For Quick Alerts
  ALLOW NOTIFICATIONS  
  For Daily Alerts

  ಟ್ರೋಲಿಗೆ ಗುರಿಯಾಗಿದ್ದ ಗಾಯಕ ಆದಿತ್ಯ ತಿವಾರಿ ಮಿಸ್ಸಿಂಗ್; ಆತಂಕ ಮೂಡಿಸಿದ ಕೊನೆಯ ಪೋಸ್ಟ್

  |

  ಎಂ.ಸಿ ಕೋಡೆ ಹೆಸರಿನಿಂದ ಖ್ಯಾತಿಗಳಿಸಿದ್ದ ಬಾಲಿವುಡ್‌ನ ಖ್ಯಾತ ರ್‍ಯಾಪರ್ ಆದಿತ್ಯ ತಿವಾರಿ ಕಾಣೆಯಾಗಿದ್ದಾರೆ. ಮಗ ಕಾಣೆಯಾಗಿದ್ದಾನೆ ಎಂದು ತಾಯಿ ಮೆಹ್ರೌಲಿ ಪೊಲೀಸ್ ಸ್ಟೇಷನ್ ನಲ್ಲಿ ದೂರು ನೀಡಿದ್ದಾರೆ. ಕಳೆದ ಒಂದು ವಾರದಿಂದ ಆದಿತ್ಯ ಕಾಣಿಸುತ್ತಿಲ್ಲ ಎನ್ನುವ ಮಾಹಿತಿ ತಿಳಿದುಬಂದಿದೆ.

  22 ವರ್ಷದ ರ್‍ಯಾಪರ್ ಆದಿತ್ಯ ಇತ್ತೀಚಿಗೆ ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದ ಪೋಸ್ಟ್ ಸಿಕ್ಕಾಪಟ್ಟೆ ಟ್ರೋಲಿಗೆ ಗುರಿಯಾಗಿತ್ತು. 'ರ್‍ಯಾಪ ಬ್ಯಾಟಲ್' ಹೆಸರಿನ ವಿಡಿಯೋ ಹಂಚಿಕೊಂಡಿದ್ದರು. ಈ ವಿಡಿಯೋ ಪೋಸ್ಟ್ ಮಾಡಿದ ಬಳಿಕ ಆದಿತ್ಯ ಕಾಣಿಸುತ್ತಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ.

  ರ್‍ಯಾಪ್ ಸಂಗೀತವೆಂಬ ಕಡೆಯದ ಮಜ್ಜಿಗೆ: ಪೂರ್ವಾಗ್ರಹ ಬಿಟ್ಟು ನೋಡಿರ್‍ಯಾಪ್ ಸಂಗೀತವೆಂಬ ಕಡೆಯದ ಮಜ್ಜಿಗೆ: ಪೂರ್ವಾಗ್ರಹ ಬಿಟ್ಟು ನೋಡಿ

  ಆದಿತ್ಯ ತಿವಾರಿ ಕೊನೆಯದಾಗಿ ಇನ್ಸ್ಟಾಗ್ರಾಮ್‌ನಲ್ಲಿ, 'ಜೀವನದಲ್ಲಿ ನಿರಂತರ ನೋವುಗಳು ಮತ್ತು ಪರೀಕ್ಷೆಗಳು ನನ್ನನ್ನು ದುರ್ಬಲಗೊಳಿಸಿವೆ. ಯಮುನಾವನ್ನು ನೋಡುತ್ತಾ ಐಸೋಲೇಷನ್ ಬ್ರಿಡ್ಜ್ ಮೇಲೆ ನಿಂತಿದ್ದಾನೆ. ಯಾವುದಕ್ಕೂ ನಾನು ಯಾರನ್ನು ದೂಷಿಸುವುದಿಲ್ಲ. ನನ್ನ ಅಸ್ತಿತ್ವದಿಂದ ಪರಿಹಾರವು ಇಡೀ ದೇಶ ಬಯಸಿದ ಶಿಕ್ಷೆಯಾಗಿ ಕಾರ್ಯನಿರ್ವಹಿಸುತ್ತದೆ' ಎಂದು ಬರೆದುಕೊಂಡಿದ್ದರು.

