»   » ಸವಿಯೊ ಸವಿಯೊ ಒಲವ ನೆನಪು

ಸವಿಯೊ ಸವಿಯೊ ಒಲವ ನೆನಪು

Subscribe to Filmibeat Kannada

ಹಿಮಾಲಯದ ಗುಡ್ಡದ ಇಳಿಜಾರುಗಳಲ್ಲಿ ಇಳಿಯುವಾಗ ತಣ್ಣನೆಯ ಮಂಜುಗಡ್ಡೆ ಪಾದಕ್ಕೆ ಸೋಕಿ ಮೈಯಲ್ಲೆಲ್ಲಾ ಬೆಚ್ಚನೆಯ ಕಾಮನೆಗಳು ಉಕ್ಕಿ ಈ ಹಾಡು ನಿಮ್ಮ ಮನದಲ್ಲಿ ಸುಳಿಯದಿದ್ದರೆ ಕೇಳಿ. ನೆನಪು ಎಂದೆಂದೂ ಸುಮಧುರ.

ಚಿತ್ರ : ಸವಿಸವಿ ನೆನಪು
ನಿರ್ದೇಶನ :
ಸಂತೋಷ ರೈ ಪತಾಜೆ
ಸ೦ಗೀತ:
ಆರ್.ಪಿ.ಪಟ್ನಾಯಕ್
ಸಾಹಿತ್ಯ: ನಾಗತಿಹಳ್ಳಿ ಚ೦ದ್ರಶೇಖರ್
ಗಾಯನ:
ಸೋನು ನಿಗ೦, ಶ್ರೇಯಾ ಘೋಶಾಲ್
ಅಭಿನಯಿಸಿದ್ದು : ಪ್ರೇಮ್ ಕುಮಾರ್, ಮಲ್ಲಿಕಾ ಕಪೂರ್.

ಎದೆಯ ನಿಧಿಯೆ ಅನುರಾಗ ಎದೆಯ ನಿಧಿಯೆ ಅನುರಾಗ

ಪ್ರತಿಕ್ಷಣದಲಿ ಪ್ರಾರ್ಥನೆಯಲಿ ಕಾಡುವೆ ಏತಕೆ
ಪ್ರತಿಕ್ಷಣದಲಿ ಪ್ರಾರ್ಥನೆಯಲಿ ಕಾಡುವೆ ಏತಕೆ
ಸೂರ್ಯನ೦ತೆ ನಾ ಹೊಳೆವಾಗ ಭೂಮಿಯ೦ತೆ ನೀ ಬಾ
ಭೂಮಿಯ೦ತೆ ನಾ ಕರೆವಾಗ ಮಳೆಬಿಲ್ಲ೦ತೆ ನೀ ಬಾ

ಎದೆಯ ನಿಧಿಯೆ ಅನುರಾಗ

ನೀ ಬರುವ ದಾರಿಯಲ್ಲಿ ಒಲವೆ೦ಬ ರ೦ಗವಲ್ಲಿ
ನಿನಗಾಗಿ ಮೂಡಿದೆ ನೋಡು ಬಾ
ಒಡಲಾಳ ತ೦ತು ಸ್ನೇಹ ಒಡಮೂಡಿ ಬ೦ತು
ಮೋಹಕತೆಯಾಗಿ ಕಾಡಿತು ಮೂಡಿತು

ಆ ಗದ್ಯದೊಳದ್ದಿದ ಪದ್ಯದ ಮಧ್ಯದ ಅದ್ಭುತ ಭಾವಾರ್ಥವೆ
ಆ ಗದ್ಯದೊಳದ್ದಿದ ಪದ್ಯದ ಮಧ್ಯದ ಅದ್ಭುತ ಭಾವಾರ್ಥವೆ

ಎದೆಯ ನಿಧಿಯೆ ಅನುರಾಗ

ಮರುಭೂಮಿ ಯಾನದಲ್ಲಿ ಅಮೃತದ ಧಾರೆ ಚೆಲ್ಲಿ
ತ೦ಪಾಯ್ತು ಜೀವಕೆ ಭಾವಕೆಹಾಹಾಹ
ಮು೦ಜಾನೆ ಮ೦ಜಿನಲ್ಲು ಚುಮುಗುಡುವ ಬೆಳಗಿನಲ್ಲು
ಬಿಸಿಯಾಯ್ತು ಮೈಯಿಗು ಮನಸಿಗುನೀ ಬೆಚ್ಚನೆ

ಪ್ರೀತಿಯ ಹುಚ್ಚಿನ ಮೆಚ್ಚಿನ ಇಚ್ಚೆಯ ಹೆಣ್ಣಲ್ಲವೆ ನೀ
ಬೆಚ್ಚನೆ ಪ್ರೀತಿಯ ಹುಚ್ಚಿನ ಮೆಚ್ಚಿನ ಇಚ್ಚೆಯ ಗ೦ಡಲ್ಲವೆ

ಎದೆಯ ನಿಧಿಯೆ ಅನುರಾಗ ಎದೆಯ ನಿಧಿಯೆ ಅನುರಾಗ

ಪ್ರತಿಕ್ಷಣದಲಿ ಪ್ರಾರ್ಥನೆಯಲಿ ಕಾಡುವೆ ಏತಕೆ
ಪ್ರತಿಕ್ಷಣದಲಿ ಪ್ರಾರ್ಥನೆಯಲಿ ಕಾಡುವೆ ಏತಕೆ
ಸೂರ್ಯನ೦ತೆ ನಾ ಹೊಳೆವಾಗ ಭೂಮಿಯ೦ತೆ ನೀ ಬಾ
ಭೂಮಿಯ೦ತೆ ನಾ ಕರೆವಾಗ ಮಳೆಬಿಲ್ಲ೦ತೆ ನೀ ಬಾ

ಎದೆಯ ನಿಧಿಯೆ ಅನುರಾಗ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada