For Quick Alerts
  ALLOW NOTIFICATIONS  
  For Daily Alerts

  'ನನ್ನೆ ಈಗ' ಎನ್ನುತಾ ಎಂಟ್ರಿಯಾದ 'ಚಾಂಪಿಯನ್' ಪ್ರತಾಪ್ ಟೋನಿ

  |

  ಕನ್ನಡ ನಟಿ ಅದ್ವಿತಿ ಶೆಟ್ಟಿ ಮತ್ತು ಹೊಸ ಪ್ರತಿಭೆ ಪ್ರತಾಪ್ ಟೋನಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ನನ್ನೆ ಈಗ.....' ಆಲ್ಬಂ ಹಾಡು ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

  ಇದೊಂದು ರೊಮ್ಯಾಂಟಿಕ್ ಸಾಂಗ್ ಆಗಿದ್ದು, ಸಂಗೀತ ಪ್ರಿಯರಿಗೆ ಇಷ್ಟವಾಗುವ ಎಲ್ಲಾ ಅಂಶಗಳನ್ನು ಈ ಹಾಡು ಹೊಂದಿದೆ. ಲಾಕ್‌ಡೌನ್‌ನಲ್ಲಿ ಸಿನಿಮಾಗಳಿಲ್ಲದೇ ನಿರಾಸೆಯಲ್ಲಿದ್ದ ಕನ್ನಡ ಕಲಾಭಿಮಾನಿಗಳಿಗೆ ''ನನ್ನೆ ಈಗ'' ಹಾಡು ರಂಜಿಸುವುದರಲ್ಲಿ ಅನುಮಾನ ಇಲ್ಲ.

  ರವಿ ಕುಮಾರ್ ಈ ಹಾಡಿಗೆ ಸಾಹಿತ್ಯ ರಚಿಸುವುದರ ಜೊತೆ ನಿರ್ದೇಶನ ಸಹ ಮಾಡಿದ್ದಾರೆ. ಭರಣ್ ಸಂಗೀತ ಸಂಯೋಜಿಸಿದ್ದು, ಚೇತನ್ ಕೆಎಸ್ ನಿರ್ಮಿಸಿದ್ದಾರೆ. ಪುದುಚೆರಿ ಮತ್ತು ಬೆಂಗಳೂರಿನ ಆಕರ್ಷಕ ಸ್ಥಳಗಳಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದ್ದು, ವಿಷ್ಣು ವಿರ್ತ ಕ್ಯಾಮೆರಾ ನಿರ್ವಹಿಸಿದ್ದಾರೆ.

  ಅಂದ್ಹಾಗೆ, ಈ ಹಾಡನ್ನು ಹಾಡಿರುವುದು ನಟ ಪ್ರತಾಪ್. ಮೂಲತಃ ಗಾಯಕನಲ್ಲದಿದ್ದರೂ ಹಾಡುವುದನ್ನು ಫ್ಯಾಷನ್ ಆಗಿ ತೆಗೆದುಕೊಂಡಿರುವ ಪ್ರತಾಪ್ ಖುದ್ದು ಹಾಡಿಗೆ ದನಿಯಾಗಿದ್ದಾರೆ. ಒಂದೊಳ್ಳೆ ಅವಕಾಶಕ್ಕಾಗಿ ಕಾಯುತ್ತಿರುವ ಪ್ರತಾಪ್ ಕನ್ನಡದ ಕೆಲವು ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

  ನಟನೆಯಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ಹೊಂದಿರುವ ಪ್ರತಾಪ್, ಓರ್ವ ಅಂತಾರಾಷ್ಟ್ರೀಯ ಕ್ರೀಡಾಪಟು. ಕಿಕ್ ಬಾಕ್ಸಿಂಗ್, ಮುಯ್‌ಥಾಯ್, ಕರಾಟೆ ಅಂತಹ ಮಾರ್ಷಲ್ಸ್ ಆರ್ಟ್ಸ್ ಕಲೆಯಲ್ಲಿ ಪರಿಣಿತಿ ಹೊಂದಿರುವ ಪ್ರತಾಪ್ ವಿದೇಶಗಳಲ್ಲಿ ನಡೆದ ಅನೇಕ ಟೂರ್ನಿಗಳಲ್ಲಿ ಗೆದ್ದು ಚಾಂಪಿಯನ್ ಪಟ್ಟ ಪಡೆದಿದ್ದಾರೆ.

  'Don't Blame ಬೆಂಗಳೂರು': ಮಹಾನಗರದ ಮಹತ್ವ ಹೇಳುವ ಹಾಡು'Don't Blame ಬೆಂಗಳೂರು': ಮಹಾನಗರದ ಮಹತ್ವ ಹೇಳುವ ಹಾಡು

  ಎಂಎ ಮುಗಿಸಿರುವ ಪ್ರತಾಪ್ ಟೋನಿ ಅಪ್ಪಟ ಬೆಂಗಳೂರಿನ ಹುಡುಗ. ಕನ್ನಡ ಚಿತ್ರರಂಗಕ್ಕೆ ಅನೇಕ ದಿಗ್ಗಜ ಕಲಾವಿದರನ್ನು ಕೊಡುಗೆಯಾಗಿರುವ ಕೊಟ್ಟಿರುವ ಬಸವನಗುಡಿ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿ.

  English summary
  Actress Adhvithi Shetty and Prathap Tony starrer 'Nanne Eega' album song released.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X