ವಿಡಿಯೋ : ಮತ್ತೆ 'ಅನಿಸುತಿದೆ..' ಎಂದು ಹಾಡಿದ ಗಣೇಶ್
'ಅನಿಸುತಿದೆ ಯಾಕೋ ಇಂದು...ನೀನೇನೆ ನನ್ನವಳೆಂದು..' ನಟ ಗಣೇಶ್ ತಮ್ಮ ಜೀವನದಲ್ಲಿ ಮರೆಯಲಾಗದ ಹಾಡು. 'ಮುಂಗಾರು ಮಳೆ'ಯಲ್ಲಿ ನೆನೆಯುತ್ತಾ ಗಣೇಶ್ 'ಅನಿಸುತ್ತಿದೆ..' ಎಂದಿದ್ದರು. ಆದರೆ, ಈಗ ಮತ್ತೆ ಗಣೀ ಅನಿಸುತ್ತಿದೆ ಅಂತ ಹಾಡಿದ್ದಾರೆ.
ಗಣೇಶ್ ನಟನೆಯ '99' ಸಿನಿಮಾದ ಮತ್ತೊಂದು ಇಂದು ಬಿಡುಗಡೆಯಾಗಿದೆ. 'ಮೊದಲ ಸಲ ಬದುಕಿರುವೆ.. ಅನಿಸುತಿದೆ...' ಎಂದು ಶುರುವಾಗುವ ಈ ಹಾಡನ್ನು ಕವಿರಾಜ್ ಬರೆದಿದ್ದಾರೆ.
ಸಂಚಿತ್ ಹೆಗ್ಡೆ ಹಾಗೂ ಶ್ರೇಯಾ ಘೋಷಲ್ ಈ ಹಾಡನ್ನು ಹಾಡಿದ್ದಾರೆ. ಸಂಚಿತ್ ಧ್ವನಿಯಲ್ಲಿ 'ಅನಿಸುತ್ತಿದೆ..' ಪದ ಮತ್ತಷ್ಟು ಚೆನ್ನಾಗಿ ಕೇಳುತ್ತಿದೆ. ಅರ್ಜುನ್ ಜನ್ಯ ಸಿನಿಮಾಗೆ ಸಂಗೀತ ನೀಡಿದ್ದಾರೆ.

ಅರ್ಜುನ್ ಜನ್ಯ ಅವರ ನೂರನೇ ಸಿನಿಮಾ ಇದಾಗಿದೆ. ಸಿನಿಮಾದಲ್ಲಿ ಗಣೇಶ್ ಜೋಡಿಯಾಗಿ ಭಾವನ ನಟಿಸಿದ್ದಾರೆ. ರಾಮು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಪ್ರೀತಮ್ ಗುಬ್ಬಿ ಚಿತ್ರದ ನಿರ್ದೇಶನ ಮಾಡಿದ್ದಾರೆ.
'99' ಚಿತ್ರ ತಮಿಳಿನ '96' ಸಿನಿಮಾದ ರಿಮೇಕ್ ಆಗಿದೆ. ಅಲ್ಲಿ ವಿಜಯ್ ಸೇತುಪತಿ ಮತ್ತು ತ್ರಿಷಾಗೆ ಸಿನಿಮಾ ದೊಡ್ಡ ಹೆಸರು ತಂದು ಕೊಟ್ಟಿತ್ತು.


Click it and Unblock the Notifications











