twitter
    For Quick Alerts
    ALLOW NOTIFICATIONS  
    For Daily Alerts

    ಕೊರೊನಾ ಕಾರಣ: ಗ್ರ್ಯಾಮಿ ಪ್ರಶಸ್ತಿ ಸಮಾರಂಭ ಮುಂದೂಡಿಕೆ

    |

    ಸಂಗೀತ ಲೋಕದ ಆಸ್ಕರ್ ಎಂದೇ ಕರೆಯಲಾಗುವ 'ಗ್ರ್ಯಾಮಿ' ಪ್ರಶಸ್ತಿ ವಿತರಣಾ ಸಮಾರಂಭವು ಕೊರೊನಾ ಕಾರಣದಿಂದಾಗಿ ಮುಂದೂಡಲ್ಪಟ್ಟಿದೆ.

    Recommended Video

    ಜೀವನ ಕಂಪ್ಲೀಟ್ ಆಯ್ತು ಅಂತ ಅನ್ನಿಸ್ತಾ ಇದೆ | Raghavendra Rajkumar Exclusive Interview

    63ನೇ ಗ್ರ್ಯಾಮಿ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಇದೇ ಜನವರಿ 31 ರಂದು ಅಮೆರಿಕದ ಲಾಸ್ ಏಂಜಲ್ಸ್‌ನಲ್ಲಿ ನಡೆಸಲು ನಿಶ್ಚಯಿಸಲಾಗಿತ್ತು. ಆದರೆ ಲಾಸ್ ಏಂಜಲ್ಸ್ ಹಾಗೂ ಇನ್ನಿತರ ಕಡೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಪ್ರಶಸ್ತಿ ವಿತರಣಾ ಸಮಾರಂಭವನ್ನು ಮುಂದೂಡಲಾಗಿದೆ.

    ಜನವರಿ ಯಲ್ಲಿ ಸಾಮಾನ್ಯವಾಗಿ ಗ್ರ್ಯಾಮಿ ಪ್ರಶಸ್ತಿ ಸಮಾರಂಭ ನಡೆಸಲಾಗುತ್ತಿತ್ತು. ಇದೀಗ ಕೋವಿಡ್ ಕಾರಣದಿಂದ ಜನವರಿ ಬದಲಿಗೆ ಮಾರ್ಚ್ 14 ರಂದು ಸಮಾರಂಭ ನಡೆಸುವುದಾಗಿ ಆಯೋಜಕರು ಹೇಳಿದ್ದಾರೆ. ಈ ಬಾರಿ ಬಿಯಾನ್ಸೆ, ಟೇಲರ್ ಸ್ವಿಫ್ಟ್, ದುವಾ ಲಿಪಾ, ರೋಡಿ ರಿಚ್ಚಿ ಇನ್ನೂ ಹಲವರ ನಡುವೆ ಪ್ರಶಸ್ತಿಗಾಗಿ ಸ್ಪರ್ಧೆ ಏರ್ಪಟ್ಟಿತ್ತು.

     63 Grammy Award Function Postponed To March 14 Due To COVID 19

    'ಜೀವ ಮತ್ತು ಆರೋಗ್ಯದ ಮುಂದೆ ಯಾವುದೂ ಸಹ ಮುಖ್ಯವಲ್ಲ. ಕೋವಿಡ್‌ ವಿರುದ್ಧ ಕೋಟ್ಯಂತರ ಮಂದಿ ಹೋರಾಡುತ್ತಿದ್ದಾರೆ ಇಂಥಹಾ ಸಮಯದಲ್ಲಿ ಸಣ್ಣ ಅಜಾರಕತೆಯೂ ಸರಿಯಲ್ಲ' ಎಂದು ಗ್ರ್ಯಾಮಿ ಆಯೋಜಕರು ಹೇಳಿದ್ದಾರೆ.

    ಆಸ್ಕರ್ ಹಾಗೂ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಮಾರಂಭಗಳೂ ಸಹ ಕೊರೊನಾ ಕಾರಣಕ್ಕೆ ಮುಂದೂಡಲ್ಪಟ್ಟಿವೆ. ಫೆಬ್ರವರಿ 28 ರಂದು ನಡೆಯಬೇಕಿದ್ದ ಆಸ್ಕರ್ ಪ್ರಶಸ್ತಿಯು ಏಪ್ರಿಲ್ 25 ಕ್ಕೆ ಮುಂದೂಡಲ್ಪಟ್ಟಿದೆ.

    ಜನವರಿಯಲ್ಲಿ ನಡೆಸಲಾಗುತ್ತಿದ್ದ ಗೋಲ್ಡನ್ ಗ್ಲೋಬ್ ಪ್ರಶಸ್ತಿ ವಿತರಣಾ ಸಮಾರಂಭವನ್ನು ಫೆಬ್ರವರಿ28 ಕ್ಕೆ ಮುಂದೂಡಲಾಗಿದೆ.

    English summary
    63 Grammy award function postponed from January 31 to March 14 due to COVID 19.
    Thursday, January 7, 2021, 9:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X