»   » ಪ್ರತಿಭಾವಂತ ಯುವ ಗಾಯಕ ಇಶ್ಮೀತ್ ಇನ್ನಿಲ್ಲ.

ಪ್ರತಿಭಾವಂತ ಯುವ ಗಾಯಕ ಇಶ್ಮೀತ್ ಇನ್ನಿಲ್ಲ.

Posted By:
Subscribe to Filmibeat Kannada

ಲೂಧಿಯಾನಾ, ಜು. 30 : ಪ್ರತಿಭಾವಂತ ಯುವ ಗಾಯಕ ಹಾಗೂ ವಾಯ್ಸ್ ಆಫ್ ಇಂಡಿಯಾದ (ಭಾರತದ ಧ್ವನಿ)ಇಶ್ಮೀತ್ ಸಿಂಗ್(19)ಮಾಲ್ಡೀವ್ಸ್ ರಾಜಧಾನಿ ಮಾಲೆಯಲ್ಲಿ ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದಾರೆ.

ಮಧ್ಯಮ ಕುಟುಂಬದಿಂದ ಬಂದಿದ್ದ ಇಶ್ಮೀತ್ ಸಂಗೀತ ಸಂಸ್ಥೆಯೊಂದರ ಜತೆ ಮಾಡಿಕೊಂಡಿದ್ದ ಗುತ್ತಿಗೆ ಅನ್ವಯ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮಾಲ್ಡೀವ್ಸ್ ಗೆ ತೆರಳಿದ್ದರು. ಹೊಟೇಲ್ ನ ಈಜುಕೊಳದಲ್ಲಿ ಮುಳುಗಿ ಇಶ್ಮೀತ್ ಮೃತಪಟ್ಟಿದ್ದಾರೆ ಎಂದು ಮ್ಯೂಸಿಕ್ ಕಂಪನಿಯ ಅಧಿಕಾರಿಗಳು ದೂರವಾಣಿ ಮೂಲಕ ಕುಟುಂಬ ಸದಸ್ಯರಿಗೆ ತಿಳಿಸಿದ್ದಾರೆ.

ಇದು ನಮಗೆ ತೀರಾ ಆಘಾತಕಾರಿ ಸುದ್ದಿ. ನಮಗೆ ಬೇರೆ ಮಾಹಿತಿ ಇಲ್ಲ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಮಂಗಳವಾರವಷ್ಟೇ ಅವರು ಮುಂಬೈಯಿಂದ ಮಾಲ್ಡೀವ್ಸ್ ಗೆ ಪ್ರಯಾಣ ಬೆಳಸಿದ್ದರು. ಹಾಡಿನ ಸ್ಪರ್ಧೆಯಲ್ಲಿ ಕಳೆದ ವರ್ಷ ನವೆಂಬರ್ 26ರಂದು ಅವರು ಉತ್ತರ ಪ್ರದೇಶದ ಹರ್ಷಿತ್ ಅವರನ್ನು ಸೋಲಿಸಿ ಭಾರತದ ಧ್ವನಿ ಸ್ಪರ್ಧೆಯಲ್ಲಿ ವಿಜೇತರಾಗಿದ್ದರು.

(ದಟ್ಸ್ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada