ಪುನೀತ್ ಹಾಡಿದ್ದ 'ರಾಂಬೋ 2' ಹಾಡು ಬಿಡುಗಡೆಯಾಯ್ತು
Recommended Video

'ರಾಂಬೋ 2' ಸಿನಿಮಾಗಾಗಿ ನಟ ಪುನೀತ್ ರಾಜ್ ಕುಮಾರ್ ಒಂದು ಹಾಡು ಹಾಡಿದ್ದರು. ಆ ಹಾಡು ಇದೀಗ ಬಿಡುಗಡೆಯಾಗಿದೆ. 'ಎಲ್ಲಿಕಾಣ್ ಎಲ್ಲಿಕಾಣೆನೋ ನನ್ ಹುಡುಗಿನಾ...' ಎಂಬ ಹಾಡಿಗೆ ಅಪ್ಪು ತಮ್ಮ ಪವರ್ ಫುಲ್ ಧ್ವನಿ ನೀಡಿದ್ದಾರೆ. ಇಂದು ಸಂಜೆ 4 ಗಂಟೆಗೆ ಯೂಟ್ಯೂಬ್ ನಲ್ಲಿ ಈ ಬಿಡುಗಡೆಯಾದ ಈ ಹಾಡು ಸದ್ಯಕ್ಕೆ 10 ಹೆಚ್ಚು ಜನರು ವೀಕ್ಷಿಸಿದ್ದಾರೆ.
ಈ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಯೋಗರಾಜ್ ಭಟ್ ಹಾಡಿನ ಸಾಹಿತ್ಯ ಬರೆದಿದ್ದಾರೆ. ಸದ್ಯ ಬಂದಿರುವ ಈ ಹಾಡಿನ ವಿಶೇಷ ಅಂದರೆ ಹಾಡಿನಲ್ಲಿ ಶರಣ್ ಜೊತೆಗೆ ಈ ಹಿಂದೆ ನಟಿಸಿದ್ದ ನಟಿ ಶೃತಿ ಹರಿಹರನ್, ಭಾವನ ರಾವ್, ಶುಭಾ ಪುಂಜಾ ಮತ್ತು ಸಂಚಿತಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ.
ಅಂದಹಾಗೆ, ಈ ಹಿಂದೆ ಸಿನಿಮಾದ ನಾಲ್ಕು ಹಾಡುಗಳು ಬಿಡುಗಡೆಯಾಗಿದ್ದು, ಆ ನಾಲ್ಕೂ ಹಾಡುಗಳು ಯೂಟ್ಯೂಬ್ ನಲ್ಲಿ ಸಂಚಲನವನ್ನು ಉಂಟು ಮಾಡಿದೆ. ಈಗಾಗಲೇ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿರುವ 'ರಾಂಬೋ 2' ಸಿನಿಮಾದ ಆಡಿಯೋಗೆ ಈಗ ಹೊಸ ಪವರ್ ಬಂದಿದೆ. ಇನ್ನು ಶರಣ್ ಹಾಡಿಗೆ ಪುನೀತ್ ಧ್ವನಿ ನೀಡಿರುವುದು ಇದೇ ಮೊದಲೇನಲ್ಲ. ಈ ಹಿಂದೆ 'ಅಧ್ಯಕ್ಷ' ಸಿನಿಮಾದ ಟೈಟಲ್ ಹಾಡನ್ನು ಪುನೀತ್ ಹಾಡಿದ್ದರು, ಅಷ್ಟೆ ಸೊಗಸಾಗಿ ಶರಣ್ ಹಾಡಿಗೆ ಹೆಜ್ಜೆ ಹಾಕಿದ್ದರು. ಆ ಹಾಡು ಸೂಪರ್ ಹಿಟ್ ಆಗಿತ್ತು.

'ರಾಂಬೋ' ಸಿನಿಮಾದ ಯಶಸ್ವಿನ ಬಳಿಕ 'ರಾಂಬೋ 2' ಹೆಸರಿನಲ್ಲಿ ಶರಣ್ ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಶರಣ್ ಜೋಡಿಯಾಗಿ ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದಾರೆ.
ಚಿತ್ರವನ್ನು ಅನಿಲ್ ನಿರ್ದೇಶನ ಮಾಡಿದ್ದಾರೆ ಮತ್ತು ತರುಣ್ ಸುಧೀರ್ ಚಿತ್ರದ ಕ್ರಿಯೇಟಿವ್ ಹೆಡ್ ಆಗಿದ್ದಾರೆ.


Click it and Unblock the Notifications











