Aga Naga Song: ವಂದಿಯದೇವನ್- ಕುಂದವೈ ಪ್ರೇಮರಾಗ: ಪದೇ ಪದೇ ಕೇಳುವಂತಿದೆ ಕಾಯ್ಕಿಣಿ 'ಕಿರುನಗೆ'

ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್- 2' ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ. 5 ಭಾಷೆಗಳಲ್ಲಿ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಈ ಸೂಪರ್ ಹಿಟ್ ಸಿನಿಮಾ ಸೀಕ್ವೆಲ್ ತೆರೆಗೆ ಬರ್ತಿದೆ. ಎಲ್ಲಾ ಭಾಷೆಗಳಲ್ಲೂ ಸಾಂಗ್ ರಿಲೀಸ್ ಆಗಿದೆ. ಎ. ಆರ್. ರಹಮಾನ್ ಮ್ಯೂಸಿಕ್‌ನಲ್ಲಿ ಸಾಂಗ್ ಪದೇ ಪದೇ ಕೇಳುವಂತಿದೆ. ಕನ್ನಡದಲ್ಲಿ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ.

ಕಲ್ಕಿ ಕೃಷ್ಣಮೂರ್ತಿ ಬರೆದ 'ಪೊನ್ನಿಯಿನ್ ಸೆಲ್ವನ್' ಐತಿಹಾಸಿಕ ಕಥಾಹಂದರದ ಕಾದಂಬರಿ ಆಧರಿಸಿ ಈ ಚಿತ್ರವನ್ನು ಕಟ್ಟಿಕೊಡಲಾಗಿದೆ. ಅಂದಾಜು 500 ಕೋಟಿ ಬಜೆಟ್‌ನಲ್ಲಿ 2 ಭಾಗಗಳಾಗಿ ಸಿನಿಮಾ ಮೂಡಿ ಬರ್ತಿದೆ. ಕಳೆದ ವರ್ಷ ಸೆಪ್ಟೆಂಬರ್ 30ಕ್ಕೆ ಫಸ್ಟ್ ಪಾರ್ಟ್ ರಿಲೀಸ್ ಆಗಿ ಕಾಲಿವುಡ್‌ನಲ್ಲಿ ಸೂಪರ್ ಹಿಟ್ ಆಗಿತ್ತು. ಏಪ್ರಿಲ್ 28ಕ್ಕೆ ಸೀಕ್ವೆಲ್ ತೆರೆಗೆ ಬರ್ತಿದೆ. ಸಿನಿಮಾ ರಿಲೀಸ್‌ಗೆ ಇನ್ನು ಒಂದು ತಿಂಗಳು ಬಾಕಿ ಇರುವಂತೆ ಚಿತ್ರತಂಡ ಪ್ರಮೋಷನ್ ಶುರುವಾಗಿದೆ. ಅದರ ಭಾಗವಾಗಿ 'ಅಗ ನಗ' ಸಾಂಗ್ ರಿಲೀಸ್ ಆಗಿದೆ.

Aga Naga Lyrical Video from Ponniyin Selvan - 2 is out now

ಎ. ಆರ್‌. ರಹಮಾನ್ ಮೆಲೋಡಿ ಟ್ಯೂನ್‌ಗೆ ತಮಿಳಿನಲ್ಲಿ ಇಳಂಗೋ ಕೃಷ್ಣನ್ ಸಾಹಿತ್ಯ ಬರೆದಿದ್ದಾರೆ. ಶಕ್ತಿಶ್ರೀ ಗೋಪಾಲನ್ ವಾಯ್ಸ್‌ನಲ್ಲಿ ಸಾಂಗ್ ಕಿವಿಗೆ ಇಂಪು ಎನಿಸುತ್ತಿದೆ. ಚಿತ್ರದಲ್ಲಿ ವಾನರ್ ರಾಜ್ಯದ ಯುವರಾಜ ವಲ್ಲವರಾಯನ್ ವಂದಿಯದೇವನ್ ಹಾಗೂ ಚೋಳ ರಾಜ್ಯದ ಕುಂದವೈ ಯುವರಾಣಿ ಕುಂದವೈ ನಡುವಿ ಪ್ರೇಮ ಪ್ರಸಂಗದಲ್ಲಿ ಈ ಹಾಡು ಮೂಡಿ ಬರುತ್ತದೆ. ವಂದಿಯದೇವನ್ ಪಾತ್ರದಲ್ಲಿ ಕಾರ್ತಿ, ಕುಂದವೈ ಆಗಿ ತ್ರಿಷಾ ಮಿಂಚಿದ್ದಾರೆ. ಇಬ್ಬರ ಪಾತ್ರಗಳ ಕೊಲಾಜ್ ಗ್ರಾಫಿಕ್ಸ್ ಫೋಟೊಗಳನ್ನು ಸೇರಿಸಿ ಈ ಲಿರಿಕಲ್ ವಿಡಿಯೋ ಸಾಂಗ್ ಡಿಸೈನ್ ಮಾಡಿದ್ದಾರೆ.

