'ಹ್ಯಾಂಡ್ಸಪ್' ಬಳಿಕ ಮತ್ತೊಂದು ಹಾಡಿನ ಮೂಲಕ ಬಂದ್ರು ವಿಜಯ್ ಪ್ರಕಾಶ್-ಅಜನೀಶ್
ಸ್ಯಾಂಡಲ್ ವುಡ್ ನಲ್ಲಿ ಸದ್ಯ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಹ್ಯಾಂಡ್ಸಪ್ ಹಾಡು ಸಖತ್ ಸದ್ದು ಮಾಡುತ್ತಿದೆ. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮತ್ತು ಖ್ಯಾತ ಗಾಯಕ ವಿಜಯ್ ಪ್ರಕಾಶ್ ಕಾಂಬಿನೇಷನ್ ನಲ್ಲಿ ಬಂದ ಈ ಹಾಡು ಗಾಯ ಪ್ರಿಯರ ಹೃದಯ ಗೆದ್ದಿತ್ತು. ಈಗ ಮತ್ತದೆ ಕಾಂಬಿನೇಷನ್ ಮತ್ತೊಂದು ಸುಂದರ ಹಾಡಿನ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ.
ಹೌದು, ನಟ ಪ್ರಜ್ವಲ್ ದೇವರಜಾರ್ ಅಭಿನಯದ 'ಜಂಟಲ್ ಮನ್' ಚಿತ್ರದ ಬಹುನಿರೀಕ್ಷೆಯ ಮೆಲೋಡಿ ಹಾಡು ರಿಲೀಸ್ ಆಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ. "ಅರೆರೆ ಶುರುವಾಯಿತು....."ಎನ್ನುವ ಸಾಲುಗಳಿಂದ ಪ್ರಾರಂಭವಾಗುವ ಈ ಹಾಡು ಕೇಳೋಕೆ ಇಂಪಾಗಿದೆ.
ಅಂದ್ಹಾಗೆ ಈ ಹಾಡಿನ ಸುಂದರ ಸಾಲುಗಳು ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ರಚಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಇರುವ ಈ ಹಾಡಿಗೆ ವಿಜಯ್ ಪ್ರಕಾಶ್ ಧ್ವನಿ ನೀಡಿದ್ದಾರೆ. ಅಂದ್ಹಾಗೆ ಇತ್ತೀಚಿಗಷ್ಟೆ ರಿಲೀಸ್ ಆಗಿದ್ದ ಚಿತ್ರದ ಟ್ರೇಲರ್ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಧ್ರುವ ಸರ್ಜಾ ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದರು. ಜಂಟಲ್ ಮನ್ 'ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್' (ನಿದ್ರೆ ಮಾಡುವ ಕಾಯಿಲೆ) ಎಂಬ ರೋಗದಿಂದ ಬಳಲುತತಿರುವ ವ್ಯಕ್ತಿಯ ಕಥೆಯಾಗಿದೆ. 18 ಗಂಟೆ ನಿದ್ದೆ ಮಾಡುವುದು ಹಾಗೂ 6 ಗಂಟೆ ಮಾತ್ರ ಎಚ್ಚರ ಆಗಿರ್ತಾನೆ. ಅವನ ಜೀವನದಲ್ಲಿ ಏನೆಲ್ಲಾ ಆಗುತ್ತೆ ಎಂಬುದು ರೋಚಕ ಕಥೆ.
ಜಡೇಶ್ ಕುಮಾರ್ ಹಂಪಿ ನಿರ್ದೇಶನ ಮಾಡುತ್ತಿರುವ ಈ ಚಿತ್ರವನ್ನ ಗುರುದೇಶ ಪಾಂಡೆ ನಿರ್ಮಿಸಿದ್ದಾರೆ. ನಿಶ್ವಿಕಾ ನಾಯ್ಡು ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸಂಚಾರಿ ವಿಜಯ್, ಬೇಬಿ ಆರಾಧ್ಯ, ಭರತ್ ಕಲ್ಯಾಣ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ


Click it and Unblock the Notifications