  ಆದಿತ್ಯ ಕಣ್ಮರೆಯಾದಾಗಿನಿಂತ ಅವರ ಸ್ನೇಹಿತರು ಹುಡುಕುತ್ತಿದ್ದಾರೆ. ಆದರೆ ಎಲ್ಲೂ ಪತ್ತೆಯಾಗಿಲ್ಲ. ಆದಿತ್ಯ ಫೋನ್ ಸ್ವಿಚ್ ಆಫ್ ಆಗಿದ್ದು, ಸ್ನೇಹಿತರಿಗೆ, ಕುಟುಂಬದವರಿಗೆ ಆತಂಕ ಮನೆ ಮಾಡಿದೆ. ಆದಿತ್ಯ ಕೊನೆಯದಾಗಿ ದೆಹಲಿ ಮೂಲಕ ರ್‍ಯಾಪರ್ ಗೆ ಸಂದೇಶ ಕುಳುಹಿಸಿ, 'ನಾನು ಈ ದೇಹ ತೊರೆಯುತ್ತಿದ್ದೇನೆ. ನೀವು ಈ ಪರಂಪರೆಯನ್ನು ಮುಂದುವರೆಸಿ' ಎಂದಿದ್ದರಂತೆ.

  ಸದ್ಯ ಪೊಲೀಸರು ಅಪಹರಣ ಪ್ರಕರಣ ದಾಖಲಿಸಿಕೊಂಡಿದ್ದು, ಆದಿತ್ಯರನ್ನು ಹುಡುಕುತ್ತಿದ್ದಾರೆ. ಆದಿತ್ಯ ಫೋನ್ ಲೊಕೇಶನ್ ಕೊನೆಯದಾಗಿ ಮೇ 25ರಂದು ನೋಯ್ಡಾದಲ್ಲಿ ಕಂಡುಬಂದಿದೆ. ನಂತರ ಸ್ವಿಚ್ ಆಫ್ ಆಗಿದೆ. ಆದಿತ್ಯ ಸಾಮಾಜಿಕ ಮಾಧ್ಯಮದ ಬಗ್ಗೆ ಮಾಹಿತಿ ತಿಳಿಯಲು ಸೈಬರ್ ಮೊರೆಹೋಗಿದ್ದಾರೆ.

  ಆದಿತ್ಯ ಕಳೆದ ವಾರ ರ್‍ಯಾಪ ಬ್ಯಾಟಲ್ ಎನ್ನುವ ವಿಡಿಯೋ ಶೇರ್ ಮಾಡಿದ್ದರು. 17 ವರ್ಷದವರಾಗಿದ್ದಾಗ ಆದಿತ್ಯ ಮಾಡಿದ ವಿಡಿಯೋ ಇದಾಗಿದೆ. ಈ ವಿಡಿಯೋದಲ್ಲಿ ಆದಿತ್ಯ ಹಿಂದೂ ಧರ್ಮಕ್ಕೆ ಅಗೌರವ ತೋರುವ ಸಾಲುಗಳನ್ನು ಬಳಸಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು. ಜೊತೆಗೆ ಬೆದರಿಕೆ ಕರೆಗಳು ಬಂದಿತ್ತು ಎಂದು ಕೇಳಿಬಂದಿದೆ. ಬಳಿಕ ಕ್ಷಮೆಯಾಚಿಸಿದ್ದರು. ಇದೆಲ್ಲ ಬೆಳವಣಿಗೆಗಳ ಬಳಿಕ ಆದಿತ್ಯಾ ಕಾಣೆಯಾಗಿದ್ದಾರೆ.

  English summary
  After getting trolled famous Rapper Aditya Tiwari goes missing.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X