For Quick Alerts
  ALLOW NOTIFICATIONS  
  For Daily Alerts

  'ಸಖತ್' ರ‍್ಯಾಪ್ ಹಾಡಿನಲ್ಲಿ ಗೋಲ್ಡನ್ ಸ್ಟಾರ್‌ ಸಖತ್ ಕಿಕ್!

  |

  ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಸಿಂಪಲ್ ಸುನಿ ಕಾಂಬಿನೇಷನ್‌ ಮತ್ತೆ ಒಂದಾಗಿದೆ. ಅದು ಸಖತ್ ಚಿತ್ರದ ಮೂಲಕ. ಇವರ ಕಾಂಬಿನೇಷನ್‌ ಎನ್ನುವ ಕಾರಣಕ್ಕೇನೆ ಸಖತ್‌ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳು ಹುಟ್ಟಿ ಕೊಂಡಿವೆ. ಈ ಚಿತ್ರ ಪೋಸ್ಟರ್ ಹಾಗೂ ಹಾಡುಗಳ ಮೂಲಕ ಹೊಸತನ ತೋರಿಸಿದೆ. ನಟ ಗಣೇಶ್‌ಗೆ ತನ್ನದೇ ಆದ ಪ್ರೇಕ್ಷಕ ವರ್ಗ ಇದೆ. ಗಣೇಶ್ ಅವರ ಸಿನಿಮಾ ನೋಡಲು ಅವರ ಅಭಿಮಾನಿ ಬಳಗದ ಜೊತೆಗೆ ಪ್ರೇಕ್ಷಕರು ಕಾಯುತ್ತಾ ಇರುತ್ತಾರೆ. ಸದ್ಯ ದೊಡ್ಡ ಪರದೆ ಮೇಲೆ ಸಖತ್ ಸೌಂಡ್‌ ಮಾಡೋಕೆ 'ಸಖತ್‌' ಚಿತ್ರ ರೆಡಿ ಆಗಿದೆ. ಟೀಸರ್‌ ಬಳಿಕ ಈಗ ಚಿತ್ರದ ಟೈಟಲ್‌ ಹಾಡು ರಿಲೀಸ್‌ ಆಗಿದೆ.

  ರ್ಯಾಪರ್‌ ಆಗಿ ಮಿಂಚಿದ ನಟ ಗಣೇಶ್!

  ಗಣೇಶ್‌ ಚಿತ್ರಗಳಲ್ಲಿ ಸಾಮಾನ್ಯವಾಗಿ ಕಡ್ಡಾಯವಾಗಿ ಒಂದು ಹಿರೋ ಇಂಟ್ರೋಡಕ್ಷನ್ ಹಾಡು ಇದ್ದೇ ಇರುತ್ತೆ. ಯಾವ ಸಿನಿಮಾದಲ್ಲಿ ಹೇಗೆ ಗಣೇಶ್‌ ಅವರ ಗುಣಗಾನ ಮಾಡಲಾಗಿದೆ ಎನ್ನುವುದನ್ನು ನೋಡಲು ಅಭಿಮಾನಿಗಳು ಕಾಯುತ್ತಿರುತ್ತಾರೆ. ಗಣೇಶ್‌ ಸಿಕ್ಕಾಪಟ್ಟೆ ಆಕ್ಷನ್ ಅಥವಾ ಮಾಸ್‌ ಸಿನಿಮಾಗಳಿಗೆ ಎಂದೂ ಸೀಮಿಗತವಾಗಿಲ್ಲ. ಕಾಮಿಡಿ ಜಾನರ್‌ನ ಸಿನಿಮಾಗಳನ್ನೇ ಹೆಚ್ಚಾಗಿ ಮಾಡುತ್ತಾ ಬಂದಿದ್ದಾರೆ. ಸಖತ್‌ ಚಿತ್ರ ಕೂಡ ಕಾಮಿಡಿ ಜಾನರ್‌ ಸಿನಿಮಾ. ಅದರೆ ಈ ಚಿತ್ರದ ಇಂಟ್ರೋ ಹಾಡು ಕೊಂಚ ಡಿಫರೆಂಟ್ ಅಂತ ಹೇಳಬಹುದು. ಯಾಕೆಂದರೆ ಇದು ರ್ಯಾಪ್ ಹಾಡು.

  ನಟ ಗಣೇಶ್ ಈ ಹಾಡಿನಲ್ಲಿ ರ್ಯಾಪರ್‌ ಆಗಿ ಕಾಣಿಸಿಕೊಂಡಿದ್ದಾರೆ. ಮೈಕ್‌ ಹಿಡಿದು ಹಾಡುತ್ತಾರೆ. ಬಿಲ್ಡಪ್‌ ದೃಶ್ಯಗಳ ಮಧ್ಯೆ ಆಗಾಗ ಮಸ್ತ್‌ ಡ್ಯಾನ್ಸ್‌ ಕೂಡ ಮಾಡಿದ್ದಾರೆ. ನಟ ಗಣೇಶ್ ಈ ಹಾಡಿನಲ್ಲಿ ಕೊಂಚ ಹೆಚ್ಚಾಗಿಯೇ ಕುಣಿದಿರುವಂತೆ ಕಾಣುತ್ತದೆ. ಇಡೀ ಹಾಡು ಕಲರ್‌ ಫುಲ್‌ ಆಗಿ ಮೂಡಿ ಬಂದಿದೆ. ಗೋಲ್ಡನ್‌ ಸ್ಟಾರ್ ಗೋಲ್ಡನ್ ಬಣ್ಣದ ಕಾಸ್ಟ್ಯುಂನಲ್ಲಿ ಕಂಗೊಳಿಸಿದ್ದಾರೆ. ಈ ಹಾಡು ರ್ಯಾಪ್ ಶೈಲಿಯಲ್ಲಿ ಇರುವುದರಿಂದ, ಗಣೇಶ್‌ ಅವರ ಉಡುಗೆ ಸ್ಟೈಲಿಶ್ ಆಗಿದೆ. ನಾಲ್ಕು ವಿಭಿನ್ನ ಲುಕ್‌ಗಳಲ್ಲಿ ಗಣೇಶ್ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

