For Quick Alerts
  ALLOW NOTIFICATIONS  
  For Daily Alerts

  ಡಿ-ಬಾಸ್ ಜನ್ಮದಿನಕ್ಕೆ ಅಭಿಮಾನಿಗಳು ನೀಡುತ್ತಿರುವ ವಿಶೇಷ ಉಡುಗೊರೆ ಇದು.!

  |
  ದರ್ಶನ್ ಗೋಸ್ಕರ ತಯಾರಾಗಿರುವ ವಿಶೇಷ ಗಿಫ್ಟ್ ಏನು ಗೊತ್ತಾ..?

  ಚಾಲೆಂಜಿಂಗ್ ಸ್ಟಾರ್ ದರ್ಶನ್ 43ನೇ ಹುಟ್ಟುಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಡಿ-ಬಾಸ್ ಜನ್ಮದಿನವನ್ನು ಅದ್ಧೂರಿಯಾಗಿ ಅಲ್ಲದೇ ಹೋದರೂ, ಅರ್ಥಪೂರ್ಣವಾಗಿ ಆಚರಿಸಲು ಅಭಿಮಾನಿಗಳು ಸಕಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

  ಜನ್ಮದಿನದಂದು ಕೇಕ್, ಹಾರ, ಪಟಾಕಿ ತರುವ ಬದಲು ದವಸ, ಧಾನ್ಯ ತನ್ನಿ.. ಅದನ್ನ ಆಶ್ರಮ, ಅನಾಥಾಶ್ರಮಗಳಿಗೆ ತಲುಪಿಸುವ ಜವಾಬ್ದಾರಿ ನಮ್ಮದು ಅಂತ ದರ್ಶನ್ ಹೇಳಿದ್ದರು. ದರ್ಶನ್ ಮಾತಿಗೆ ಬೆಲೆ ಕೊಟ್ಟು ಬರ್ತಡೇ ದಿನ ಧಾನ್ಯಗಳನ್ನು ನೀಡಲು ಫ್ಯಾನ್ಸ್ ಮುಂದಾಗಿದ್ದಾರೆ.

  ಈ ಗ್ಯಾಪ್ ನಲ್ಲಿ ದರ್ಶನ್ ಜನ್ಮದಿನಕ್ಕಾಗಿ ಕೆಲ ಫ್ಯಾನ್ಸ್ ಸೇರಿ ಒಂದು ವಿಶೇಷ ಉಡುಗೊರೆ ನೀಡುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತಡೇಗಾಗಿ ಫ್ಯಾನ್ಸ್ ಒಂದು ಹಾಡು ಸಮರ್ಪಿಸುತ್ತಿದ್ದಾರೆ. ಸುಪ್ರೀತ್ ಗಾಂಧಾರ ಮತ್ತು ತಂಡ 'ಬಾಸ್ ಬಾಸ್ ಡಿ ಬಾಸ್' ಎಂಬ ಹಾಡನ್ನ ದರ್ಶನ್ ಗಾಗಿ ರೆಡಿ ಮಾಡಿದ್ದಾರೆ.

  ಸುಪ್ರೀತ್ ಗಾಂಧಾರ ಸಂಗೀತ ಸಂಯೋಜನೆ ಮಾಡಿರುವ 'ಬಾಸ್ ಬಾಸ್ ಡಿ ಬಾಸ್' ಹಾಡಿಗೆ ಸಿದ್ಧಾರ್ಥ್ ಗೌಡ ಸಾಹಿತ್ಯ ಬರೆದಿದ್ದಾರೆ. ಹಾಡಿಗೆ ಸುಪ್ರೀತ್ ಗಾಂಧಾರ, ಮಧ್ವೇಶ್, ಶ್ರೀರಂಗ ದರ್ಶನ್, ವೇದ.ವಿ.ಭಟ್, ಅರ್ಪಿತ ದನಿಗೂಡಿಸಿದ್ದಾರೆ.

  ಅಷ್ಟಕ್ಕೂ, ದರ್ಶನ್ ಬರ್ತಡೇಗಾಗಿ ಸುಪ್ರೀತ್ ಗಾಂಧಾರ ಈಗಾಗಲೇ 'ಕರುನಾಡ ದಳಪತಿ' ಮತ್ತು 'ಡಿ ಬಾಸ್' ಎಂಬ ಎರಡು ಹಾಡುಗಳನ್ನು ಅರ್ಪಿಸಿದ್ದಾರೆ. ಇದೀಗ 'ಬಾಸ್ ಬಾಸ್ ಡಿ ಬಾಸ್' ಹಾಡನ್ನು ಈ ವರ್ಷದ ದರ್ಶನ್ ಹುಟ್ಟಿದ ದಿನ ಸುಪ್ರೀತ್ ಗಾಂಧಾರ ಹೊರ ತರುತ್ತಿದ್ದಾರೆ. ದರ್ಶನ್ ಜನ್ಮದಿನಕ್ಕೆ ಅಭಿಮಾನಿಗಳಿಂದ ಇದೊಂದು ಕ್ರಿಯೇಟಿವ್ ಗಿಫ್ಟ್.

  English summary
  43rd Birthday: Special song made by fans dedicated to Challenging Star Darshan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X