ ಜನಪ್ರಿಯ ಧ್ವನಿಸುರುಳಿಗಳನ್ನು ಸಿ. ಅಶ್ವತ್ಥ್ ಹೊರತಂದಿದ್ದರು. ಅಲ್ಲದೇ,ಅಮೃತಧಾರೆ, ಹಠವಾದಿ,ಶಿಷ್ಯ,ತಿಮ್ಮ, ವೀರ, ಮಠ ಮುಂತಾದ ಚಲನಚಿತ್ರಗಳಲ್ಲೂ ತಮ್ಮ ಗಾನಸುಧೆ ಹರಿಸಿದ್ದರು.

    ಕನ್ನಡ ಚಿತ್ರಗಳು : ನಿಮ್ಮ ಅಮೂಲ್ಯ ಮತ ಯಾರಿಗೆ?

    ಹಾಡಿನ ಮೂಲಕ ಕನ್ನಡನಾಡು ಕಟ್ಟುವ ಕನಸು ಹೊಂದಿದ್ದ ಅಶ್ವತ್ಥ್ ಅವರ ಕನಸನ್ನು ನನಸು ಮಾಡಲು ಆದರ್ಶ ಸುಗುಮ ಸಂಗೀತ ಅಕಾಡೆಮಿ ಟ್ರಸ್ಟ್ ಮುಂದಾಗಿದೆ. ಕನ್ನಡ ಸಂಗೀತ ಲೋಕಕ್ಕೆ ಮೈಲಿಗಲ್ಲು ಎನ್ನಬಹುದಾದ ಈ ಕಾರ್ಯಕ್ರಮವನ್ನು ಟ್ರಸ್ಟ್ ಅಧ್ಯಕ್ಷ ಕಿಕ್ಕೇರಿ ಕೃಷ್ಣಮೂರ್ತಿ ಆಯೋಜಿಸಿದ್ದಾರೆ. ಸುಮಾರು ರು.1.20 ಕೋಟಿ ವೆಚ್ಚದಲ್ಲಿ ಬೆಂಗಳೂರು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬುಧವಾರ(ಡಿ. 29) ಅದ್ದೂರಿ ಕಾರ್ಯಕ್ರಮ ಆಯೋಜಿಸಲಾಗಿದೆ.

    ಈ ಕಾರ್ಯಕ್ರಮದಲ್ಲಿ ಯುವ ಗಾಯಕರ ತಂಡ ಆಶ್ವಥ್ ಅವರ ಸುಮಾರು 13 ಗೀತೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ಸಮೂಹ ನೃತ್ಯ ಸೇರಿದಂತೆ ಮೂರು ಸಾವಿರ ಕಲಾವಿದರು ಒಕ್ಕೊರಲು ಗಾಯನ ನೀಡಲಿದ್ದಾರೆ. ಈ ಅದ್ದೂರಿ ಕಾರ್ಯಕ್ರಮವನ್ನು ದಾಖಲಿಸಲು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ತಂಡ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ. ಕಾರ್ಯಕ್ರಮದ ಸಂಪೂರ್ಣ ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ. [

    English summary
    Renowned Kannada singer and light music composer Dr C Ashwath is remembered in a unique way on 29th of December. He left the earth on 29th December 2009 and the day also happened to be his birthday.
    Wednesday, December 29, 2010, 12:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X