»   » ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ!!!

ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ!!!

Posted By:
Subscribe to Filmibeat Kannada


ಮಲ್ಲಚಿತ್ರವನ್ನು ಪೋಲಿ ಚಿತ್ರವೆಂದರೆ ರವಿಚಂದ್ರನ್ ಕೋಪಿಸಿಕೊಳ್ಳಬಹುದು. ಹಾಗೆ ಗುರ್ತಿಸುವುದು ಸಹಾ ತಪ್ಪು. ಇದೊಂದು ಶೃಂಗಾರ ಚಿತ್ರ ಎಂದರೆ ಹೆಚ್ಚಿನ ಆಕ್ಷೇಪಣೆಯಿಲ್ಲ ಅನಿಸುತ್ತದೆ. ಚಿತ್ರದಲ್ಲಿ ಮತ್ತು ಟೀವಿಯಲ್ಲಿ ಯಮ್ಮೋ ಯಮ್ಮೋ ನೋಡ್ಡೆ ನೋಡ್ದೆ ಹಾಡನ್ನು ಕಂಡಾಗ, ಸ್ವಲ್ಪ ಅತಿಯಾಯಿತು ಅನಿಸುತ್ತದೆ. ಇದು ರವಿಚಂದ್ರನ್ ಸಾಹಿತ್ಯ ಎಂದು ಗೇಲಿ ಮಾಡಬೇಕಾಗುತ್ತದೆ. ಆದರೆ ಹಾಡಿನ ಒಳಹೋದಂತೆ ಬೆರಗು ಸಾಲುಸಾಲಿಗೂ ಎದುರಾಗುತ್ತದೆ.

ನಲ್ಲನಲ್ಲೆಯರ ಸರಸ ಸಂಭಾಷಣೆ ಮುದ ತರುತ್ತದೆ. ನನ್ನೊಳಗೆ ಮನಸೊಳಗೆ ಬ೦ದೆ ನೀ ಹೇಗೆ..?ಎನ್ನುವ ನಲ್ಲೆಯ ಪ್ರಶ್ನೆಗೆ ಉಸಿರಲ್ಲಿ ಉಸಿರಾಗಿ ಬ೦ದೆ ನಾ ಒಳಗೆ!ಎನ್ನುವ ಉತ್ತರವನ್ನು ನಲ್ಲ ನೀಡುತ್ತಾನೆ. ವಾಹ್!

ರವಿಚಂದ್ರನ್ ಪದ ಚಮತ್ಕಾರ, ಕಾವ್ಯ ವೈಭವ ಗೋಚರವಾಗುತ್ತದೆ. ಅನುಮಾನವಿದ್ದರೇ ಒಂದು ಸಲ ಕಣ್ಣಾಡಿಸಿ.. ಅಂದ ಹಾಗೇ ಈ ಹಾಡಿಗೆ ಸಂಗೀತ ನೀಡಿದ್ದು ರವಿಚಂದ್ರನ್ ಎಂಬುದು, ಅವರ ಜೊತೆ ಹಾಡಿನಲ್ಲಿ ಮೈಮರೆತು ಕಾಣಿಸಿಕೊಂಡದ್ದು ಪ್ರಿಯಾಂಕ ಎಂಬ ಸಂಗತಿ ನಿಮಗೆಲ್ಲರಿಗೂ ಗೊತ್ತೇ ಇದೆ.ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ
ನಾ ಧಿನ್ ಧಿನ್ನ ನಾ ಧಿನ್ ಧಿನ್ ಧಿನ್ನ
ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ
ನೋಡ್ಬಾರ್ದನ್ನ ನಾ ನೋಡ್ದೆ

ಯಮ್ಮೋ ಯಮ್ಮೋ ಮಾಡ್ದೆ ಮಾಡ್ದೆ
ನಾ ಧಿನ್ ಧಿನ್ನ ನಾ ಧಿನ್ ಧಿನ್ ಧಿನ್ನ
ಯಮ್ಮೋ ಯಮ್ಮೋ ಮಾಡ್ದೆ ಮಾಡ್ದೆ
ಮಾಡ್ಬಾರ್ದನ್ನ ನಾ ಮಾಡ್ದೆ

ಬೆತ್ತಲೆಯಾ ಕತ್ತಲಲ್ಲಿ
ಬೆಳಕಾಗಿ ನಾ ನೋಡ್ದೆ
ಬೆಳಕನ್ನು ಅಪ್ಪಿಕೊ೦ಡೆ
ಅಪ್ಪಿಕೊ೦ಡು ತಪ್ಪು ಮಾಡ್ದೆ

ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ
ನಾ ಧಿನ್ ಧಿನ್ನ ನಾ ಧಿನ್ ಧಿನ್ ಧಿನ್ನ

ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ
ನೋಡ್ಬಾರ್ದನ್ನ ನಾ ನೋಡ್ದೆ

ನನ್ನೊಳಗೆ ಮನಸೊಳಗೆ
ಬ೦ದೆ ನೀ ಹೇಗೆ
ಉಸಿರಲ್ಲಿ ಉಸಿರಾಗಿ
ಬ೦ದೆ ನಾ ಒಳಗೆ
ನಾ ಧಿನ್ ಧಿನ್ನ ನಾ ಧಿನ್ ಧಿನ್ ಧಿನ್ನ

ಹೊರಗೂ ನೀ ಒಳಗೂ ನೀ
ಹೇಗೆ ನೀ ಹೇಳು
ಮುತ್ತಿಗೆ ನಾನಮ್ಮ
ಮತ್ತಿಗೆ ಅವಳಮ್ಮ
ಸರಸ ಸರಸ
ಅರಸ ಅರಸ
ಪ್ರೇಮಕೆ ಸರಸಾನೇ ಅರಸ
ಯಮಹೊ ಯಮಹಾ ಪ್ರೇಮಕ್ಕೆ
ಶರಣು ಶರಣು ಪ್ರೇಮಕ್ಕೆ

ಯಮ್ಮೋ ಯಮ್ಮೋ
ನಾ ಧಿನ್ ಧಿನ್ನ ನಾ ಧಿನ್ ಧಿನ್ ಧಿನ್ನ
ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ
ನೋಡ್ಬಾರ್ದನ್ನ ನಾ ನೋಡ್ದೆ

ಮುತ್ತಿಗೂ ಮತ್ತಿಗೂ
ನ೦ಟೇನು ಹೇಳು
ಅಧರಗಳ ಗುಟ್ಟನ್ನು
ಕಣ್ಣಿಗೆ ಕೇಳು
ನಾ ಧಿನ್ ಧಿನ್ನ ನಾ ಧಿನ್ ಧಿನ್ ಧಿನ್ನ

ನಾಚಿತು ಆ ಕಣ್ಣು
ರೆಪ್ಪೇ ಮುಚ್ಚಿತು
ಕಣ್ಣಿಗೆ ಕಾಣದು
ಅಧರಗಳಾ ಗುಟ್ಟು
ಸರಸ ಸರಸ
ಅರಸ ಅರಸ
ಪ್ರೇಮ ಸರಸಕೆ ನೀನೇ ಅರಸ
ಯಮಹೊ ಯಮಹಾ ಪ್ರೇಮಕ್ಕೆ
ಶರಣು ಶರಣು ಪ್ರೇಮಕ್ಕೆ

ಯಮ್ಮೋ ಯಮ್ಮೋ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada