For Quick Alerts
  ALLOW NOTIFICATIONS  
  For Daily Alerts

  ವಿಡಿಯೋ: ನಟ ಶರಣ್​ ಜೊತೆ ಗುರು ಶಿಷ್ಯರು ಹಾಡು ಹಾಡಿರುವ ಈ ಬಾಲೆ ಯಾರು ಗೊತ್ತಾ?

  |

  ಸ್ಯಾಂಡಲ್​ವುಡ್​ ನಟ ಶರಣ್​ ಅಭಿನಯದ ಗುರು ಶಿಷ್ಯರು ಚಿತ್ರ ರಿಲೀಸ್​ಗೆ ಸಿದ್ಧವಾಗಿದ್ದು, ಇದೇ ತಿಂಗಳು 23ರಂದು ತೆರೆ ಕಾಣಲು ಸಜ್ಜಾಗಿದೆ. ಕಿಶೋರ್​ ಸುಧೀರ್​ ನಿರ್ದೇಶಿಸಿರುವ ಗುರು ಶಿಷ್ಯರು ಚಿತ್ರದಲ್ಲಿ ನಿಶ್ವಿಕಾ ನಾಯ್ಡು ​ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ.

  ಚಿತ್ರದ ಟ್ರೈಲರ್​ ಕೂಡ ಈಗಾಗಲೇ ರಿಲೀಸ್​ ಆಗಿದ್ದು, ಸದ್ಯ ಸಿನಿ ಪ್ರಿಯರ ಚಿತ್ತ ಗುರು ಶಿಷ್ಯರು ಚಿತ್ರದ ಮೇಲಿದೆ. ಚಿತ್ರ ರಿಲೀಸ್​ಗೂ ಮುನ್ನವೇ ಚಿತ್ರದ ಹಾಡುಗಳು ಸಖತ್​ ಹಿಟ್​ ಆಗಿದ್ದು, ಆಣೆ ಮಾಡಿ ಹೇಳುತೀನಿ ಹಾಡಂತೂ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಚಿತ್ರದ ಪ್ರಚಾರದ ಕೆಲಸಗಳು ಅಂತಿಮ ಹಂತಕ್ಕೆ ಬಂದಿದ್ದು, ಇದೀಗ ವಿಶೇಷ ವ್ಯಕ್ತಿಯೊಬ್ಬರು ಗುರು ಶಿಷ್ಯರು ಚಿತ್ರವನ್ನು ಪ್ರಮೋಟ್​ ಮಾಡಿದ್ದಾರೆ. ಇನ್ನೂ ವಿಶೇಷ ಎಂಬಂತೆ ಸ್ವತಃ ಚಿತ್ರದ ನಾಯಕ ಶರಣ್​ ಈ ವ್ಯಕ್ತಿಯ ವಿಡಿಯೋ ಹಂಚಿಕೊಂಡಿದ್ದಾರೆ.

  ಶರಣ್​ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಪುಟಾಣಿ ಕಂದಮ್ಮ ತಮ್ಮ ತೊದಲು ನುಡಿಯಲ್ಲಿ ಗುರು ಶಿಷ್ಯರು ಚಿತ್ರದ ಆಣೆ ಮಾಡಿ ಹೇಳುತೀನಿ ಹಾಡು ಹಾಡಿದ್ದಾಳೆ. ಈ ವಿಡಿಯೋ ಹಂಚಿಕೊಂಡಿರುವ ಶರಣ್​," ಈ ಪುಟ್ಟ ಕಂದಮ್ಮ ನನ್ನ ತಮ್ಮನ ಮಗಳು..ಇನ್ನು ತೊದಲಾಡುವ ವಯಸ್ಸಿನಲ್ಲಿ ನನ್ನ ಮುಂದಿನ ಗುರು ಶಿಷ್ಯರು ಚಿತ್ರದ ಹಾಡನ್ನು ಹಾಡುವ ಮುದ್ದಾದ ಪ್ರಯತ್ನ ಮಾಡಿ ನನ್ನ ಮನಸ್ಸು ಮುಟ್ಟಿದ್ದಾಳೆ ಎಂದು ಬರೆದುಕೊಂಡಿದ್ದಾರೆ.

  ಇನ್ನು ಗುರು ಶಿಷ್ಯರು ಚಿತ್ರದ ಗುರುಗಳು ನಮ್ಮ ಗುರುಗಳು ಹಾಡು ಎಲ್ಲರ ಮನಸ್ಸು ತಲುಪಿದ್ದು, ಚಿತ್ರದ ಮತ್ತೊಂದು ಪ್ರೇರಣಾ ಪೂರ್ಣ ನಡೆ ಮುಂದೆಯೊಂದಿಗೆ ಹಾಡು ನಾಳೆ(ಸಪ್ಟೆಂಬರ್​ 15) ರಂದು ರಿಲೀಸ್​ ಆಗಲಿದೆ.

  ದೇಶಿಯ ಆಟ ಖೋಖೋವನ್ನು ಪ್ರಮುಖವಾಗಿಟ್ಟುಕೊಂಡು ಬರುತ್ತಿರುವ ಗುರು ಶಿಷ್ಯರು ಚಿತ್ರದ ಬಗ್ಗೆ ಪ್ರೇಕ್ಷಕರಿಗೆ ಬಹಳಷ್ಟು ನಿರೀಕ್ಷೆ ಇದೆ. ಇನ್ನು ಚಿತ್ರದಲ್ಲಿ ಬರುವ ಶಿಷ್ಯ ವೃಂದವೇ ಎಲ್ಲರ ಪ್ರಮುಖ ಆಕರ್ಷಣೆಯಾಗಿದ್ದು, ನೆನಪಿರಲಿ ಪ್ರೇಮ್​ ಪುತ್ರ ಏಕಾಂತ್​, ರವಿ ಶಂಕರ್​ ಪುತ್ರ ಸೂರ್ಯ, ಶರಣ್​ ಪುತ್ರ ಹೃದಯ್​, ನವೀನ್​ ಕೃಷ್ಣ ಪುತ್ರ ಹರ್ಷಿತ್​, ಬುಲೆಟ್​ ಪ್ರಕಾಶ್​ ಪುತ್ರ ರಕ್ಷಕ್​ ಹಾಗೂ ಶಾಸಕ ರಾಜೂ ಗೌಡ ಅವರ ಪುತ್ರ ಮಣಿಕಂಠ ಪ್ರಮುಖ ಪಾತ್ರದಲ್ಲಿ ಮಿಂಚಲು ಸಿದ್ಧರಾಗಿದ್ದಾರೆ

  English summary
  Actor Sharan Shares Little Girl Singing Kannada Movie Guru Shishyaru Song.
  Thursday, September 15, 2022, 10:40
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X