  ಅವನದ್ದೇ ಕಾರುಬಾರು, ಅವನದ್ದೇ ದರ್ಬಾರು, ಎನ್ನುವ ಸಾಹಿತ್ಯ ನಾಯಕನ ಪಾತ್ರವನ್ನು ವರ್ಣಿಸುತ್ತದೆ. ವಿಶೇಷ ಅಂದರೆ ಈ ಹಾಡಿನ ಸಾಹಿತ್ಯವನ್ನು ಚಿತ್ರದ ನಿರ್ದೇಶಕ ಸಿಂಪಲ್‌ ಸುನಿ ಬರೆದಿದ್ದಾರೆ. ಸುನಿ ಜೊತೆಗೆ ಈ ಹಾಡಿಗೆ ರ್ಯಾಪ್‌ ಟಚ್‌ ಕೊಟ್ಟಿದ್ದು ಕನ್ನಡ ರ್ಯಾಪರ್‌ ಎಸ್‌.ಐ.ಡಿ ಟೀಂ. ಈ ಹಾಡು ಹಾಡಿರುವ ರ್ಯಾಪ್‌ ಗಾಯಕರು ಎಸ್.ಐ.ಡಿ ರ್ಯಾಪರ್, ಜೂಡಾ ಸ್ಯಾಂಡಿ, ಪಂಚಮ್‌ ಜೀವ. ಇನ್ನೂ ಜೂಡಾ ಸ್ಯಾಂಡಿ ಅವರದ್ದೆ ಮ್ಯೂಜಿಕ್‌ ಈ ಹಾಡಿಗೆ ಇದೆ. ಸದ್ಯ ರಿಲೀಸ್‌ ಆಗಿರುವ ಸಖತ್‌ ಚಿತ್ರದ ಟೈಟಲ್‌ ಟ್ರ್ಯಾಕ್‌ ಸದ್ದು ಮಾಡುತ್ತಾ ಇದೆ.

  ಈ ಹಿಂದೆ ರಿಲೀಸ್‌ ಆಗಿದ್ದ ಟೀಸರ್‌ ಚಿತ್ರದ ಬಗ್ಗೆ ಸಾಕಷ್ಟು ಕೌತುಕವನ್ನು ಉಂಟು ಮಾಡಿದೆ. ನಟ ಗಣೇಶ್ ಸ್ಟೈಲಿಶ್ ಲುಕ್, ನಿರ್ದೇಶಕ ಸುನಿ ಡೈಲಾಗ್ ಕಿಕ್ ಟೀಸರ್‌ನಲ್ಲಿ ನೋಡಿದವರಲ್ಲಿ ಕುತೂಹಲ ಹುಟ್ಟು ಹಾಕಿದ್ದು ಸುಳ್ಳಲ್ಲ. ಈಗ ಆ ಕುತೂಹಲವನ್ನು ಈ ಹಾಡು ಹೆಚ್ಚು ಮಾಡಿದೆ. ಈ ಚಿತ್ರದ ಮೂಲಕ ಮೊದಲ ಬಾರಿಗೆ ನಟ ಗಣೇಶ್ ಅಂಧನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಭಿನ್ನ ಸಂಭಾಷಣೆಯಿಂದಲೇ ಭಿನ್ನವಾಗಿ ನಿಲ್ಲುವ ಸುನಿ ಡೈಲಾಗ್ಸ್‌ ಟೀಸರ್‌ನಲ್ಲೆ ಕಿಕ್ ಕೊಟ್ಟಿದೆ. ಈ ಕಾಮಿಡಿ ಕಥಾ ಹಂದರದಲ್ಲಿ ಕಾಮಿಡಿ ಡೈಲಾಗ್ ಕಿಕ್‌ ಹೇಗಿರಲಿದೆ ಅನ್ನೋದನ್ನು ಟೀಸರ್ ಪರಿಚಯಿಸಿತ್ತು.

  Actor Ganesh Starrer Sakath Film Song Release

  ಸಿಂಪಲ್ ಸುನಿ ಓಂಕಾರ ಹಾಕಿರುವ ಸಖತ್ ಸಿನಿಮಾದಲ್ಲಿ ಮುಗುಳುನಗೆ ಹುಡುಗ ಗಣಿ ಅಂಧನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗಣೇಶ್ ಗೆ ಜೋಡಿಯಾಗಿ ನಟಿ ನಿಶ್ವಿಕಾ ನಾಯ್ಡು ಬಣ್ಣ ಹಚ್ಚಿದ್ದಾರೆ. ಕಾಮಿಡಿ ಜೊತೆಗೆ ಇದೊಂದು ಕ್ರೈಮ್ ಥಿಲ್ಲರ್ ಶೈಲಿಯ ಸಿನಿಮಾ. ಟಿವಿ ರಿಯಾಲಿಟಿ ಶೋ, ಮರ್ಡರ್ ಹಾಗೂ ಕೋರ್ಟ್ ಕೇಸ್ ಸುತ್ತ ಇಡೀ ಸಿನಿಮಾವನ್ನು ಎಣೆಯಲಾಗಿದೆ.

  English summary
  Actor Ganesh Stylish Performance In Title Track Of Sakath Film,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X