ಕೊರೊನಾ ಕಾರಣ: ಗ್ರ್ಯಾಮಿ ಪ್ರಶಸ್ತಿ ಸಮಾರಂಭ ಮುಂದೂಡಿಕೆ
ಸಂಗೀತ ಲೋಕದ ಆಸ್ಕರ್ ಎಂದೇ ಕರೆಯಲಾಗುವ 'ಗ್ರ್ಯಾಮಿ' ಪ್ರಶಸ್ತಿ ವಿತರಣಾ ಸಮಾರಂಭವು ಕೊರೊನಾ ಕಾರಣದಿಂದಾಗಿ ಮುಂದೂಡಲ್ಪಟ್ಟಿದೆ.
Recommended Video
63ನೇ ಗ್ರ್ಯಾಮಿ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಇದೇ ಜನವರಿ 31 ರಂದು ಅಮೆರಿಕದ ಲಾಸ್ ಏಂಜಲ್ಸ್‌ನಲ್ಲಿ ನಡೆಸಲು ನಿಶ್ಚಯಿಸಲಾಗಿತ್ತು. ಆದರೆ ಲಾಸ್ ಏಂಜಲ್ಸ್ ಹಾಗೂ ಇನ್ನಿತರ ಕಡೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಪ್ರಶಸ್ತಿ ವಿತರಣಾ ಸಮಾರಂಭವನ್ನು ಮುಂದೂಡಲಾಗಿದೆ.
ಜನವರಿ ಯಲ್ಲಿ ಸಾಮಾನ್ಯವಾಗಿ ಗ್ರ್ಯಾಮಿ ಪ್ರಶಸ್ತಿ ಸಮಾರಂಭ ನಡೆಸಲಾಗುತ್ತಿತ್ತು. ಇದೀಗ ಕೋವಿಡ್ ಕಾರಣದಿಂದ ಜನವರಿ ಬದಲಿಗೆ ಮಾರ್ಚ್ 14 ರಂದು ಸಮಾರಂಭ ನಡೆಸುವುದಾಗಿ ಆಯೋಜಕರು ಹೇಳಿದ್ದಾರೆ. ಈ ಬಾರಿ ಬಿಯಾನ್ಸೆ, ಟೇಲರ್ ಸ್ವಿಫ್ಟ್, ದುವಾ ಲಿಪಾ, ರೋಡಿ ರಿಚ್ಚಿ ಇನ್ನೂ ಹಲವರ ನಡುವೆ ಪ್ರಶಸ್ತಿಗಾಗಿ ಸ್ಪರ್ಧೆ ಏರ್ಪಟ್ಟಿತ್ತು.

'ಜೀವ ಮತ್ತು ಆರೋಗ್ಯದ ಮುಂದೆ ಯಾವುದೂ ಸಹ ಮುಖ್ಯವಲ್ಲ. ಕೋವಿಡ್ ವಿರುದ್ಧ ಕೋಟ್ಯಂತರ ಮಂದಿ ಹೋರಾಡುತ್ತಿದ್ದಾರೆ ಇಂಥಹಾ ಸಮಯದಲ್ಲಿ ಸಣ್ಣ ಅಜಾರಕತೆಯೂ ಸರಿಯಲ್ಲ' ಎಂದು ಗ್ರ್ಯಾಮಿ ಆಯೋಜಕರು ಹೇಳಿದ್ದಾರೆ.
ಆಸ್ಕರ್ ಹಾಗೂ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಮಾರಂಭಗಳೂ ಸಹ ಕೊರೊನಾ ಕಾರಣಕ್ಕೆ ಮುಂದೂಡಲ್ಪಟ್ಟಿವೆ. ಫೆಬ್ರವರಿ 28 ರಂದು ನಡೆಯಬೇಕಿದ್ದ ಆಸ್ಕರ್ ಪ್ರಶಸ್ತಿಯು ಏಪ್ರಿಲ್ 25 ಕ್ಕೆ ಮುಂದೂಡಲ್ಪಟ್ಟಿದೆ.
ಜನವರಿಯಲ್ಲಿ ನಡೆಸಲಾಗುತ್ತಿದ್ದ ಗೋಲ್ಡನ್ ಗ್ಲೋಬ್ ಪ್ರಶಸ್ತಿ ವಿತರಣಾ ಸಮಾರಂಭವನ್ನು ಫೆಬ್ರವರಿ28 ಕ್ಕೆ ಮುಂದೂಡಲಾಗಿದೆ.


Click it and Unblock the Notifications











