ಹಿರಿತೆರೆ ಬಿಟ್ಟು ಕಿರುತೆರೆ ಸೇರಿದ್ರಾ ನಟಿ ಸಮಂತಾ!?: ರಿಯಾಲಿಟಿ ಶೋನಲ್ಲಿ ತೀರ್ಪು ಹೇಳೋಕೆ ಬಂದ್ರಾ?
'ಖುಷಿ' ಸಿನಿಮಾ ನಂತರ ನಟಿ ಸಮಂತಾ ರುತ್ ಪ್ರಭು ಸದ್ಯ ಸಿನಿಮಾಗಳಿಂದ ವಿರಾಮ ತೆಗೆದುಕೊಂಡಿದ್ದಾರೆ. ಹೀಗಾಗಿ ಸಿನಿಮಾ ಬಿಟ್ಟು ಜಾಹೀರಾತು ಮತ್ತು ಮಾಡಲಿಂಗ್‌ನಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಜೊತೆಗೆ ಆರೀಗ್ಯ ಮತ್ತು ಪ್ರವಾಸಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಇವುಗಳ ನಡುವೆ ನಟಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಹೌದು....ನಟಿ ಸಮಂತಾ ರುತ್ ಪ್ರಭು ಹಿರಿತೆರೆ ಬಳಿಕ ಈಗ ಕಿರುತೆರೆಯತ್ತ ಮುಖ ಮಾಡಿದ್ರಾ ಎಂಬ ಪ್ರಶ್ನೆಗಳು ಅಭಿಮಾನಿಗಳಲ್ಲಿ ಕಾಣಿಸುತ್ತಿದೆ. ಇದಕ್ಕೆ ಕಾರಣ ನಟಿ ಹಿಂದಿಯ ರ್ಯಾಪ್ ಶೋ ಒಂದರಲ್ಲಿ ತೀರ್ಪುಗಾರರ ಕುರ್ಚಿಯಲ್ಲಿ ಕುಳಿತಿರುವುದು. ಹಎಂಟಿವಿ ಯ ರಿಯಾಲಿಟಿ ಶೋನಲ್ಲಿ ಸಮಂತಾ ಕಾಣಿಸಿಕೊಂಡಿದ್ದಾರೆ.

ಎಂಟಿವಿಯಲ್ಲಿ ರಾಪರ್ ಬಾದ್‌ಶಾ ಜೊತೆಗೆ ಸಮಂತಾ
ಎಂಟಿವಿಯಲ್ಲಿ ರಿಯಾಲಿಟಿ ಶೋ MTV ಹಸ್ಲ್ ಸೀಸನ್ 3 ಪ್ರಸಾರವಾಗುತ್ತಿದೆ. ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಪ್ರೋಮೋ ಹಂಚಿಕೊಳ್ಳಲಾಗಿದ್ದು, ನಟಿ ಸಮಂತಾ ರುತ್ ಪ್ರಭು ರಾಪರ್ ಬಾದ್‌ಶಾ ಅವರೊಂದಿಗೆ ತೀರ್ಪುಗಾರರ ಕುರ್ಚಿಯಲ್ಲಿ ಕುಳಿತಿದ್ದಾರೆ. ಹೈದರಾಬಾದ್ ಸ್ಪರ್ಧಿ ಕೇಡೆನ್ ಶರ್ಮಾ ಅವರ ಹಿಪ್-ಹಾಪ್ ಬೀಟ್‌ಗಳನ್ನು ಎಂಜಾಯ್ ಮಾಡಿದ್ದಾರೆ. ಬಾದ್‌ಶಾ ಅವರೊಂದಿಗೆ ಕೇಳಿದ್ದಾರೆ.
ಖ್ಯಾತ ನಟಿಯಾಗಿರುವ ಸಮಂತಾ ರುತ್ ಪ್ರಭು ಅವರು ಕೇವಲ ನಟನೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಮಾತ್ರವಲ್ಲ, ಉಡುಪು ಬ್ರಾಂಡ್ ಸಾಕಿ ಮತ್ತು ಏಕಮ್ ಪ್ರಿ-ಸ್ಕೂಲ್ ಬಿಸಿನೆಸ್‌ನಂತಹ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ, ಅವರು ಆಹಾ ಒಟಿಟಿಯಲ್ಲಿ ಸ್ಯಾಮ್ ಜಾಮ್ ಮತ್ತು ಒಂದೆರಡು ಸಂದರ್ಶನಗಳನ್ನು ಹೋಸ್ಟ್ ಮಾಡಿದ್ದಾರೆ. ಹಾಗಾಗಿ ಹೊಸ ಹೊಸ ಕೆಲಸ, ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದು ಸಮಂತಾ ಅವರ ನೆಚ್ಚಿನ ಹವ್ಯಾಸಗಳಲ್ಲಿ ಒಂದು.
ರಿಯಾಲಿಟಿ ಶೋ ಜಡ್ಜ್ ಆದ್ರಾ ಸಮಂತಾ?
ಹಿಂದಿಯ 'ಫ್ಯಾಮಿಲಿ ಮ್ಯಾನ್ 2' ಸೀರಿಸ್ ಬಳಿಕ ನಟಿ ಸಮಂತಾ ಬಾಲಿವುಡ್‌ನಲ್ಲಿ ಹೆಚ್ಚು ಫಾಲೋವರ್ಸ್‌ಗಳನ್ನು ಗಳಿಸಿದ್ದರು. ಬಳಿಕ ಅವರು ಹೆಚ್ಚಿನ ಖ್ಯಾತ ನಟರೊಮದಿಗೆ ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಪುಷ್ಪ ಸಿನಿಮಾದ ಹಾಡಿನ ಬಳಿಕ ಅವರ ಫಾಲೋವರ್ಸ್‌ಗಳ ಸಂಖ್ಯೆ ಹೆಚ್ಚಾಗಿದ್ದು, ಇದೇ ಕಾರಣಕ್ಕೆ ಹಿಂದಿ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದಾರೆ.

