ಮುಖ್ಯಮಂತ್ರಿ ಗಾದಿಯು ಹೋದರೂ...ಆಗದಿರಲಿ ಬಂಧನ

By Mahesh

Yeddyurappa Step Down Spoof song lyrics
ಯಡಿಯೂರಪ್ಪ ಅವರ ಕೊನೆಗೂ ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಯುತ್ತಿದ್ದಾರೆ. ಅರಮನೆ ಮೈದಾನದಲ್ಲಿ ನಡೆದಿರುವ ಬಲಿಜ ಜನಾಂಗದ ಸಮಾವೇಶದಲ್ಲಿ ಭಾವೋದ್ವೇಗದಿಂದ ತಮ್ಮ ಕಟ್ಟ ಕಡೆಯ ಸಾರ್ವಜನಿಕ ಭಾಷಣ ಮುಗಿಸಿದ್ದಾರೆ, ರೇಸ್ ಕೋರ್ಸ್ ರಸ್ತೆಯ ತಮ್ಮ ನಿವಾಸದಲ್ಲಿ ಎಲ್ಲಾ ಶಾಸಕ, ಸಚಿವರುಗಳ ಜೊತೆ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದಾರೆ.

ಡಾ. ವಿಷ್ಣುವರ್ಧನ್ ಅಭಿನಯದ ಬಂಧನ ಚಿತ್ರದ ವಿಷಾದ ಗೀತೆ...ಪ್ರೇಮದ ಕಾದಂಬರಿ.. ಬರೆದೆನು ಕಣ್ಣೀರಲಿ ಜನಪ್ರಿಯ ಸಾಹಿತ್ಯವನ್ನು ಯಡಿಯೂರಪ್ಪ ಅವರ ಸರ್ಕಾರ ಪತನಕ್ಕೆ ಹೋಲಿಸಿ ಮುಖ್ಯಮಂತ್ರಿ ಗಾದಿಯು ಹೋದರೂ.... ಆಗದಿರಲಿ ಬಂಧನ ಎಂದು ಮನಸಿನ ಮರ್ಮರ ಬ್ಲಾಗ್ ನಲ್ಲಿ ವಿಜಯರಾಜ್ ಕನ್ನಂತ ಈ ತಕ್ಷಣಕ್ಕೆ ಬರೆದಿದ್ದಾರೆ. ಓದಿ ಆನಂದಿಸಿ...

ಯಡ್ಡಿಯ ಕಾದಂಬರಿ.... ಮುಗಿಯಿತು ಕಣ್ಣೀರಲಿ, ಮುಖ್ಯಮಂತ್ರಿ ಗಾದಿಯು ಹೋದರೂ.... ಆಗದಿರಲಿ ಬಂಧನ,
ಯಡ್ಡಿಯ ಕಾದಂಬರಿ.... ಮುಗಿಯಿತು ಕಣ್ಣೀರಲಿ, ಮುಖ್ಯಮಂತ್ರಿ ಗಾದಿಯು ಹೋದರೂ...
ಆಗದಿರಲಿ ಬಂಧನ ......!!

ಮೊದಲ ದಿನಕೂ , ಕೊನೆಯ ನಾಟಕಕೂ, ನಡುವೆ ಏನಿತು ಅವಾಂತರ,
ಮೊದಲ ದಿನಕೂ , ಕೊನೆಯ ನಾಟಕಕೂ, ನಡುವೆ ಏನಿತು ಅವಾಂತರ,
ಬಂದು ಹೋಯಿತು ಕೋಟಿ ಸಾವಿರ, ತಿಂದೆ ನಾನು ನಿರಂತರ!!
ಯಡ್ಡಿಯ ಕಾದಂಬರಿ.... ಮುಗಿಯಿತು ಕಣ್ಣೀರಲಿ, ಮುಖ್ಯಮಂತ್ರಿ ಗಾದಿಯು ಹೋದರೂ...
ಆಗದಿರಲಿ ಬಂಧನ ......!!

ನನ್ನ ಗಾದಿಯ ನಂಟು ಕಳೆದು , ಕೆಳಗೆ ಇಳಿಸಿದ್ರು ನನ್ನನು,
ನನ್ನ ಗಾದಿಯ ನಂಟು ಕಳೆದು , ಕೆಳಗೆ ಇಳಿಸಿದ್ರು ನನ್ನನು,
ಕೆಳಗೆ ಇಳಿವಾಗ ,ಒಂದೇ ಆಸೆ, ಹೈಕಮಾಂಡ್ ಆರಿಸಲಿ ನಮ್ಮವ್ರನ್ನು

ಯಡ್ಡಿಯ ಕಾದಂಬರಿ.... ಮುಗಿಯಿತು ಕಣ್ಣೀರಲಿ, ಮುಖ್ಯಮಂತ್ರಿ ಗಾದಿಯು ಹೋದರೂ...
ಆಗದಿರಲಿ ಬಂಧನ ......!!
ಆಗದಿರಲಿ..........ಉಹುಂ ಉಹೂಂ. ಬಂಧನ ......!!

More from Filmibeat

English summary
Yeddyurappa Step Down Drama ended finally. Yeddyurappa become emotional in his last speech in a public event. Yeddyurappa's situation is spoofed with Original song lyrics Bandhana Movie "Premada Kadambari....'
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X