For Quick Alerts
  ALLOW NOTIFICATIONS  
  For Daily Alerts

  ಗಾಯಕಿ ಮಂಗ್ಲಿ ವಿರುದ್ಧ ದೂರು ನೀಡಿದ ಬಿಜೆಪಿ ಕಾರ್ಪೊರೇಟರ್

  |

  'ರಾಬರ್ಟ್' ಸಿನಿಮಾದ ಹಾಡಿನಿಂದಾಗಿ ಕರ್ನಾಟಕದಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿಕೊಂಡಿರುವ ತೆಲುಗು ಗಾಯಕಿ ಮಂಗ್ಲಿ ವಿರುದ್ಧ ದೂರು ದಾಖಲಾಗಿದೆ.

  ಗಾಯಕಿ ಮಂಗ್ಲಿ ಇತ್ತೀಚೆಗಷ್ಟೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಾಡೊಂದನ್ನು ಬಿಡುಗಡೆ ಮಾಡಿದ್ದರು. ಈ ಹಾಡು ವಿವಾದಕ್ಕೆ ಕಾರಣವಾಗಿದ್ದು, ಇದೇ ಹಾಡಿನ ಕಾರಣಕ್ಕೆ ಬಿಜೆಪಿ ಕಾರ್ಪೊರೇಟರ್ ಒಬ್ಬರು ಮಂಗ್ಲಿ ವಿರುದ್ಧ ದೂರು ದಾಖಲಿಸಿದ್ದಾರೆ.

  ವಿವಾದಕ್ಕೆ ಸಿಲುಕಿದ 'ರಾಬರ್ಟ್' ಮಂಗ್ಲಿಯ ಹೊಸ ಹಾಡುವಿವಾದಕ್ಕೆ ಸಿಲುಕಿದ 'ರಾಬರ್ಟ್' ಮಂಗ್ಲಿಯ ಹೊಸ ಹಾಡು

  ತೆಲುಗು ರಾಜ್ಯಗಳಲ್ಲಿ ಆಚರಣೆ ಮಾಡಲಾಗುವ ಪ್ರತಿ ಹಬ್ಬಕ್ಕೂ ಅದಕ್ಕೆ ಹೊಂದುವಂತಹಾ ಹಾಡುಗಳನ್ನು ಹಾಡಿ ಬಿಡುಗಡೆ ಮಾಡುತ್ತಾ ಬಂದಿದ್ದಾರೆ ಮಂಗ್ಲಿ. ಅಂತೆಯೇ ಈಗ ಬೊನಾಲ ಹಬ್ಬ ನಡೆಯುತ್ತಿದ್ದು ಹಬ್ಬಕ್ಕೆ ತಕ್ಕಂತೆ 'ಬೋನಂ ಪಾಟ' ಎಂಬ ಹಾಡನ್ನು ಖುದ್ದು ಹಾಡಿ, ಅಭಿನಯಿಸಿ ಬಿಡುಗಡೆ ಮಾಡಿದ್ದಾರೆ.

  ಕೆಲವು ಸಾಲುಗಳ ಬಗ್ಗೆ ಆಕ್ಷೇಪ

  ಕೆಲವು ಸಾಲುಗಳ ಬಗ್ಗೆ ಆಕ್ಷೇಪ

  ಆದರೆ ಈ ಹಾಡಿನಲ್ಲಿ ಗ್ರಾಮ ದೇವತೆ ಮೈಸಮ್ಮನಿಗೆ ಅಪಮಾನ ಮಾಡಲಾಗಿದೆ ಎಂದು ಕೆಲವರು ಆರೋಪಿಸಿದ್ದಾರೆ. 'ಮರದ ಕೆಳಗೆ ಸಂಬಂಧಿಗಳ ಹಾಗೆ ಕುಳಿತಿದ್ದೀಯ', 'ನಾವು ಹರಕೆಗಳನ್ನು ಮಾಡಿ ಪೂಜಿಸಿದರೂ ನೀನು ವರವನ್ನು ಕೊಡುತ್ತಿಲ್ಲ', 'ಬೊಂಬೆಯಂತೆ ಅಲುಗದೇ ಇದ್ದೀಯ', 'ನಿನ್ನ ಕರ್ತವ್ಯ ಮರೆತಿದ್ದೀಯ' ಎಂಬಿತ್ಯಾದಿ ಸಾಲುಗಳು ಹಾಡಿನಲ್ಲಿವೆ. ಇದು ಕೆಲವರ ಆಕ್ಷೇಪಕ್ಕೆ ಕಾರಣವಾಗಿವೆ.

