For Quick Alerts
  ALLOW NOTIFICATIONS  
  For Daily Alerts

  'ಮಾ ತುಜೆ ಸಲಾಂ..' ಕ್ಯೂಟೆಸ್ಟ್ ವರ್ಷನ್; ಪುಟ್ಟ ಕಂದನ ಹಾಡಿಗೆ ನೆಟ್ಟಿಗರು ಫಿದಾ

  |

  ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ ಅವರ 'ಮಾ ತುಜೆ ಸಲಾಂ...' ಎವರ್ ಗ್ರೀನ್ ದೇಶಭಕ್ತಿ ಗೀತೆಗಳಲ್ಲಿ ಒಂದಾಗಿದೆ. ಹೆಚ್ಚು ಜನಪ್ರಿಯತೆ ಪಡೆದಿರುವ ಈ ಹಾಡನ್ನು ಮುದ್ದಾದ ಪುಟಾಣಿ ಬಾಯಲ್ಲಿ ಕೇಳಿ ನೆಟ್ಟಿಗರು ಫಿದಾ ಆಗಿದ್ದಾರೆ.

  ಮಿಜೋರಾಂನ ಎಸ್ತರ್ ಹಮ್ಟೆ ಎಂಬ 4 ವರ್ಷದ ಪುಟ್ಟ ಕಂದ ಮಾ ತುಜೆ ಸಲಾಂ...ಎಂದು ಹಾಡುತ್ತಿರುವುದನ್ನು ನೋಡಿ ನೆಟ್ಟಿಗರು ವಾವ್ ಎನ್ನುತ್ತಿದ್ದಾರೆ. ಈ ಪುಟ್ಟ ಪೋರಿ ಹಾಡುತ್ತಿರುವುದನ್ನು ಕೇಳುವುದೇ ಒಂದು ಆನಂದ. ತ್ರಿವರ್ಣ ಧ್ವಜ ಹಿಡಿದು ನೃತ್ಯ ಮಾಡುತ್ತಾ ಹಾಡುತ್ತಿರುವ ಪುಟಾಣಿ ಈಗ ಇಂಟರ್ ನೆಟ್ ನಲ್ಲಿ ಸ್ಟಾರ್ ಆಗಿ ಹೊರಮ್ಮಿದ್ದಾಳೆ.

  ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ ಗಾಗಿ ಮತ್ತೆ ಮೈಕ್ ಹಿಡಿದ ನಟ ಧನುಷ್

  ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಅವರಿಗೆ ದೊಡ್ಡ ಹೆಸರು ತಂದುಕೊಟ್ಟ ಗೀತೆ ಇದು. ಈ ಹಾಡಿನ ಅನೇಕರು ಅನೇಕ ರೀತಿಯಲ್ಲಿ ಮರುಸೃಷ್ಟಿ ಮಾಡಿದ್ದಾರೆ. ಆದರೆ ಮಿಜೋರಾಂನ ಈ ಬಾಲಕಿ ಮಾ ತುಜೆ ಸಲಾಂ ಹಾಡಿಗೆ ತನ್ನದೆ ಆದ ಚಟ್ ಕೊಟ್ಟಿದ್ದಾಳೆ. ಈ ಪುಟಾಣಿ ಹಾಡಿರುವ ಈ ಹಾಡು ಈಗ ಹೊಸ ಅಲೆ ಸೃಷ್ಟಿಸಿದೆ.

  ಅಂದ್ಹಾಗೆ ಎಸ್ತರ್ ಹಮ್ಟೆಯ ಯೂಟ್ಯೂಬ್ ಚಾನಲ್ ಕೂಡ ಇದೆ. ಇದರಲ್ಲಿ ಮಿಜೋ, ಹಿಂದಿ ಮತ್ತು ಇಂಗ್ಲಿಷ್ ಹಾಡುಗಳನ್ನು ಅಪ್ಲೋಡ್ ಮಾಡುತ್ತಿದ್ದಾಳೆ. ಇದೀಗ ಮಾ ತುಜೆ ಸಲಾಂ ಹಾಡು ಎಸ್ತರ್ ಗೆ ದೊಡ್ಡ ಹೆಸರು ತಂದುಕೊಟ್ಟಿದೆ.

  English summary
  4-year-Old Mizoram Girl Sings the Cutest Version of AR Rahman's 'Maa Tujhe Salaam' Song.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X