ತಮ್ಮ ಆರೋಗ್ಯ ಸಮಸ್ಯೆಗಳ ನಡುವೇಯೇ ಸಿನಿಮಾ ಮಾಡುತ್ತಿದ್ದ ಅವರು ಈಗ ಬಿಡುವು ತೆಗೆದುಕೊಂಡಿದ್ದಾರೆ. ಈಗ ರಿಯಾಲಿಟಿ ಶೋಗೆ ತೀರ್ಪುಗಾರರಾಗಿರಲಿದ್ದಾರೆ. ಪಾಪ್ ತಾರೆ ಬಾದ್‌ಶಾ ಜೊತೆಗೆ ರಿಯಾಲಿಟಿ ಶೋ ಎಂಟಿವಿ ಹಸ್ಲ್‌ನ ಮುಂಬರುವ ಸಂಚಿಕೆಯಲ್ಲಿ ಸಮಂತಾ ಕಾಣಿಸಿಕೊಳ್ಳಲಿದ್ದಾರೆ. ಅತಿಥಿಯಾಗಿ ಹೋಗಿದ್ದಾರೆಯೇ ಅಥವಾ ಶೋ ಮುಗಿಯುವವರೆಗೂ ತೀರ್ಪುಗಾರರಾಗಿರುತ್ತಾರೆಯೇ ಎಂಬುದು ಖಚಿತವಾಗಿಲ್ಲ.
ಕಾರ್ಯಕ್ರಮದ ತೀರ್ಪುಗಾರರಾದ ರಾಪರ್ ಬಾದ್‌ಶಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸಮಂತಾ ಅವರೊಂದಿಗಿನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಫೋಟೋಗಳಲ್ಲಿ, ಸಮಂತಾ ಡೆನಿಮ್ ಕಾರ್ಸೆಟ್ ಟಾಪ್ ಮತ್ತು ಪ್ಯಾಂಟ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ. ಜೊತೆಗೆ ಅವರು ತೀರ್ಪುಗಾರರ ಕುರ್ಚಿಯಲ್ಲಿ ನಗುತ್ತಿರುವುದು ಮತ್ತು ವೇದಿಕೆಯ ಮೇಲೆ ಡ್ಯಾನ್ಸ್ ಮಾಡುತ್ತಿರುವುದು ಕಾಣಿಸಿದೆ.
ವೀಡಿಯೊದಲ್ಲಿ, ಸಮಂತಾ ಕಾರ್ಯಕ್ರಮದ ಸ್ಪರ್ಧಿಗಳಾದ, ಹಿಪ್-ಹಾಪ್ ಕಲಾವಿದರಾದ ಕೇಡೆನ್ ಮತ್ತು ವಿಜಯ್ ಅವರ ಸಕತ್ ರಾಪ್ ಅನ್ನು ಎಂಜಾಯ್ ಮಾಡಿದ್ದಾರೆ. ಜೊತೆಗೆ ಖುಷಿಯಿಂದ ಬಾದ್‌ಶಾ ಜೊತೆಗೆ ವೇದಿಕೆ ಮೇಲೆ ಹೆಜ್ಜೆ ಹಾಕಿದ್ದಾರೆ. ಎಂಟಿವಿ ಹಸ್ಲ್ ಸೀಸನ್ 3 ರ ಈ ವಾರಾಂತ್ಯದ ಸಂಚಿಕೆಗಳಲ್ಲಿ ಸಮಂತಾ ಕಾಣಿಸಿಕೊಳ್ಳಲಿದ್ದಾರೆ.


Click it and Unblock the Notifications