  ಬಿಜೆಪಿ ಕಾರ್ಪೊರೇಟರ್‌ನಿಂದ ದೂರು

  ಬಿಜೆಪಿ ಕಾರ್ಪೊರೇಟರ್‌ನಿಂದ ದೂರು

  ರಚ್ಚಕೊಂಡದ ಮಲ್ಕಜ್‌ಗಿರಿ ಬಿಜೆಪಿ ಕಾರ್ಪೊರೇಟರ್, ರಚ್ಚಕೊಂಡ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಗಾಯಕಿ ಮಂಗ್ಲಿ ವಿರುದ್ಧ ದೂರು ನೀಡಿದ್ದು, ''ಮಂಗ್ಲಿ ಬಿಡುಗಡೆ ಮಾಡಿರುವ ಹಾಡಿನಲ್ಲಿ ಹಿಂದು ದೇವತೆಯನ್ನು ಬೈದಿದ್ದಾರೆ. ಆ ಹಾಡು ಹಿಂದುಗಳ ಭಾವನೆಗೆ ಧಕ್ಕೆ ತರುತ್ತಿದೆ. ಹಾಗಾಗಿ ಈ ಕೂಡಲೇ ಮಂಗ್ಲಿ ವಿರುದ್ಧ ಕ್ರಮ ಕೈಗೊಳ್ಳಬೇಕು'' ಎಂದು ಒತ್ತಾಯಿಸಿದ್ದಾರೆ.

  ಸಾಮಾಜಿಕ ಜಾಲತಾಣದಲ್ಲಿ ಬಿಸಿ-ಬಿಸಿ ಚರ್ಚೆ

  ಸಾಮಾಜಿಕ ಜಾಲತಾಣದಲ್ಲಿ ಬಿಸಿ-ಬಿಸಿ ಚರ್ಚೆ

  ಮಂಗ್ಲಿಯ 'ಬೋನಂ ಪಾಟ'ದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಿಸಿ-ಬಿಸಿ ಚರ್ಚೆಗಳು ನಡೆಯುತ್ತಿವೆ. 'ಮಂಗ್ಲಿಗೆ ಜನಪ್ರಿಯತೆ ಹೆಚ್ಚಾದ ಕಾರಣ ಹೀಗೆ ದೇವರನ್ನು ಜರಿಯುವ ಕಾರ್ಯ ಮಾಡಿದ್ದಾರೆ' ಎಂದು ಕೆಲವರು ಆಕ್ಷೇಪಿಸಿದ್ದಾರೆ. ಇನ್ನು ಕೆಲವರು ಮಂಗ್ಲಿ ಹಾಡನ್ನು ಸಮರ್ಥಿಸಿಕೊಂಡಿದ್ದಾರೆ.

  ರಾಮಸ್ವಾಮಿ ಬರೆದಿರುವ ಹಾಡು

  ರಾಮಸ್ವಾಮಿ ಬರೆದಿರುವ ಹಾಡು

  ಜನಪದ ಹಾಡುಗಳಲ್ಲಿ ದೇವರನ್ನು ವಿಮರ್ಶೆ ಮಾಡುವುದು ಸಾಮಾನ್ಯ ಹಾಗಾಗಿ ಜನಪದ ಶೈಲಿಯಲ್ಲಿಯೇ ರಾಮಸ್ವಾಮಿ ಎಂಬುವರು ಹಾಡನ್ನು ಬರೆದಿದ್ದು, ಮಂಗ್ಲಿ ಹಾಡಿ ನರ್ತಿಸಿದ್ದಾರೆ. ಸಂಗೀತವನ್ನು ರಾಕೇಶ್ ವೆಂಕಟಾಪುರ ನೀಡಿದ್ದಾರೆ. ಹಾಡಿಗೆ ನೃತ್ಯ ಸಂಯೋಜನೆಯನ್ನು ಢೀ ಕಾರ್ಯಕ್ರಮ ಖ್ಯಾತಿಯ ಪಂಡು ಮಾಡಿದ್ದಾರೆ.

  English summary
  A BJP corporator of Rachakonda files complaint against singer Mangli for hurting Hindu sentiment by her new Bonala song.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X