twitter
    For Quick Alerts
    ALLOW NOTIFICATIONS  
    For Daily Alerts

    ಹೆಸರಾಂತ ಗಾಯಕ ಮೊಹಮ್ಮದ್ ರಫಿ ಅಕಾಡೆಮಿ

    By Rajendra
    |

    Mohammed Rafi Academy
    ಗಾಯನ ಕ್ಷೇತ್ರದಲ್ಲಿ ನಲವತ್ತರಿಂದ ಎಂಬತ್ತರ ದಶಕದ ತನಕ ಅನಭಿಷಿಕ್ತ ದೊರೆಯಾಗಿ ಆಳಿದ ಮಹಾನ್ ಗಾಯಕ ಮೊಹಮ್ಮದ್ ರಫಿ. ಇದೀಗ ರಫಿ ಮತ್ತೆ ನೆನಪಾಗುತ್ತಿದ್ದಾರೆ. ಕಾರಣ ಜುಲೈ 31ಕ್ಕೆ ಮೊಹಮ್ಮದ್ ರಫಿ ಕಳೆದುಹೋಗಿ ಮೂವತ್ತು ವರ್ಷವಾಯಿತು. ಸೋಲೋ, ಯುಗಳ ಗೀತೆ, ಸಮೂಹ ಗಾನಕೊಳದಲ್ಲಿ, ಪ್ರೇಮ, ಶೋಕ, ಭಕ್ತಿ, ವಿಷಾದ ಮತ್ತು ತುಂಟತನದ ಹಾಡುಗಳ ಕೇಳುಗರ ತನ್ಮನ ತಣಿಸುತ್ತಿವೆ.

    ಈ ಸುಸಂದರ್ಭದಲ್ಲಿ ರಫಿ ಅವರ ಪುತ್ರ ಶಾಹಿದ್ ರಫಿ ಮಹಾನ್ ಗಾಯಕನ ನೆನಪಿಗಾಗಿ 'ಮೊಹಮ್ಮದ್ ರಫಿ ಅಕಾಡೆಮಿ'ಯನ್ನು ಸ್ಥಾಪಿಸುತ್ತಿದ್ದಾರೆ. ಹೆಸರಾಂತ ಹಿನ್ನೆಲೆ ಗಾಯಕರಾದ ಲತಾ ಮಂಗೇಷ್ಕರ್ ಹಾಗೂ ಆಶಾ ಭೋಸ್ಲೆ ಅವರು ಅಕಾಡೆಮಿಯ ವಿದ್ಯಾರ್ಥಿಗಳಿಗೆ ಸಂಗೀತ ಜ್ಞಾನವನ್ನು ಧಾರೆ ಎರೆಯಲಿದ್ದಾರೆ.

    ಜನಪ್ರಿಯ ಹಿನ್ನೆಲೆ ಗಾಯಕರಾದ ರಾಜು ನೌಶದ್ (ನೌಶದ್ ಅವರ ಪುತ್ರ), ಆನಂದ್ ಲಿಬ್ ಮಜರೂಹ್ ಸುಲ್ತಾನ್ ಪುರಿ (ಮಜರೂಹ್ ಸುಲ್ತಾನ್ ಪುರಿ ಅವರ ಪುತ್ರ), ರುಹಾನ್ ಮಹೇಂದ್ರ ಕಪೂರ್ (ಮಹೇಂದ್ರ ಕಪೂರ್ ಪುತ್ರ) ಮತ್ತು ಫಿರ್ದೂಸ್ ಶಾಹಿದ್ ರಫಿ (ರಫಿ ಅವರ ಮೊಮ್ಮಗ) ಇವರೆಲ್ಲಾ ಅಕಾಡೆಮಿಯಲ್ಲಿರುತ್ತಾರೆ.

    ಮೊಹಮ್ಮದ್ ರಫಿ ಅವರ ಅಭಿಮಾನಿಗಳು ದಶಕಗಳ ಕಾಲದಿಂದ ರಫಿ ಅವರ ಗಾಯನ ಗುಣವನ್ನು ಹಾಡುತ್ತ ಗುನುಗುತ್ತ ಕೊಂಡಾಡಿಕೊಂಡು ಬಂದಿದ್ದಾರೆ. ರಫಿ ಹಾಡುಗಳನ್ನು ಹಾಡಬಲ್ಲವರು ಮತ್ತು ತನ್ಮಯತೆಯಿಂದ ಆಲಿಸಬಲ್ಲವರು ಕಲೆತು ಒಂದು ಲಾಭ ರಹಿತ ಸಂಸ್ಥೆಯನ್ನು ಕಟ್ಟಿದ್ದಾರೆ. ಅದರ ಹೆಸರು ಬಾರ್ ಬಾರ್ ರಫಿ.

    Saturday, July 31, 2010, 13:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X