Don't Miss!
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- News
ಬೆಂಗಳೂರು: ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ಆರ್ಥಿಕ ಬಲ ತುಂಬಲಿದ್ದೇವೆ: ಸಿಎಂ ಬೊಮ್ಮಾಯಿ
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮೋಹಕ ತಾರೆ ರಮ್ಯಾ ಇತ್ತೀಚಿಗೆ ಹೆಚ್ಚು ಇಷ್ಟ ಪಟ್ಟ ಕನ್ನಡದ ಹಾಡಿದು
ಮೋಹಕ ತಾರೆ ರಮ್ಯಾ ಕನ್ನಡ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ. ಸ್ಯಾಂಡಲ್‌ವುಡ್ ಸಿನಿಮಾಗಳಲ್ಲಿ ನಟಿಸುತ್ತಿಲ್ಲ, ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿಲ್ಲ. ಸ್ಟಾರ್ಸ್ ಭೇಟಿಯಾಗಿರುವ ಬಗ್ಗೆಯೂ ಎಲ್ಲಿಯೂ ಮಾಹಿತಿ ಇಲ್ಲ. ಆದರೆ, ಕನ್ನಡ ಇಂಡಸ್ಟ್ರಿಯಲ್ಲಿ ನಡೆಯುವ ಬೆಳವಣಿಗೆಗಳನ್ನು ನಿರಂತರವಾಗಿ ಫಾಲೋ ಮಾಡ್ತಾರೆ.
ಅದರಲ್ಲೂ ಯಾವುದಾದರೂ ವಿಶೇಷವಾದ ಸಿನಿಮಾ ಬಂದ್ರೆ, ಟ್ರೈಲರ್-ಟೀಸರ್ ಬಿಡುಗಡೆಯಾದರೆ, ಹಾಡು ಯಾವುದಾದರೂ ರಿಲೀಸ್ ಆದರೆ ಅದರ ಬಗ್ಗೆ ಮೆಚ್ಚುಗೆಯ ಮಾತಗಳನ್ನಾಡುತ್ತಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಆ ಬಗ್ಗೆ ಬರೆದುಕೊಂಡು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಈಗ, ರಮ್ಯಾ ಅವರಿಗೆ ಕನ್ನಡದ ಹಾಡೊಂದು ಸಿಕ್ಕಾಪಟ್ಟೆ ಇಷ್ಟ ಆಗಿದೆ. 'ಇತ್ತೀಚಿನ ದಿನಗಳಲ್ಲಿ ಹೆಚ್ಚು ಇಷ್ಟಪಟ್ಟ ಹಾಡು ಇದು' ಎಂದು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಯಾವುದು ಆ ಹಾಡು? ಮುಂದೆ ಓದಿ...

'ನಿನ್ನ ಸನಿಹಕೆ' ಕವರ್ ಸಾಂಗ್
ಡಾ ರಾಜ್ ಕುಮಾರ್ ಮೊಮ್ಮಗಳು ಮೊದಲ ಸಲ ನಟಿಸುತ್ತಿರುವ ಚಿತ್ರ 'ನಿನ್ನ ಸನಿಹಕೆ'. ಈ ಸಿನಿಮಾದ ಕವರ್ ವರ್ಷನ್ ಹಾಡೊಂದು ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಈ ಹಾಡು ಈಗ ರಮ್ಯಾ ಅವರಿಗೂ ಹೆಚ್ಚು ಆಗಿದೆ. 'ಪ್ರಸ್ತುತ ನಾನು ಹೆಚ್ಚು ಇಷ್ಟ ಪಟ್ಟ ಹಾಡು ಇದು' ಎಂದು ಶೇರ್ ಮಾಡಿದ್ದಾರೆ.
ತಮಿಳು
ಚಿತ್ರರಂಗಕ್ಕೆ
ಕಾಲಿಟ್ಟ
ಡಾ
ರಾಜ್
ಕುಮಾರ್
ಮೊಮ್ಮಗಳು

ನೀ ಪರಿಚಯ...ಕವರ್ ವರ್ಷನ್
'ನಿನ್ನ ಸನಿಹಕೆ' ಸಿನಿಮಾದ 'ನೀ ಪರಿಚಯ....' ಕವರ್ ವರ್ಷನ್ ಹಾಡಿಗೆ ಚಿತ್ರದ ನಾಯಕ ಸೂರಜ್ ಗೌಡ - ನಾಯಕಿ ಧನ್ಯಾ ರಾಮ್ ಕುಮಾರ್ ದನಿಯಾಗಿದ್ದಾರೆ.. ನಾಯಕ-ನಾಯಕಿ ಹಾಡಿರುವ ಹಾಡಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದೆ. ಇದರ ಮೂಲ ಹಾಡನ್ನು ಸಿದ್ಧಾರ್ಥ್ ಬೆಲ್ಮಣ್ಣು, ರಕ್ಷಿತ್ ಸುರೇಶ್ ಹಾಡಿದ್ದಾರೆ. ವಾಸುಕಿ ವೈಭವ್ ಸಾಹಿತ್ಯ ಬರೆದಿದ್ದಾರೆ.

ರಾಜ್ ಮೊಮ್ಮಗಳ ಮೊದಲ ಚಿತ್ರ
ಡಾ ರಾಜ್ ಕುಮಾರ್ ಮಗಳು ಪೂರ್ಣಿಮಾ-ರಾಮ್ ಕುಮಾರ್ ದಂಪತಿಯ ಮಗಳು ಧನ್ಯಾ ರಾಮ್ ಕುಮಾರ್. ಧನ್ಯಾ ನಟಿಸಿರುವ ಮೊದಲ ಸಿನಿಮಾ ಇದು. ಸ್ವತಃ ಸೂರಜ್ ಗೌಡ ಈ ಚಿತ್ರ ನಿರ್ದೇಶಿಸಿ, ನಾಯಕನಾಗಿ ನಟಿಸಿದ್ದಾರೆ. ಸಿನಿಮಾ ಆರಂಭದಿಂದಲೂ ಬಹಳ ಕುತೂಹಲ ಮೂಡಿಸಿದೆ.
'ದಿ
ಫ್ಯಾಮಿಲಿ
ಮ್ಯಾನ್-2';
ಸಮಂತಾ
ನಟನೆಗೆ
ಮೋಹಕ
ತಾರೆ
ರಮ್ಯಾ
ಫಿದಾ

ಆಗಸ್ಟ್ 20ಕ್ಕೆ ತೆರೆಗೆ?
ಆಗಸ್ಟ್ 1 ರಂದು 'ನಿನ್ನ ಸನಿಹಕೆ' ಚಿತ್ರದ ಟ್ರೈಲರ್ ರಿಲೀಸ್ ಆಗುತ್ತಿದೆ. ವರಮಹಾಲಕ್ಷ್ಮಿ ಹಬ್ಬದ ವಿಶೇಷವಾಗಿ ಆಗಸ್ಟ್ 20 ರಂದು ರಾಜ್ಯಾದ್ಯಂತ ನಿನ್ನ ಸನಿಹಕೆ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ವೈಟ್ ಅಂಡ್ ಗ್ರೇ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಅಕ್ಷಯ್ ರಾಜಶೇಖರ್, ರಂಗನಾಥ್ ಕುಡ್ಲಿ ನಿರ್ಮಿಸಿದ್ದಾರೆ. ರಘು ದೀಕ್ಷಿತ್ ಸಂಗೀತ ಒದಗಿಸಿದ್ದಾರೆ.