ಬಾಲಿವುಡ್‌ ಆಲ್ಬಂ ಹಾಡಿನಲ್ಲಿ ರಾಗಿಣಿ ದ್ವಿವೇದಿ ಡ್ಯಾನ್ಸ್‌!

ಡ್ರಗ್‌ ಕೇಸ್‌ನಲ್ಲಿ ಸುದ್ದಿ ಆಗಿದ್ದ ನಟಿ ರಾಗಿಣಿ ದ್ವಿವೇದಿ ಸದ್ಯ ಬಣ್ಣದ ಲೋಕಕ್ಕೆ ಮರಳಿದ್ದಾರೆ. ರಾಗಿಣಿ ಹೊಸ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಈಗ ರಾಗಿಣಿ ಬಾಲಿವುಡ್‌ನತ್ತ ಮುಖ ಮಾಡಿದ್ದಾರೆ. ಆಲ್ಬಂ ಹಾಡಿನ ಮೂಲಕ ರಾಗಿಣಿ ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ಈಗಾಗಲೇ ಆಲ್ಬಂ ಹಾಡಿನ ಚಿತ್ರೀಕರಣ ಮುಗಿದಿದೆ. ರಾಗಿಣಿ ಆಲ್ಬಂ ಹಾಡಿನ ಫೋಟೊಗಳನ್ನ ಹಂಚಿಕೊಂಡಿದ್ದಾರೆ.

ಈ ಹಾಡಿನಲ್ಲಿ ರಾಗಿಣಿಗೆ ಬಾಲಿವುಡ್‌ನ ಅರ್ಜುನ್ ಶರ್ಮಾ ಸಾಥ್ ನೀಡಿದ್ದಾರೆ. ಜೊತೆಗೆ ಹೆಸರಾಂತ ನೃತ್ಯ ಸಂಯೋಜಕ ವಿಷ್ಣು ಪ್ರಭು ಈ ಹಾಡಿಗೆ ಕೊರಿಯೋಗ್ರಾಫ್ ಮಾಡಿದ್ದಾರೆ. ಮುಂಬೈನ ಸುತ್ತಮುತ್ತ ಹಾಡಿನ ಚಿತ್ರೀಕರಣ ಮಾಡಲಾಗಿದೆ. ರಾಗಿಣಿ ದ್ವಿವೇದಿ ಮಾಡ್ರನ್ ಲುಕ್‌ನಲ್ಲಿ ಮಿಂಚಿದ್ದಾರೆ. ಈ ಹಾಡಿಗಾಗಿ ರುಧ್ರಾಕ್ಷ್‌ ದ್ವಿವೇದಿ ವಸ್ತ್ರ ವಿನ್ಯಾಸ ಮಾಡಿದ್ದಾರೆ.

actress ragini dwivedi in bollywood album song

ಚಿತ್ರರಂಗದಲ್ಲಿ ರಾಗಿಣಿ ದ್ವಿವೇದಿ ಸಕ್ರಿಯ!

ನಟಿ ರಾಗಿಣಿ ದ್ವಿವೇದಿ ಡ್ರಗ್ ಕೇಸ್‌ನಲ್ಲಿ ಜೈಲಿಗೆ ಹೋಗಿ ಬಂದ ನಂತರ ಕೆಲಕಾಲ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಈಗ ಮತ್ತೆ ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕನ್ನಡದಲ್ಲೂ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ತಿದ್ದಾರೆ. ನಟ ಶ್ರೇಯಶ್ ಕೆ. ಮಂಜು ಅಭಿನಯದ ರಾಣಾ ಸಿನಿಮಾದಲ್ಲಿ ಸ್ಪೆಷಲ್ ಹಾಡಿಗೆ ರಾಗಿಣಿ ಹೆಜ್ಜೆ ಹಾಕ್ತಿದ್ದಾರೆ. ಜೊತೆಗೆ ಒಂದಷ್ಟು ಹೊಸ ಚಿತ್ರಗಳ ಕಥೆಗಳನ್ನೂ ರಾಗಿಣಿ ಕೇಳುತ್ತಿದ್ದಾರೆ. ಸದ್ಯದಲ್ಲೇ ರಾಗಿಣಿ ಮುಂದಿನ ಸಿನಿಮಾ ಪ್ರಕಟ ಮಾಡುವ ಯೋಜನೆಯಲ್ಲಿದ್ದಾರೆ.

actress ragini dwivedi in bollywood album song

ಡ್ರಗ್ ಕೇಸ್‌ ಬಳಿಕ ರಾಗಿಣಿಗೆ ಸಿನಿಮಾ ಅವಕಾಶಗಳು ಕಡಿಮೆ ಆಗಿವೆ. ಆದರೆ, ಕನ್ನಡ ಚಿತ್ರರಂಗದಲ್ಲಿ ಒಂದಷ್ಟು ಹಿಟ್ ಸಿನಿಮಾಗಳನ್ನ ಕೊಟ್ಟ ಖ್ಯಾತಿ ರಾಗಿಣಿಗೆ ಇರುವುದರಿಂದ ಈಗಲೂ ತಮ್ಮ ಬೇಡಿಕೆಯನ್ನು ಉಳಿಸಿಕೊಂಡಿದ್ದಾರೆ.. ತುಪ್ಪಾ ಬೇಕಾ ತುಪ್ಪಾ ಅಂತ ಸಿನಿಪ್ರೇಮಿಗಳ ಮನಸ್ಸಲ್ಲಿ ಛಾಪು ಮೂಡಿಸಿದ್ದ ರಾಗಿಣಿ ಮತ್ತೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
actress ragini dwivedi in bollywood album song.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X