ಈಗ ಆಡಿಯೋ ರಿಲೀಸ್‌ನಲ್ಲಿ ಸುದೀಪ್ ಕನ್ನಡ ಡಿಂಡಿಮ

By Rajendra

ಕಿಚ್ಚ ಸುದೀಪ್ ಅಭಿನಯದ ತೆಲುಗು ಚಿತ್ರ 'ಈಗ'. ಯಶಸ್ವಿ ನಿರ್ದೇಶಕ ಎಂದು ನಿರೂಪಿಸಿಕೊಂಡಿರುವ ಎಸ್ ಎಸ್ ರಾಜಮೌಳಿ ಇದೇ ಮೊದಲ ಬಾರಿಗೆ ಸುದೀಪ್‌ಗೆ ಆಕ್ಷನ್ ಕಟ್ ಹೇಳಿದ್ದಾರೆ. ಇತ್ತೀಚೆಗೆ ಈ ಚಿತ್ರದ ಧ್ವನಿ ಮುದ್ರಿಕೆ ಬಿಡುಗಡೆಯಾಯಿತು.

ಹೈದರಾಬಾದ್‌ನ ಗ್ಲೋಬಲ್ ಪೀಸ್ ಸೆಂಟರ್‌ನಲ್ಲಿ ವರ್ಣರಂಜಿತ ಆಡಿಯೋ ಬಿಡುಗಡೆ ಸಮಾರಂಭ ನಡೆಯಿತು. ಈ ಅದ್ದೂರಿ ಸಮಾರಂಭದಲ್ಲಿ ಸುದೀಪ್ ಕನ್ನಡದಲ್ಲಿ ಮಾತನಾಡಿ ಎಲ್ಲರನ್ನೂ ಚಕಿತಗೊಳಿಸಿದರು. ಸಮಾರಂಭಕ್ಕೆ ಆಗಮಿಸಿದ್ದ ತೆಲುಗು ಚಿತ್ರರಂಗದ ಹಿರಿಯ ದಿಗ್ಗಜರನ್ನು ಸುದೀಪ್ ಕನ್ನಡದಲ್ಲೇ ಧನ್ಯವಾದಗಳನ್ನು ತಿಳಿಸಿದರು.

'ಈಗ' ಚಿತ್ರದಲ್ಲಿ ಸುದೀಪ್ ಮುಖ್ಯಪಾತ್ರವನ್ನು ಪೋಷಿಸುತ್ತಿರುವುದು ಗೊತ್ತೇ ಇದೆ. ಈ ಚಿತ್ರದ ನಾಯಕಿ ಸಮಂತಾ. ಚಿತ್ರಕ್ಕೆ ಎಂ.ಎಂ.ಕೀರವಾಣಿ ಸಂಗೀತವಿದೆ. ಇದೇ ತಿಂಗಳು, ಏಪ್ರಿಲ್ 27ಕ್ಕೆ ಬಿಡುಗಡೆಯಾಗಲಿರುವ ಈ ಚಿತ್ರದ ನಂತರ ಸುದೀಪ್ ಗ್ರಾಫ್ ಬಹಳಷ್ಟು ಮೇಲೇರಲಿದೆ ಎನ್ನಲಾಗಿದೆ. (ಏಜೆನ್ಸೀಸ್)

English summary
Kannada actor Sudeep surprised the audience by speaks in Kannada at Eega audio launch function held in Global Peace Centre, Hyderabad recently. He spoke a few lines in Kannada thanking some of the legends in Tollywood.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X