ತೆಲುಗು ಪ್ರೇಕ್ಷಕರ ಹೃದಯ ಗೆದ್ದ ಕನ್ನಡದ 'ದುಬಾರಿ' ನಟಿ

ತೆಲುಗು ಚಿತ್ರರಂಗದಲ್ಲೀಗ ಕನ್ನಡದ ನಟಿಮಣಿಯರದ್ದೇ ಹವಾ. ಕನ್ನಡದ ಸಾಕಷ್ಟು ನಟಿಯರು ಟಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ತೆಲುಗು ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ. ಇತ್ತೀಚಿಗಷ್ಟೆ ಉಪ್ಪೆನಾ ಸಿನಿಮಾ ಮೂಲಕ ಕನ್ನಡ ಮೂಲದ ನಟಿ ಕೃತಿ ತೆಲುಗು ಪ್ರೇಕ್ಷಕರ ಮನಗೆದ್ದಿದ್ದಾರೆ.

ರಶ್ಮಿಕಾ ಮಂದಣ್ಣ, ನಭಾ ನಟೇಶ್, ಕೃತಿ ಶೆಟ್ಟಿ ಹೀಗೆ ತೆಲುಗಿನಲ್ಲಿ ಖ್ಯಾತಿಗಳಿಸಿರುವ ಕನ್ನಡದ ನಟಿಯರ ಸಾಲಿನಲ್ಲೀಗ ಸ್ಯಾಂಡಲ್ ವುಡ್ ನ ಮತ್ತೋರ್ವ ನಟಿ ಶ್ರೀಲೀಲಾ ಕೂಡ ಸೇರಿಕೊಂಡಿದ್ದಾರೆ. ಕನ್ನಡದಲ್ಲಿ ಕಿಸ್, ಭರಾಟೆ ಸಿನಿಮಾ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಶ್ರೀಲೀಲಾ ಇದೀಗ ತೆಲುಗು ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಮುಂದೆ ಓದಿ..

ನಟ ಶ್ರೀಕಾಂತ್ ಪುತ್ರನ ಜೊತೆ ಶ್ರೀಲಿಲಾ ಮಿಂಚಿಂಗ್

ನಟ ಶ್ರೀಕಾಂತ್ ಪುತ್ರನ ಜೊತೆ ಶ್ರೀಲಿಲಾ ಮಿಂಚಿಂಗ್

'ಪೆಳ್ಳಿ ಸಂದಡಿ' ಸಿನಿಮಾ ಮೂಲಕ ತೆಲುಗಿಗೆ ಕಾಲಿಟ್ಟ ನಟಿ ಶ್ರೀಲೀಲಾ ಇದೀಗ ರೊಮ್ಯಾಂಟಿಕ್ ಹಾಡಿನ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಶ್ರೀಲೀಲಾಗೆ ನಾಯಕನಾಗಿ ತೆಲುಗಿನ ಖ್ಯಾತ ನಟ ಶ್ರೀಕಾಂತ್ ಪುತ್ರ ರೋಶನ್ ಕಾಣಿಸಿಕೊಂಡಿದ್ದಾರೆ. ಈ ಜೋಡಿ ಈಗ ತೆಲುಗು ಪ್ರೇಕ್ಷಕರ ಆಕರ್ಷಣೆಯಾಗಿದೆ.

1996ರ ಸೂಪರ್ ಹಿಟ್ ಸಿನಿಮಾದ ಸೀಕ್ವೆಲ್

1996ರ ಸೂಪರ್ ಹಿಟ್ ಸಿನಿಮಾದ ಸೀಕ್ವೆಲ್

ಪೆಳ್ಳಿ ಸಂದಡಿ ಸಿನಿಮಾ 1996ರ ಸೂಪರ್ ಹಿಟ್ ಪೆಳ್ಳಿ ಸಂದಡಿ ಸಿನಿಮಾದ ಸೀಕ್ವೆಲ್ ಆಗಿದೆ. ಚಿತ್ರಕ್ಕೆ ಖ್ಯಾತ ನಿರ್ದೇಶಕ ರಾಘವೇಂದ್ರ ರಾವ್ ಆಕ್ಷನ್ ಕಟ್ ಹೇಳಿದ್ದರು. ಇದೀಗ ಸೀಕ್ವೆಲ್‌ಗೆ ಗೌರಿ ರೋನಂಕಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯ ಸಿನಿಮಾದಿಂದ ಬಿಡುಗಡೆಯಾಗಿರುವ ರೊಮ್ಯಾಂಟಿಕ್ ಲಿರಿಕಲ್ ಹಾಡಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಎಂ.ಎಂ ಕೀರವಾಣಿ ಸಂಗೀತ

ಎಂ.ಎಂ ಕೀರವಾಣಿ ಸಂಗೀತ

ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಎಂ.ಎಂ ಕೀರವಾಣಿ ಸಂಗೀತ ಸಂಯೋಜನೆ ಮಾಡಿದ್ದಾರೆ. ದೊಡ್ಡ ಮಟ್ಟದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಮೊದಲ ಹಾಡನ್ನು ಬಿಡುಗಡೆ ಮಾಡುವ ಮೂಲಕ ನಿರೀಕ್ಷೆ ಇಮ್ಮಡಿ ಮಾಡಿದೆ. ಅಂದಹಾಗೆ ನಟ ರೋಶನ್‌ಗೆ ಇದು ಮೊದಲ ಸಿನಿಮಾ ಇನ್ನು ನಟಿ ಶ್ರೀಲೀಲಾಗೂ ಇದು ಮೊದಲ ತೆಲುಗು ಸಿನಿಮಾ. ಹಾಗಾಗಿ ಈ ಸಿನಿಮಾ ಇಬ್ಬರಿಗೂ ತುಂಬಾ ವಿಶೇಷವಾಗಿದೆ.

ಕನ್ನಡದಲ್ಲೂ ಬ್ಯುಸಿ ಇರುವ ನಟಿ ಶ್ರೀಲಿಲಾ

ಕನ್ನಡದಲ್ಲೂ ಬ್ಯುಸಿ ಇರುವ ನಟಿ ಶ್ರೀಲಿಲಾ

ಈ ಸಿನಿಮಾ ಮೂಲಕ ಶ್ರೀಲಿಲಾ ತೆಲುಗಿನಲ್ಲೂ ಸ್ಟಾರ್ ನಟಿಯಾಗಿ ಗುರುತಿಸಿಕೊಳ್ಳುತ್ತಾಳಾ ಎನ್ನುವುದು ಅಭಿಮಾನಿಗಳ ಕುತೂಹಲ. ಸದ್ಯ ಕನ್ನಡದಲ್ಲಿ ಶ್ರೀಲಿಲಾ ಬೈಟು ಕಾಫಿ ಮತ್ತು ಧ್ರುವ ಸರ್ಜಾ ನಟನೆಯ ದುಬಾರಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಶ್ರೀಲೀಲಾ ಬ್ಯುಸಿಯಾಗಿದ್ದಾರೆ.

More from Filmibeat

English summary
Kannada Actress Sreeleela first telugu movie song release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X