For Quick Alerts
  ALLOW NOTIFICATIONS  
  For Daily Alerts

  ಬೆಂಗಳೂರಿನ ಅರಮನೆ ಮೈದಾನದಲ್ಲಿ ಧನುಷ್ ನೋಡಿ

  |

  ಈಗ ಯಾರನ್ನಾದರೂ 'ಕೊಲವೆರಿ ಡಿ' ಹಾಡಿನ ಬಗ್ಗೆ ಕೇಳುವಂತಿಲ್ಲ. ಅದರ ಸೆನ್ಸೇಷನ್ ಸಾಗರದಾಚೆಗೂ ಹಬ್ಬಿದೆ. ಭಾರತದಾದ್ಯಂತ ಈ ಹಾಡು ಪ್ರಖ್ಯಾತವಾಗಿದ್ದು ಹೆಚ್ಚಾಗಿ ಯುವಜನತೆಯನ್ನು ಹುಚ್ಚಾಗಿಸಿದೆ. ಅದರಲ್ಲೂ, ಬರೆದು ಹಾಡಿದ ಧನುಷ್ ಹಾಗೂ ಸಂಗೀತ ನೀಡಿದ ಅನಿರುದ್ದ್ ಈಗ ಯುವಜನೆತೆಯ ಆರಾಧ್ಯದೈವ.

  ಅದನ್ನೆಲ್ಲಾ ಗಮನಿಸುತ್ತಿರುವ ಕಾರ್ಪೋರೇಟ್ ಹಾಗೂ ಬಹಳಷ್ಟು ಸಂಸ್ಥೆಗಳು ಈಗ ಈ ಹಾಡಿನ 'ಲೈವ್ ಇನ್ ಕಂನ್ಸರ್ಟ್' ಹಿಂದೆ ಬಿದ್ದಿವೆ. ಸಾಕಷ್ಟು ಕಡೆ ಈಗಾಗಲೇ ನಡೆದಿರುವ 'ಕೊಲವೆರಿ ಡಿ ಲೈವ್ ಇನ್' ಕಾರ್ಯಕ್ರಮ ಇದೀಗ ಬೆಂಗಳೂರಿಗೆ ಲಗ್ಗೆ ಇಡುತ್ತಿದೆ. ಈ ಹಾಡಿನ ಕೇಂದ್ರಬಿಂದು ಧನುಷ್, ರಜನಿಕಾಂತ್ ಅಳಿಯ ಬೆಂಗಳೂರಿಗೆ ಬಂದು ಸಿನಿಪ್ರೇಕ್ಷಕರು ಹಾಗೂ ಸಂಗೀತಪ್ರಿಯರನ್ನು ರಂಜಿಸಲಿದ್ದಾರೆ.

  ಇದೇ ತಿಂಗಳು 12ರಂದು (ಫೆಬ್ರವರಿ 12, 2012) ಬೆಂಗಳೂರಿನ ಅರಮನೆ ಮೈದಾನದಲ್ಲಿ ಧನುಷ್ "ಲೈವ್ ಇನ್ ಕನ್ಸರ್ಟ್' ನಡೆಯಲಿದೆ.ಗಾಂಧಿನಗರದ ಗ್ರೀನ್ ಹೌಸ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ತಿಳಸಲಾಗಿದ್ದು ಫೆಬ್ರವರಿ 12ರ ಸಾಯಂಕಾಲ 7-00 ಗಂಟೆಗೆ ಅರಮನೆ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಪಾಸ್ ಹಾಗೂ ಟಿಕೆಟ್ ಮಾಹಿತಿ ಸದ್ಯದಲ್ಲೇ ಸಿಗಲಿದೆ. (ಒನ್ ಇಂಡಿಯಾ ಕನ್ನಡ)

  English summary
  Tamil Actor Dhanush's Kolaveri D Live Concert will be held on Feb 14 2012, at Bangalore Palace Ground.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X