ಅಣ್ಣಾವ್ರ ಹಾಡು ಹಾಡಿದ ಮೋಹನ್ ಲಾಲ್; ವೀಡಿಯೋ ಫುಲ್ ವೈರಲ್

ಡಾ. ರಾಜ್‌ಕುಮಾರ್ ನಟನೆಯ ಸಿನಿಮಾಗಳು ಮಾತ್ರವಲ್ಲ, ಆ ಸಿನಿಮಾಗಳ ಎಲ್ಲಾ ಹಾಡುಗಳು ಸೂಪರ್ ಹಿಟ್. ಇಂದಿಗೂ ಅಣ್ಣಾವ್ರ ಹಾಡುಗಳನ್ನು ಜನ ಗುನುಗುತ್ತಲೇ ಇದ್ದಾರೆ. 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಸಾರ್ವಭೌಮ ಬಣ್ಣ ಹಚ್ಚಿದ್ದರು. ಅಷ್ಟು ಸಿನಿಮಾಗಳಿಂದ ಸಾವಿರಕ್ಕೂ ಅಧಿಕ ಹಾಡುಗಳು ಬಂದಿರಬಹುದು ಎಲ್ಲವೂ ಹಿಟ್ ಅಂದ್ರೆ ಅತಿಯಶಯೋಕ್ತಿ ಅಲ್ಲ.

ಇನ್ನು ಮುತ್ತುರಾಜನಷ್ಟು ಸಕ್ಸಸ್‌ಫುಲ್ ಸಿನಿಮಾಗಳನ್ನು ಕೊಟ್ಟ ಮತ್ತೊಬ್ಬ ನಟ ಭಾರತೀಯ ಚಿತ್ರರಂಗದಲ್ಲೇ ಇಲ್ಲ. ಸಿನಿಮಾಗಳ ಸಕ್ಸಸ್‌ ವಿಚಾರದಲ್ಲೇ ಅಣ್ಣಾವ್ರೇ ಎಂದಿಗೂ ನಂಬರ್ ವನ್. ಅಮಿತಾಬ್ ಬಚ್ಚನ್, ರಜನಿಕಾಂತ್‌, ಚಿರಂಜೀವಿ ರೀತಿಯ ಸೂಪರ್ ಸ್ಟಾರ್‌ಗಳೇ ನಮ್ಮ ಅಣ್ಣಾವ್ರ ಅಭಿಮಾನಿಗಳಾಗಿಬಿಟ್ಟಿದ್ದಾರೆ. ಇನ್ನು ಮಾಲಿವುಡ್ ನಟ ಮೋಹನ್ ಲಾಲ್‌ಗೂ ರಸಿಕರ ರಾಜನ ಸಿನಿಮಾಗಳಂದ್ರೆ ಅಚ್ಚುಮೆಚ್ಉ.

A video of Mohanlal humming while watching a Dr Rajkumar s super hit song has gone viral

ಮೋಹನ್ ಲಾಲ್ ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆ 'ಮೈತ್ರಿ' ಚಿತ್ರದಲ್ಲಿ ನಟಿಸಿದ್ದರು. ಆ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಗಿರಿರಾಜ್ ನಿರ್ದೇಶನದ ಈ ಸೋಶಿಯಲ್ ಡ್ರಾಮಾ ಚಿತ್ರದಲ್ಲಿ ಮಹಾದೇವ್ ಗೊಡ್ಕೆ ಎನ್ನುವ ವಿಜ್ಞಾನಿ ಪಾತ್ರದಲ್ಲಿ ನಟಿಸಿದ್ದರು. ಈ ಸೋಶಿಯಲ್ ಡ್ರಾಮಾ ಚಿತ್ರದಲ್ಲಿ ಅಪ್ಪು- ಮೋಹನ್ ಲಾಲ್ ಜುಗಲ್‌ಬಂದಿ ಸಿನಿರಸಿಕರಿಗೆ ಇಷ್ಟವಾಗಿತ್ತು.

