ಹೆಸರಾಂತ ಗಾಯಕ ಮೊಹಮ್ಮದ್ ರಫಿ ಅಕಾಡೆಮಿ

ಈ ಸುಸಂದರ್ಭದಲ್ಲಿ ರಫಿ ಅವರ ಪುತ್ರ ಶಾಹಿದ್ ರಫಿ ಮಹಾನ್ ಗಾಯಕನ ನೆನಪಿಗಾಗಿ 'ಮೊಹಮ್ಮದ್ ರಫಿ ಅಕಾಡೆಮಿ'ಯನ್ನು ಸ್ಥಾಪಿಸುತ್ತಿದ್ದಾರೆ. ಹೆಸರಾಂತ ಹಿನ್ನೆಲೆ ಗಾಯಕರಾದ ಲತಾ ಮಂಗೇಷ್ಕರ್ ಹಾಗೂ ಆಶಾ ಭೋಸ್ಲೆ ಅವರು ಅಕಾಡೆಮಿಯ ವಿದ್ಯಾರ್ಥಿಗಳಿಗೆ ಸಂಗೀತ ಜ್ಞಾನವನ್ನು ಧಾರೆ ಎರೆಯಲಿದ್ದಾರೆ.
ಜನಪ್ರಿಯ ಹಿನ್ನೆಲೆ ಗಾಯಕರಾದ ರಾಜು ನೌಶದ್ (ನೌಶದ್ ಅವರ ಪುತ್ರ), ಆನಂದ್ ಲಿಬ್ ಮಜರೂಹ್ ಸುಲ್ತಾನ್ ಪುರಿ (ಮಜರೂಹ್ ಸುಲ್ತಾನ್ ಪುರಿ ಅವರ ಪುತ್ರ), ರುಹಾನ್ ಮಹೇಂದ್ರ ಕಪೂರ್ (ಮಹೇಂದ್ರ ಕಪೂರ್ ಪುತ್ರ) ಮತ್ತು ಫಿರ್ದೂಸ್ ಶಾಹಿದ್ ರಫಿ (ರಫಿ ಅವರ ಮೊಮ್ಮಗ) ಇವರೆಲ್ಲಾ ಅಕಾಡೆಮಿಯಲ್ಲಿರುತ್ತಾರೆ.
ಮೊಹಮ್ಮದ್ ರಫಿ ಅವರ ಅಭಿಮಾನಿಗಳು ದಶಕಗಳ ಕಾಲದಿಂದ ರಫಿ ಅವರ ಗಾಯನ ಗುಣವನ್ನು ಹಾಡುತ್ತ ಗುನುಗುತ್ತ ಕೊಂಡಾಡಿಕೊಂಡು ಬಂದಿದ್ದಾರೆ. ರಫಿ ಹಾಡುಗಳನ್ನು ಹಾಡಬಲ್ಲವರು ಮತ್ತು ತನ್ಮಯತೆಯಿಂದ ಆಲಿಸಬಲ್ಲವರು ಕಲೆತು ಒಂದು ಲಾಭ ರಹಿತ ಸಂಸ್ಥೆಯನ್ನು ಕಟ್ಟಿದ್ದಾರೆ. ಅದರ ಹೆಸರು ಬಾರ್ ಬಾರ್ ರಫಿ.
ಮೊಹಮ್ಮದ್ ರಫಿ ಹಿಂದಿ ಚಿತ್ರ ಗೀತೆಗಳು ಶಾಹಿದ್ ರಫಿ ಮೊಹಮ್ಮದ್ ರಫಿ ಅಕಾಡೆಮಿ ಬಾಲಿವುಡ್ ಸಂಗೀತ ಹಿನ್ನೆಲೆ ಸಂಗೀತ mohammed rafi shahid rafi legendary singer hindi songs hindi classics mohammed rafi academy


Click it and Unblock the Notifications