twitter
    For Quick Alerts
    ALLOW NOTIFICATIONS  
    For Daily Alerts

    ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ

    By Staff
    |

    ವಿಷ್ಣುವರ್ಧನ್ ಅವರು ಅದ್ಭುತವಾಗಿ ಹಾಡಿರುವ ಈ ಹಾಡು, 1982ರಲ್ಲಿ ತೆರೆಕಂಡ ಜಿಮ್ಮಿಗಲ್ಲು" ಚಿತ್ರದ್ದು. ಸಾಹಿತಿ ವೇಣುಗೋಪಾಲ ಕಾಸರಗೋಡು ಅವರ ಕಾದಂಬರಿ ಆಧರಿಸಿ ತೆಗೆದ ಸಿನಿಮಾ ಜಿಮ್ಮಿಗಲ್ಲು. ಜೀವನವೆಂಬ ಹೋರಾಟದಲ್ಲಿ ಎಡವಿಬಿದ್ದ; ಸೋಲಿನಿಂದ ತತ್ತರಿಸಿಹೋದ; ಮುಂದೇನು ಎಂದು ತಿಳಿಯದೆ ಕಕ್ಕಾಬಿಕ್ಕಿಯಾದ ಎಲ್ಲರಿಗೂ ಧೈರ್ಯ ಹೇಳುವಂತಿರುವುದು ತುತ್ತು ಅನ್ನ ತಿನ್ನೋಕೆ" ಹಾಡಿನ ಹೆಚ್ಚುಗಾರಿಕೆ.

    ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ
    ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ
    ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ
    ಅಂಗೈಯಗಲ ಜಾಗ ಸಾಕು ಹಾಯಾಗಿರೋಕೆ
    ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ

    ಕಾಡ್ನಾಗೊಂದು ಮರವೇ ಒಣಗಿ ಬಿದ್ರೆ ಏನಾಯ್ತು
    ಊರ್ನಾಗೊಂದು ಮನೆಯೇ ಉರಿದು ಹೋದ್ರೆ ಏನಾಯ್ತು
    ಕಾಡ್ನಾಗೊಂದು ಮರವೇ ಒಣಗಿ ಬಿದ್ರೆ ಏನಾಯ್ತು
    ಊರ್ನಾಗೊಂದು ಮನೆಯೇ ಉರಿದು ಹೋದ್ರೆ ಏನಾಯ್ತು
    ಒಂದು ಅಲ್ಲೇ ನನ್ನ ಹೋಗು ಅಂದರೇನು
    ಸ್ವರ್ಗದಂತಾ ಊರು ನನ್ನ ಹತ್ತಿರ ಕರೆದಾಯ್ತು
    ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ

    ದುಡಿಯೋದಕ್ಕೆ ಮೈಯ್ಯಾ ತುಂಬಾ ಶಕ್ತಿ ತುಂಬೈತೆ
    ಅಡ್ಡ ದಾರಿ ಹಿಡಿಯೋದ್ ತಪ್ಪು ಅಂಥ ಗೊತ್ತೈತೆ
    ದುಡಿಯೋದಕ್ಕೆ ಮೈಯ್ಯಾ ತುಂಬಾ ಶಕ್ತಿ ತುಂಬೈತೆ
    ಅಡ್ಡ ದಾರಿ ಹಿಡಿಯೋದ್ ತಪ್ಪು ಅಂಥ ಗೊತ್ತೈತೆ
    ಕಷ್ಟಾ ಒಂದೇ ಬರದು ಸುಖವೂ ಬರದೇ ಇರದು
    ರಾತ್ರೀ ಮುಗಿದಾ ಮೇಲೇ ಹಗಲು ಬಂದೇ ಬತ್ತೈತೆ
    ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ

    ಹರಿಯೋ ನದಿಯು ಒಂದೇ ಕಡೆ ನಿಲ್ಲೊಕ್ಕಾಗಲ್ಲ
    ಹುಟ್ಟಿದ ಮನುಷ ಒಂದೇ ಊರಲಿ ಬಾಳೋಕಾಗಲ್ಲ
    ಹರಿಯೋ ನದಿಯು ಒಂದೇ ಕಡೆ ನಿಲ್ಲೊಕ್ಕಾಗಲ್ಲ
    ಹುಟ್ಟಿದ ಮನುಷ ಒಂದೇ ಊರಲಿ ಬಾಳೋಕಾಗಲ್ಲ
    ದೇವ್ರು ತಾನೇ ನಂಗೆ ಅಪ್ಪ ಅಮ್ಮ ಎಲ್ಲಾ
    ಸಾಯೋ ತನಕಾ ನಂಬಿದವರ ಕೈ ಬಿಡಾಕಿಲ್ಲ
    ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ
    ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ
    ಅoಗೈಯಗಲ ಜಾಗ ಸಾಕು ಹಾಯಾಗಿರೋಕೆ
    ಹಾಯಾಗಿರೋಕೆ..ಹಾಯಾಗಿರೋಕೆ..

    Wednesday, December 30, 2009, 12:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X