ಮೋಹನ್ ಲಾಲ್ ಅಣ್ಣಾವ್ರ ಸಿನಿಮಾಗಳು ಹಾಗೂ ಹಾಡುಗಳ ಅಭಿಮಾನಿ. ಮಾಲಿವುಡ್ ಕಂಪ್ಲೀಟ್ ಆಕ್ಟರ್ ಮೊಬೈಲ್‌ನಲ್ಲಿ ಅಣ್ಣಾವ್ರ ಹಾಡು ನೋಡುತ್ತಾ ಗುನುಗಿರುವ ವೀಡಿಯೋ ವೈರಲ್ ಆಗುತ್ತಿದೆ. 'ಎರಡು ಕನಸು' ಚಿತ್ರದ 'ಎಂದೆಂದೂ ನಿನ್ನನು ಮರೆತು ಬದುಕಿರಲಾರೆ' ಹಾಡನ್ನು ಮೋಹನ್‌ ಲಾಲ್ ನೋಡಿ ಗುನುಗಿರುವುದನ್ನು ನೋಡಬಹುದು. ಹಾಡಿನಲ್ಲಿ ಅಣ್ಣಾವ್ರ ಜೊತೆ ಮಂಜುಳಾ ಕಾಣಿಸಿಕೊಂಡಿದ್ದರು.

50 ವರ್ಷಗಳ ಹಿಂದೆ ತೆರೆಕಂಡಿದ್ದ 'ಎರಡು ಕನಸು' ಚಿತ್ರಕ್ಕೆ ದೊರ್- ಭಗವಾನ್ ಆಕ್ಷನ್ ಕಟ್ ಹೇಳಿದ್ದರು. ವಾಣಿ ಅವರು ಬರೆದ ಕಾದಂಬರಿ ಆಧರಿಸಿ ಸಿನಿಮಾ ಮೂಡಿ ಬಂದಿತ್ತು. ರಾಜನ್‌-ನಾಗೇಂದ್ರ ಸಂಗೀತದಲ್ಲಿ ಒಟ್ಟು 6 ಹಾಡುಗಳು ಮೂಡಿ ಬಂದಿದ್ದವು. ಪಿ. ಬಿ ಶ್ರೀನಿವಾಸ್ ಹಾಗೂ ವಾಣಿ ಜಯರಾಂ ಈ ಹಾಡಿಗೆ ದನಿಯಾಗಿದ್ದರು.

30 ವಾರಗಳ ಕಾಲ ಭರ್ಜರಿ ಪ್ರದರ್ಶನ ಕಂಡಿದ್ದ 'ಎರಡು ಕನಸು' ಸಿನಿಮಾ 1982ರಲ್ಲಿ ರೀ ರಿಲೀಸ್ ಆಗಿ ಶತದಿನೋತ್ಸವ ಆಚರಿಸಿತ್ತು. 2015ರಲ್ಲಿ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬಂದು ಸಿನಿಮಾ ಗಮನ ಸೆಳೆದಿತ್ತು. ಚಿತ್ರದ ಆಲ್ಬಮ್‌ ಕೂಡ ಸೂಪರ್ ಹಿಟ್ ಆಗಿತ್ತು. ಎಲ್ಲಾ ಹಾಡುಗಳಿಗೆ ಚಿ. ಉದಯಶಂಕರ್ ಸಾಹಿತ್ಯ ಬರೆದಿದ್ದರು.

ಅಣ್ಣಾವ್ರ ಹಾಡನ್ನು ಮಲಯಾಳಂ ನಟ ಮೋಹನ್ ಲಾಲ್ ಹಾಡುತ್ತಿರುವುದು ನೆಟ್ಟಿಗರ ಗಮನ ಸೆಳೆದಿದೆ. ವೀಡಿಯೋವನ್ನು ವೈರಲ್ ಮಾಡುತ್ತಿದ್ದಾರೆ.

More from Filmibeat

English summary
Mollywood actor Mohanlal sung Dr Rajkumar's super hit film song;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X