ತುಂತುರು ನೀರ ಹಾಡು...ಯಡ್ಡಿ ಡ್ರಾಮ ನೋಡು

By Mahesh

Amrithavarshi song political spoof
ಅಮೃತವರ್ಷಿಣಿ ಸಿನೆಮಾದ ತುಂತುರು ಅಲ್ಲಿ ನೀರ ಹಾಡು…ಎಂಥಾ ಸುಮಧುರ ಗೀತೆ. ದೇವಾ ಅವರ ರಾಗ ಸಂಯೋಜನೆಯಲ್ಲಿ ಕಲ್ಯಾಣ್ ಅವರ ಸಾಹಿತ್ಯ ಹೊಂದಿಕೊಂಡು ರಸಿಕರ ಮನತಣಿಸಿದ್ದ ಗೀತೆಯನ್ನು ಪ್ರಸ್ತುತ ಹಗರಣಗಳ ಮಧ್ಯೆ ಹೀಗೆ ಅಣಕವಾಗಿ ಮಾಡಿದರೆ ಹೇಗೆ ಎಂದು ಮನಸಿನ ಮರ್ಮರ ಬ್ಲಾಗ್ ನಲ್ಲಿ ಇಣುಕಿದಾಗ ಕಾಣಿಸಿದ್ದು ಹೀಗೆ...

ಸೆಂಟರು… ಅಲ್ಲಿ 2ಜೀ ಪಾಡು…
ಸ್ಟೇಟಲಿ.. ಯಡ್ಡಿ ಡ್ರಾಮ ನೋಡು…
ಕಾಂಗ್ರೆಸ್ಸಿರಲಿ…ಬಿಜೆಪಿ ಇರಲೀ…
ಸ್ಕ್ಯಾಮಿನದೇ ಗೋಳಿನಲಿ…
ನಮ್ಮ ದೇಶ ತಿಂದರು.. ನಮ್ಮ ಲೀಡರು…
ಎಲ್ಲ ಅಧಿಕಾರದ ಲಾಭಿಗಾಗಿ….
ಏರಿ ಮೆರೆಯೋದು ಲಾಭಕಾಗಿ… ||ತು೦ತುರು||

ಕನಿಮೊಳೀ ರಾಜ… ಜೈಲಿನಲಿ.. ಕಲ್ಮಾಡಿಗೀಗ… ಮರೆವ ಕಾಯ್ಲೆ..
ಗಣಿ-ಭೂಮಿ ಧೂಳು… ಎಡ್ಡಿ ಮೇಲೆ.. ಕೋಟಿ ಕೋಟಿ ಡೀಲು… ತರಂಗದಲೆ..
ಸ್ಕ್ಯಾಮು ರೇಡು ಲ್ಯಾಂಡು ಮೈನ್ಸು… ಪೇಪರ್ ತುಂಬಾ ಇದೆಯೊ..
ನಿಮ್ಮ ಹೆಸ್ರು ಟಿವಿಯಲ್ಲಿ…ಚರ್ಚೆ ತುಂಬಾ ಬಿಸಿಯೋ.
ನಮ್ಮ ನಾಡ ನುಂಗಿದ ಇತಿಹಾಸವು
ನಿಮ್ಮ ನಿರ್ಗಮನವೆ ಪರಿಹಾರ
ನೀವು ಹೋಗೋದೆ ಕಾಯುವೆವು… ||ಸೆಂಟರು… ಅಲ್ಲಿ 2ಜೀ ಪಾಡು.||

ನಾಯಕರೇ ನಿಮ್ಮ… ಹಗರಣದಿ.. ನಾಡಿನ ಎಳ್ಗೆ…. ಕನವರಿಕೆ..
ಅಧಿಕಾರಶಾಹಿ…. ಇರೊವರೆಗೆ.. ಲೋಕಪಾಲ ಕಾಯ್ದೆ… ಮರೆಯೊಳಗೆ..
ಓಟು ಕೊಟ್ವಿ… ಆಗ ನಾವು..ಈಗ ನೀವು… ಮಂತ್ರಿ
ರಾಜ್ಯ-ದೇಶ… ಭೇದವಿಲ್ಲ…ಸಾವಿರಾರು ಕೋಟಿ… ತೀಂದ್ರಿ…
ಭ್ರಷ್ಟಾಚಾರ ನಿಮಗೆ… ನರನಾಡಿಯು..
ಅ೦ದು ನೀವು ಕೊಟ್ಟ ಭರವಸೆಯ.
ಇ೦ದು ನಾಕಾಣೆಯಾಗಿದೆಯ…. ||ಸೆಂಟರು… ಅಲ್ಲಿ 2ಜೀ ಪಾಡು.||

More from Filmibeat

English summary
Yeddyurappa Step Down Drama and UPA government 2G Scam is compared and a political spoof song lyrics is presented. Original song lyrics goes like this "tunturu alli neera haadu..'in Kannada Movie Amrithavarshini with Ramesh Aravind, Sharat Babu and Suhasini in the lead
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X