»   » ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು?

ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು?

Posted By:
Subscribe to Filmibeat Kannada

ರವಿಚಂದ್ರನ್ ಮತ್ತು ಹಂಸಲೇಖ ಜೋಡಿ ಮಾಡಿದ ಮ್ಯಾಜಿಕ್ ಗಳ ಪೈಕಿ ರಾಮಾಚಾರಿಚಿತ್ರವೂ ಒಂದು. 1991ರಲ್ಲಿ ತೆರೆಕಂಡ ಈ ಚಿತ್ರದ ಹಾಡುಗಳು ಅಂದು ಮಾತ್ರವಲ್ಲ, ಇಂದು ಸಹಾ ಮಧುರ, ಸುಮಧುರ. ಕವಿಗಳು ಸಹಾ ನಾಚುವಂತೆ ಪದಗಳ ಪೋಣಿಸಿ, ಕಿವಿಗಳರಳುವಂತಹ ಸಂಗೀತ ನೀಡಿದ್ದು ಹಂಸಲೇಖ ಹೆಗ್ಗಳಿಕೆ. ಈ ಚಿತ್ರದ ಯಾರಿವಳು.. ಹಾಡಿಗೆ ಜೀವತುಂಬಿದ್ದು ಮಾಲಾಶ್ರೀ ಸೌಂದರ್ಯ, ಅವರ ನಗೆ, ಅವರ ಸೊಬಗು.. ಅವೆಲ್ಲವೂ ಈಗ ಗತ ವೈಭವ!


;
ರಾಮನಳ್ಳಿ ತೋಟದಲಿ ಘಮ್ಮನೆಂದು ಅರಳಿದಳು
ಮಾತಿನಲಿ ಹೇಳಿದರೆ ತಾಳಕೆ ಸಿಗದು
ಹಾಡಲಿ ಕೇಳು ಅಂದದ ಸಾಲು

ಶ್ರೀಗಂಧ ಈ ಬೊಂಬೆ ಇವಳಿಗೇಕೆ ಗಂಧವೊ
ಬಂಗಾರ ಈ ಹೆಣ್ಣು ಇವಳಿಗೇಕೆ ಒಡವೆಯೊ
ತಾರೆಗೆ ಈ ತಾರೆಗೆ, ಈ ತಾರೆಗೇಕೆ ಮಿನುಗು ದೀಪವೊ
ಈ ಬೆಳಕಿಗೇಕೆ ಬಿರುಸು ಬಾಣವೊ
ಕೆನ್ನೆ ಮೇಲೆ ಸೇಬಿದೆ ಅಲ್ಲೆ ಗಿಣಿಯ ಮೂಗಿದೆ
ತೊಂಡೆ ಹಣ್ಣು ತುಟಿಯಲಿ ದಾಳಿಂಬೆ ಕಾಳು ಬಾಯಲಿ
ಏನಿದು ಏನು ಮೋಜಿದು ಏನಿದೇನು ಮೋಜಿದು

;
ರಾಮನಳ್ಳಿ ತೋಟದಲಿ ಘಮ್ಮನೆಂದು ಅರಳಿದಳು

ದಯಮಾಡಿ ಮುಗಿಲಾಚೆ ಸ್ವಲ್ಪ ನೋಡಿ ಎಲ್ಲರು
ಸಾಲಾಗಿ ಮುಕ್ಕೋಟಿ ದೇವರುಗಳು ನಿಂತರು
ದೇವತೆ ಈ ದೇವತೆ, ಈ ದೇವತೆಯ ಚೆಲುವ ನೋಡಲು
ಈ ಮಾಯಗಾತಿ ನಗುವ ಕಲಿಯಲು
ನೋಡಲಿವಳು ಹುಣಿಮೆ ಬಿರಿಯಲಿವಳು ನೈದಿಲೆ
ಚಿಗುರು ಮಾವು ವಯಸಿದೆ ಅಲ್ಲೆ ಕುಹೂ ದನಿಯಿದೆ
ಏನಿದು ಏನು ಮೋಜಿದು ಏನಿದೇನು ಮೋಜಿದು

;
ರಾಮನಳ್ಳಿ ತೋಟದಲಿ ಘಮ್ಮನೆಂದು ಅರಳಿದಳು
ಮಾತಿನಲಿ ಹೇಳಿದರೆ ತಾಳಕೆ ಸಿಗದು
ಹಾಡಲಿ ಕೇಳು ಅಂದದ ಸಾಲು.

ಇದನ್ನೂ ಓದಿ :
ಮಳೆ ಹಾಡು - 6 : ಸುವ್ವಿ ಸುವ್ವಾಲಿ, ನಿನ್ನ ಹಾಡಲ್ಲಿ, ರಂಗು ರಂಗೋಲಿ ಎದೆ ಗೂಡಲ್ಲಿ
ಮಳೆ ಹಾಡು - 5 :ಇವನು ಇನಿಯನಲ್ಲ, ತುಂಬ ಸನಿಹ ಬಂದಿಹನಲ್ಲ
ಮಳೆ ಹಾಡು - 4 : ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು...
ಮಳೆ ಹಾಡು - 3 : ಮುಂಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ
ಮಳೆ ಹಾಡು - 2 :ಒಂದೆ ಒಂದು ಸಾರಿ ಕಣ್ಮುಂದೆ ಬಾರೆ...
ಮಳೆ ಹಾಡು - 1 : ಕುಣಿದು ಕುಣಿದು ಬಾರೆ... ಒಲಿದು ಒಲಿದು ಬಾರೆ...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada