ಅದಿತಿ ಪ್ರಭುದೇವ ಹೊಸ ಪ್ರಯತ್ನ, ಅಕ್ಟೋಬರ್ 1ಕ್ಕೆ ಬಿಡುಗಡೆ
ಸತತ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್ ಬೇಡಿಕೆಯ ನಟಿ ಎನಿಸಿಕೊಳ್ಳುತ್ತಿರಿವ ಅದಿತಿ ಪ್ರಭುದೇವ ಈಗ ಹೊಸ ಪ್ರಯತ್ನ ಮಾಡಿದ್ದಾರೆ. ಧಾರಾವಾಹಿ ಆಯ್ತು, ಸಿನಿಮಾಗಳು ನಡೆಯುತ್ತಿದೆ, ಈ ನಡುವೆ ಮ್ಯೂಸಿಕ್ ಆಲ್ಬಮ್‌ಗೆ ಕೈ ಜೋಡಿಸಿದ್ದು, ಅಕ್ಟೋಬರ್ 1ಕ್ಕೆ ಪ್ರಥಮ ಮ್ಯೂಸಿಕ್ ಆಲ್ಬಮ್ ಬಿಡುಗಡೆಯಾಗುತ್ತಿದೆ.
ಈ ಆಲ್ಬಮ್‌ಗೆ 'ಪರ್ಫೆಕ್ಟ್ ಗರ್ಲ್' ಎಂದು ಹೆಸರಿಡಲಾಗಿದ್ದು, ಅಭಿ ಮಲ್ಟಿ ನಿರ್ಮಿಸಿದ್ದಾರೆ. ಸಾಹಿತ್ಯ ರಚಿಸಿ, ಅದಕ್ಕೆ ಕಂಪೋಸ್ ಸಹ ಮಾಡಿ ತಾವೇ ಹಾಡಿದ್ದಾರೆ ಅಭಿ ಮಲ್ಟಿ. ಆನಂದ್ ಆಡಿಯೋ ಯೂಟ್ಯೂಬ್ ಚಾನಲ್‌ನಲ್ಲಿ ಹಾಡು ರಿಲೀಸ್ ಆಗಲಿದೆ.
'ಪರ್ಫೆಕ್ಟ್ ಗರ್ಲ್' ಆಲ್ಬಮ್ ಸಾಂಗ್‌ನಲ್ಲಿ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದು, ಸಂಗೀತ ಪ್ರಿಯರು ಹಾಗೂ ಅದಿತಿ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ.

ಅಭಿಷೇಕ್ ಮಲ್ನಾಡ್ ಈ ಹಾಡಿಗೆ ಕೊರಿಯೋಗ್ರಫಿ ಮಾಡಿದ್ದು, ಶಿವಸೇನಾ ಕ್ಯಾಮೆರಾ ನಿಭಾಯಿಸಿದ್ದಾರೆ. ಬಸ್ಸಿಕ್ಸ್ ಹಿನ್ನೆಲೆ ಸಂಗೀತ ನೀಡಿದ್ದು, ಚಂದನ್ ಗೌಡ ಅದಿತಿಯ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ಇನ್ನು ಮಹೇಶ್ ಎಸ್ ಸಂಕಲನ ಇದೆ.
ಸತೀಶ್ ನೀನಾಸಂ ಜೊತೆ ನಟಿಸಿದ ಬ್ರಹ್ಮಚಾರಿ ಸಿನಿಮಾ ಕೊನೆಯದಾಗಿ ತೆರೆಕಂಡಿತ್ತು. ಅದಾದ ಬಳಿಕ ಸತತವಾಗಿ ಚಿತ್ರಗಳನ್ನು ಮಾಡುತ್ತಿರುವ ಅದಿತಿ ತೋತಾಪುರಿ, ತೋತಾಪುರಿ 2, ದಿಲ್ಮಾರ್, ಒಂಬತ್ತನೇ ದಿಕ್ಕು, ಚಾಂಪಿಯನ್, ಓಲ್ಡ್ ಮಂಕ್, ಗಜಾನನ ಗ್ಯಾಂಗ್ ಎನ್ನುವ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