ಕನ್ನಡದಲ್ಲಿ 'ಕಿರುನಗೆ' ಎಂದು ಶುರುವಾಗುವ ಹಾಡನ್ನು ರಕ್ಷಿತಾ ಸುರೇಶ್ ಹಾಡಿದ್ದಾರೆ. ಜಯಂತ್ ಕಾಯ್ಕಿಣಿ ಸಾಲುಗಳನ್ನು ಮತ್ತೆ ಮತ್ತೆ ಕೇಳುವಂತಿದೆ. ಉಳಿದ 4 ಭಾಷೆಗಳಿಗಿಂತ ಕನ್ನಡ ಸಾಂಗ್ ಕೇಳಲು ಹೆಚ್ಚು ಇಂಪಾಗಿದೆ. ಇದನ್ನು ಕೆಲ ತಮಿಳು ಪ್ರೇಕ್ಷಕರು ಕೂಡ ಒಪ್ಪಿಕೊಂಡಿದ್ದಾರೆ. ಕನ್ನಡದಲ್ಲಿ ಕಾಯ್ತಿಣಿ ಸಾಹಿತ್ಯಕ್ಕೆ ರಕ್ಷಿತಾ ಸುರೇಶ್ ದನಿ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸದ್ಯ ಮೊದಲ ಸಾಂಗ್‌ನಿಂದಲೇ 'ಪೊನ್ನಿಯಿನ್ ಸೆಲ್ವನ್'- 2 ಸಿನಿಮಾ ಗಮನ ಸೆಳೀತಿದೆ. ಇದೇ ತಿಂಗಳ ಕೊನೆಗೆ ಸಿನಿಮಾ ಟ್ರೈಲರ್ ಲಾಂಚ್ ಪ್ಲ್ಯಾನ ಮಾಡಲಾಗುತ್ತಿದೆ.

Aga Naga Lyrical Video from Ponniyin Selvan - 2 is out now

ಲೈಕಾ ಪ್ರೊಡಕ್ಷನ್ಸ್ ಹಾಗೂ ಮದ್ರಾಸ್ ಟಾಕೀಸ್ ಬ್ಯಾನರ್‌ನಲ್ಲಿ 'ಪೊನ್ನಿಯಿನ್ ಸೆಲ್ವನ್'- 2 ಸಿನಿಮಾ ನಿರ್ಮಾಣ ಆಗಿದೆ. ಎರಡೂ ಭಾಗವನ್ನು ಒಮ್ಮೆಲೆ ಶೂಟ್ ಮಾಡಿ ಮುಗಿಸಿತ್ತು ಚಿತ್ರತಂಡ. ಚಿತ್ರದಲ್ಲಿ ಚಿಯಾನ್ ವಿಕ್ರಂ, ಐಶ್ವರ್ಯ ರೈ, ಜಯಂ ರವಿ, ಪ್ರಕಾಶ್ ರೈ, ಶರತ್ ಕುಮಾರ್ ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಕಳೆದ ವರ್ಷ ತೆರೆಕಂಡ ಪ್ರೀಕ್ವೆಲ್‌ಗೆ ಕಾಲಿವುಡ್‌ನಲ್ಲಿ ಸೂಪರ್ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಕಲ್ಕಿ ಕೃಷ್ಣಮೂರ್ತಿ ಕಾದಂಬರಿ ಓದಿದವರೆಲ್ಲಾ ಸಿನಿಮಾ ನೋಡಲು ಮುಗಿಬಿದ್ದಿದ್ದರು.

ತಮಿಳುನಾಡಿನಲ್ಲಿ 'ಪೊನ್ನಿಯಿನ್ ಸೆಲ್ವನ್'- 1 ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆದರೂ ಉಳಿದ ಕಡೆಗಳಲ್ಲಿ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ. ಆಂಧ್ರ, ತೆಲಂಗಾಣದಂತಹ ದೊಡ್ಡ ಮಾರ್ಕೆಟ್‌ನಲ್ಲಿ ಚಿತ್ರಕ್ಕೆ ನೆಗೆಟಿವ್ ಟಾಕ್ ಬಂದಿತ್ತು. 'ಬಾಹುಬಲಿ' ರೇಂಜಿಗೆ ಊಹಿಸಿಕೊಂಡು ಥಿಯೇಟರ್‌ಗೆ ಹೋದವರಿಗೆ ನಿರಾಸೆ ಕಾದಿತ್ತು. ಇದೇ ಕಾರಣಕ್ಕೆ ಈ ಭಾರೀ ಚಿತ್ರವನ್ನು ದೊಡ್ಡಮಟ್ಟದಲ್ಲಿ ಪ್ರಮೋಷನ್ ಮಾಡಿ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಮುಖ್ಯವಾಗಿ ಹಿಂದಿ ಬೆಲ್ಟ್ ಮೇಲೆ ಮಣಿರತ್ನಂ ಅಂಡ್ ಟೀಂ ಕಣ್ಣಿಟ್ಟಿದೆ. ಏಪ್ರಿಲ್ 28ಕ್ಕೆ 'ಪೊನ್ನಿಯಿನ್ ಸೆಲ್ವನ್'- 2 ಸಿನಿಮಾ ತೆರೆಗ ಬರ್ತಿದೆ.

More from Filmibeat

English summary
Aga Naga Lyrical Video from Ponniyin Selvan - 2 is out now. Rakshita Suresh crooned the Kannada version of the song written by Jayant Kaikini. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X