ಕ್ಯಾಬ್ ಡ್ರೈವರ್‌ಗಳಿಗಾಗಿ ತಮ್ಮ ಸಂಭಾವನೆ ಬಿಟ್ಟ 'ಪುನೀತ್ ರಾಜ್‌ಕುಮಾರ್'!
ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಹಾಡಿರುವ ಹೊಸದೊಂದು ಹಾಡು ರಿಲೀಸ್ ಆಗಿದೆ. ಕನ್ನಡದ 'ಯೆಲ್ಲೋ ಬೋರ್ಡ್' ಸಿನಿಮಾದ ಹಾಡನ್ನು ಪುನೀತ್ ರಾಜ್‌ಕುಮಾರ್ ಅವರು ಹಾಡಿದ್ದಾರೆ. ಆದರೆ ಈ ಹಾಡು ಎಲ್ಲಾ ಹಾಡುಗಳಿಂದ ಕೊಂಚ ವಿಭಿನ್ನವಾಗಿದೆ. ಪುನೀತ್ ರಾಜ್‌ಕುಮಾರ್ ಅವರು ಇದೇ ಮೊದಲ ಬಾರಿಗೆ ಹೀಗೊಂದು ಹಾಡು ಹಾಡಿದ್ದಾರೆ. ಹಾಗಾಗಿ ಪುನೀತ್ ಅವರ ವಾಯ್ಸ್ ಹಾಡಿನಲ್ಲಿ ತುಂಬಾ ವಿಭಿನ್ನ ಎನಿಸುತ್ತದೆ.
ಪುನೀತ್ ರಾಜ್‌ಕುಮಾರ್ ಅವರು ಮಾಡಿರುವ ಎಷ್ಟೋ ಉತ್ತಮ ಕೆಲಸಗಳಲ್ಲಿ ಇದು ಕೂಡ ಒಂದು ಎಂದು ಹೇಳಬಹುದು. ಯಾಕೆಂದರೆ ಪುನೀತ್ ರಾಜ್‌ಕುಮಾರ್ ಅವರು ಈ ಹಾಡು ಹಾಡಲು ಸಂಭಾವನೆ ಪಡೆದುಕೊಂಡಿಲ್ಲ. ಇದನ್ನು ಸಿನಿಮಾ ತಂಡ ಹೇಳಿಕೊಂಡಿದೆ. ಸಂಭಾವನೆ ಇಲ್ಲದೇ ಅಪ್ಪು ಯೆಲ್ಲೊ ಬೋರ್ಡ್ ಚಿತ್ರ ತಂಡಕ್ಕೆ ಅಪ್ಪು ಸಾಥ್ ನೀಡಿದ್ದಾರೆ.
ವಿಶೇಷ ಎಂದರೆ ಇದೊಂದು ರ‍್ಯಾಪ್ ಹಾಡು. ಈ ಮೂಲಕ ಪುನೀತ್ ರಾಜ್‌ಕುಮಾರ್ ಅವರು ಮೊದಲ ಬಾರಿಗೆ ರ‍್ಯಾಪ್ ಹಾಡು ಹಾಡಿದ್ದಾರೆ. ಈ ಹಾಡಿನಲ್ಲಿ ಟ್ಯಾಕ್ಸಿ ಓಡಿಸುವವರ ಜೀವನದ ಬಗ್ಗೆ ಹೇಳಲಾಗಿದೆ. ಸಮಾಜದಲ್ಲಿ ಟ್ಯಾಕ್ಸಿ ಓಡಿಸುವ ಡ್ರೈವರ್‌ಗಳು ಎಷ್ಟು ಮುಖ್ಯ ಎನ್ನುವುದನ್ನು ವರ್ಣಿಸಲಾಗಿದೆ. ಪುನೀತ್ ರಾಜ್‌ಕುಮಾರ್ ಅವರು ಹಾಡಿರುವ ಮೇಕಿಂಗ್ ಕೂಡ ಚಿತ್ರ ತಂಡ ರಿಲೀಸ್ ಮಾಡಿದೆ.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಶೀರ್ಷಿಕೆಯೇ ಹೇಳುವಂತೆ ಈ ಸಿನಿಮಾದಲ್ಲಿ ಕ್ಯಾಬ್ ಡ್ರೈವರ್‌ಗಳ ಕುರಿತಾದ ಕಥೆ ಇರಲಿದೆ. ಕ್ಯಾಬ್ ಡ್ರೈವರ್ ಪಾತ್ರದಲ್ಲಿ ನಟ ಪ್ರದೀಪ್ ಕಾಣಿಸಿಕೊಂಡಿದ್ದಾರೆ. ತ್ರಿಲೋಕ್ ರೆಡ್ಡಿ ನಿರ್ದೇಶನವಿದೆ. ವಿಂಟೇಜ್ ಫಿಲ್ಮ್ಸ್ ಬ್ಯಾನರ್ ಮೂಲಕ ಈ ಚಿತ್ರ ನಿರ್ಮಾಣ ಆಗಿದೆ. ಜೊತೆಗೆ ಅಹಲ್ಯಾ ಸುರೇಶ್, ಸ್ನೇಹಾ, ಚಂದನಾ, ಭವಾನಿ ಪ್ರಕಾಶ್ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ನಟ ಪ್ರದೀಪ್ 'ಟೈಗರ್' ಸಿನಿಮಾದ ಬಳಿಕ ಮಾಡುತ್ತಿರುವ ಸಿನಿಮಾ ಇದು. 'ಯೆಲ್ಲೋ ಬೋರ್ಡ್' ಸಿನಿಮಾದಲ್ಲಿ ಅನಗತ್ಯವಾಗಿ ಕಮರ್ಷಿಯಲ್ ಅಂಶಗಳನ್ನು ತುರುಕಿಲ್ಲ. ಹೀರೋಯಿಸಂ, ಡೈಲಾಗ್ಗಳೆಲ್ಲ ಕಥೆಗೆ ಪೂರಕವಾಗಿವೆ ಎನ್ನುತ್ತೆ ಚಿತ್ರತಂಡ.
ಕ್ಯಾಬ್ ಡ್ರೈವರ್ ಮ್ಯಾನರಿಸಮ್ ಅಳವಡಿಸಿಕೊಳ್ಳಲು ನಟ ಪ್ರದೀಪ್ ಸಾಕಷ್ಟು ಸಮಯ ತೆಗೆದುಕೊಂಡಿದ್ದಾರಂತೆ. ಡ್ರೈವರ್ಗಳನ್ನು ಹತ್ತಿರದಿಂದ ಗಮನಿಸಿದೆ, ಟ್ಯಾಕ್ಸಿ ಓಡಿಸಿ ರೂಢಿ ಮಾಡಿಕೊಂಡಿದ್ದಾರಂತೆ. ಇನ್ನು ಚಿತ್ರದಲ್ಲಿ ಕ್ಯಾಬ್ ಡ್ರೈವರ್ ಮನಸ್ಸು ಮಾಡಿದರೆ ಈ ಸಮಾಜವನ್ನು ಹೇಗೆ ಬದಲಾಯಿಸಬಹುದು ಎಂಬ ಕಾನ್ಸೆಪ್ಟ್ ಇದೆ.


Click it and Unblock the Notifications











